ಆ್ಯಪ್ನಗರ

ಯುವತಿಯ ಅತ್ಯಾಚಾರ

ಯುವತಿಯೊಬ್ಬಳ ಕೈ, ಕಾಲು ಕಟ್ಟಿ ಹಾಕಿ ಯುವಕನೊಬ್ಬ ಅತ್ಯಾಚಾರ ಮಾಡಿರುವ ಘಟನೆ ವಾಡಿ ಪೊಲೀಸ್‌ ಠಾಣೆ ವ್ಯಾಪ್ತಿಯ ದೇವಾಪುರ ತಾಂಡಾದಲ್ಲಿ ನಡೆದಿದೆ.

Vijaya Karnataka 13 Oct 2018, 3:51 pm
ಕಲಬುರಗಿ : ಯುವತಿಯೊಬ್ಬಳ ಕೈ, ಕಾಲು ಕಟ್ಟಿ ಹಾಕಿ ಯುವಕನೊಬ್ಬ ಅತ್ಯಾಚಾರ ಮಾಡಿರುವ ಘಟನೆ ವಾಡಿ ಪೊಲೀಸ್‌ ಠಾಣೆ ವ್ಯಾಪ್ತಿಯ ದೇವಾಪುರ ತಾಂಡಾದಲ್ಲಿ ನಡೆದಿದೆ.
Vijaya Karnataka Web young girl raped
ಯುವತಿಯ ಅತ್ಯಾಚಾರ


ಅತ್ಯಾಚಾರಕ್ಕೆ ಒಳಗಾದ ಯುವತಿ ಅದೇ ತಾಂಡಾದ ತನ್ನ ಅಜ್ಜಿಯೊಂದಿಗೆ ಇರುತ್ತಿದ್ದಳು. ಆದರೆ, ತಾಂಡಾದ ಸುನೀಲ್‌ ಜಾದವ್‌ ಎನ್ನುವ ಯುವಕ ಅತ್ಯಾಚಾರ ಮಾಡಿದ್ದಾನೆ. ಈ ವೇಳೆ ಮನೆಯಲ್ಲಿ ಯಾರೂ ಸದಸ್ಯರು ಇರಲಿಲ್ಲ. ದುಡಿಯಲು ಮಹಾರಾಷ್ಟ್ರಕ್ಕೆ ಹೋಗಿದ್ದಾರೆ. ರಾತ್ರಿಯಲ್ಲಿ ಅನಾರೋಗ್ಯ ಪೀಡಿತ ಅಜ್ಜಿ ಮಾತ್ರ ಜತೆಯಲ್ಲಿದ್ದಳು. ಆದರೆ, ಆಕೆಯನ್ನು ಲೆಕ್ಕಿಸದೇ ಸುನೀಲ ಗುರುವಾರ ರಾತ್ರಿ ಮನೆಗೆ ಬಂದು ಕೈ ಕಾಲು ಕಟ್ಟಿ ಹಾಕಿ ಅತ್ಯಾಚಾರ ಮಾಡಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

ಆಕೆಯ ದೂರನ್ನಾಧರಿಸಿ ವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ