ಆ್ಯಪ್ನಗರ

ಕಲಬುರಗಿ: ಯುವತಿ ಸಾವು, ಅತ್ಯಾಚಾರದ ಶಂಕೆ ವ್ಯಕ್ತಪಡಿಸಿದ ಪಾಲಕರು

ಕಲಬುರಗಿಯಲ್ಲಿ ವಿದ್ಯಾರ್ಥಿನಿಯ ಶವ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದೀಗ ಸಾವಿನ ಬಗ್ಗೆ ಶಂಕೆ ವ್ಯಕ್ತವಾಗಿದೆ. ಪಾಲಕರು ಇದು ಅತ್ಯಾಚಾರ ಎಂದು ದೂರು ದಾಖಲಿಸಿದ್ದಾರೆ. ಪೊಲೀಸರ ತನಿಖೆಯಿಂದ ಸತ್ಯ ಹೊರಬೀಳಲಿದೆ.

Vijaya Karnataka Web 19 Mar 2020, 12:18 pm
ಕಲಬುರಗಿ: ನಗರದ ಹೊರ ವಲಯದ ಶರಣಸಿರಸಗಿ ತಾಂಡಾದಲ್ಲಿ ಪಿಯುಸಿ ವಿದ್ಯಾರ್ಥಿನಿಯೊಬ್ಬಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವುದಾಗಿ ಪಾಲಕರು ದೂರು ನೀಡಿದ್ದಾರೆ. ಆದರೆ, ಮರಣೋತ್ತರ ವರದಿ ಬಂದ ಬಳಿಕ ಸತ್ಯ ಏನು ಎಂಬುದು ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Vijaya Karnataka Web womens


ಮಂಗಳವಾರ ವಿದ್ಯಾರ್ಥಿನಿಯ ಶವ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ತಮ್ಮ ಮಗಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಪಾಲಕರು ನೀಡಿರುವ ದೂರಿನ ಅನ್ವಯ ನಗರ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ. ಮರಣೋತ್ತರ ವರದಿಯನ್ನು ಎಸ್‌ಎಫ್‌ಎಲ್‌ ವರದಿಗಾಗಿ ಕಳುಹಿಸಲಾಗಿದೆ. ವರದಿ ಬಂದ ಬಳಿಕವೇ ಘಟನೆ ಕುರಿತು ಮಾಹಿತಿ ನೀಡಲು ಸಾಧ್ಯ ಎಂದು ಮಹಿಳಾ ಪೊಲೀಸ್‌ ಠಾಣೆಯ ಸಿಪಿಐ ಸಂಗಮೇಶ ಪಾಟೀಲ ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ.

ಅತ್ಯಾಚಾರದ ಶಂಕೆ: ಘಟನೆಯಲ್ಲಿ ಯುವತಿಯ ದೇಹದ ಮೇಲೆ ಆಗಿರುವ ಸುಟ್ಟ ಗಾಯಗಳು ನೋಡಿದರೆ ಇದೊಂದು ಗುಂಪಿನ ಕಾರ್ಯಾಚರಣೆ ಇರುವ ಸಾಧ್ಯತೆಯಿದೆ. ಘಟನೆ ನೋಡಿದ ವ್ಯಕ್ತಿಗಳು ಯಾರೂ ಇಲ್ಲ. ಘಟನೆ ಯಾರು ಮಾಡಿದ್ದಾರೆ ಎನ್ನುವುದು ತಿಳಿದಿಲ್ಲ. ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿ ಕೊಲೆ ತನಿಖೆಗೆ ಆಗ್ರಹ

ಯುವತಿಯನ್ನು ಅತ್ಯಾಚಾರಗೈದು ಹಿಂಸಿಸಿ ಕೊಲೆ ಮಾಡಲಾಗಿದ್ದು ಈ ಕುರಿತು ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಬೇಕು ಎಂದು ಜನವಾದಿ ಮಹಿಳಾ ಸಂಘಟನೆ ಮತ್ತು ಪ್ರಜ್ಞಾ ಕಾನೂನು ಸಲಹಾ ಸಮಿತಿ ಸಂಘಟನೆಗಳು ಆಗ್ರಹಿಸಿವೆ. ಪೋಷಕರು ಹೊಲಕ್ಕೆ ಹೋದಾಗ ಯುವತಿ ಒಬ್ಬಳೆ ಇದ್ದಿರುವುದನ್ನು ನೋಡಿ ದುರುಳರು ಈ ಕೃತ್ಯ ಎಸಗಿರಬಹುದು ಎಂಬುದು ಪೋಷಕರ ಹೇಳಿಕೆಯಾಗಿದೆ. ಯುವತಿಯನ್ನು ವಿಕೃತವಾಗಿ ಹಿಂಸಿಸಿ ಕೊಂದಿರುವ ಎಲ್ಲಚಿನ್ಹೆಗಳು ಶರೀರದ ಮೇಲೆ ಕಂಡುಬಂದಿದೆ. ಆದ್ದರಿಂದ ಕುರಿತು ತನಿಖೆ ಮಾಡಬೇಕು. ಜಿಲ್ಲಾಆಡಳಿತ ಕೂಡಲೇ ಯುವತಿ ಅತ್ಯಾಚಾರಗೈದು ಕೊಲೆ ಮಾಡಿದವರನ್ನು ಪತ್ತೆ ಮಾಡಿ ಕ್ರಮಕೈಗೊಳ್ಳಬೇಕು ಎಂದು ಜೆಎಂಎಸ್‌ ರಾಜ್ಯ ಉಪಾಧ್ಯಕ್ಷ ಕೆ.ನೀಲಾ, ಡಾ.ಮೀನಾಕ್ಷಿ ಬಾಳಿ, ಜಿಲ್ಲಾಧ್ಯಕ್ಷೆ ಅಮೀನಾ ಬೇಗಂ, ಜಿಲ್ಲಾಕಾರ್ಯದರ್ಶಿ ನಂದಾದೇವಿ ಮಂಗೋಡಿ, ಜಗದೇವಿ ನೂಲಕರ್‌, ಚಂದಮ್ಮ ಗೋಳಾ, ಅಶ್ವಿನಿ ಮದನಕರ್‌ ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ