ಆ್ಯಪ್ನಗರ

ಯೂತ್‌ ಎಂಪಾವರ್‌ಮೆಂಟ್‌ ಪ್ಲಾಟ್‌ಫಾರಂ ಶೀಘ್ರ

ರಾಜ್ಯ ಸರಕಾರ ಯೂತ್‌ ಎಂಪಾವರ್‌ಮೆಂಟ್‌ ಪ್ಲಾಟ್‌ಫಾರಂ (ಯುವ ಸಬಲೀಕರಣ ವೇದಿಕೆ) ರಚಿಸುತ್ತಿದ್ದು, ರಾಜ್ಯದ ಪ್ರತಿ ಪ್ರೌಢಶಾಲೆಯ ಒಬ್ಬ ನುರಿತ ಶಿಕ್ಷಕರನ್ನು ನೇಮಿಸುವ ಮೂಲಕ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣ, ಕೌಶಲ, ಕೌನ್ಸೆಲಿಂಗ್‌ ಹಾಗೂ ಉದ್ಯೋಗಗಳ ಸಂಪೂರ್ಣ ಮಾಹಿತಿ ನೀಡುವ ವ್ಯವಸ್ಥೆ ಪರಿಚಯಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಸಿ.ಎನ್‌. ಹೇಳಿದರು.

Vijaya Karnataka 25 Feb 2020, 5:00 am
ಕಲಬುರಗಿ: ರಾಜ್ಯ ಸರಕಾರ ಯೂತ್‌ ಎಂಪಾವರ್‌ಮೆಂಟ್‌ ಪ್ಲಾಟ್‌ಫಾರಂ (ಯುವ ಸಬಲೀಕರಣ ವೇದಿಕೆ) ರಚಿಸುತ್ತಿದ್ದು, ರಾಜ್ಯದ ಪ್ರತಿ ಪ್ರೌಢಶಾಲೆಯ ಒಬ್ಬ ನುರಿತ ಶಿಕ್ಷಕರನ್ನು ನೇಮಿಸುವ ಮೂಲಕ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣ, ಕೌಶಲ, ಕೌನ್ಸೆಲಿಂಗ್‌ ಹಾಗೂ ಉದ್ಯೋಗಗಳ ಸಂಪೂರ್ಣ ಮಾಹಿತಿ ನೀಡುವ ವ್ಯವಸ್ಥೆ ಪರಿಚಯಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಸಿ.ಎನ್‌. ಹೇಳಿದರು.
Vijaya Karnataka Web youth empowerment platform
ಯೂತ್‌ ಎಂಪಾವರ್‌ಮೆಂಟ್‌ ಪ್ಲಾಟ್‌ಫಾರಂ ಶೀಘ್ರ


ಸೋಮವಾರ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ಮೂರು ಹೊಸ ಕೊಠಡಿಗಳನ್ನು ಉದ್ಘಾಟಿಸಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ವೇಳೆ ಈ ಮಾಹಿತಿ ನೀಡಿದರು.

ಈಗಾಗಲೇ ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ1300 ಹೊಸ ಶಿಕ್ಷಕರು ಹಾಗೂ 400 ಪ್ರಾಂಶುಪಾಲರನ್ನು ನೇಮಿಸಿಕೊಳ್ಳಲು ಕ್ರಮಕೈಗೊಳ್ಳಲಾಗಿದೆ. ಅದೇರೀತಿ, ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಶಿಕ್ಷಕ ಸ್ನೇಹಿ ಹಾಗೂ ವಿದ್ಯಾರ್ಥಿ ಸ್ನೇಹಿ ವಾತಾವರಣ ನಿರ್ಮಿಸಲಾಗುತ್ತಿದೆ ಎಂದರು.

ಸಂವಾದ ಕಾರ್ಯಕ್ರಮದಲ್ಲಿಕೆಲವು ವಿದ್ಯಾರ್ಥಿಗಳು ಕಾಲೇಜಿನಲ್ಲಿಕಾಡುತ್ತಿರುವ ಮೂಲಭೂತ ಸಮಸ್ಯೆಗಳ ಕುರಿತು ಸಚಿವರ ಗಮನಕ್ಕೆ ತಂದರು. ವಿದ್ಯಾರ್ಥಿನಿಯೊಬ್ಬರು ಮಾತನಾಡಿ, ಕಾಲೇಜಿನಲ್ಲಿಕುಡಿಯುವ ನೀರು ಹಾಗೂ ಶೌಚಾಲಯ ಸಮಸ್ಯೆಯಿದೆ. ಆದಷ್ಟು ಶೀಘ್ರ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿಕಲಬುರಗಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ನಂದಗಿ ರಾಚಪ್ಪ ಮಾತನಾಡಿ, ಕೊಠಡಿಗಳ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವಲ್ಲಿಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವಿಳಂಬ ಮಾಡುತ್ತಿದೆ. ಇತ್ತೀಚೆಗೆ ಕಟ್ಟಡವನ್ನು ಕಾಲೇಜಿನ ಆಡಳಿತ ಮಂಡಳಿಗೆ ಹಸ್ತಾಂತರಿಸಿದ್ದು, ಶೌಚಾಲಯದ ಕೊಠಡಿಗಳ ನಿರ್ಮಾಣ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಿದೆ ಎಂದರು.

ಈ ಸಂದರ್ಭದಲ್ಲಿಮಾತನಾಡಿದ ಡಿಸಿಎಂ, ಉ±ಕಾಲೇಜಿಗೆ ಎಲ್ಲಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. 15 ದಿನದೊಳಗೆ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಕಟ್ಟುನಿಟ್ಟಾಗಿ ನಿರ್ದೇಶನ ನೀಡಿದರು.

ಕಟ್ಟಡ ಕಾಮಗಾರಿ ಗುತ್ತಿಗೆದಾರರನ್ನು ಕರೆಸಿ, ತ್ವರಿತವಾಗಿ ಸಮಸ್ಯೆಯನ್ನು ಬಗೆಹರಿಸಬೇಕು. ಹಾಗೆಯೇ ಸಿ.ಸಿ.ರಸ್ತೆ ನಿರ್ಮಿಸಬೇಕು ಎಂದು ಡಾ.ಅಶ್ವತ್ಥ ನಾರಾಯಣ ಪ್ರಾಂಶುಪಾಲ ಡಾ.ನಂದಗಿ ರಾಚಪ್ಪ ಅವರಿಗೆ ತಾಕೀತು ಮಾಡಿದರು. ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಸಹ ಕ್ರಮವಹಿಸಬೇಕು ಎಂದು ಅವರು ಸೂಚಿಸಿದರು.

ಕಲಬುರಗಿ ಸಂಸದ ಡಾ.ಉಮೇಶ್‌ ಜಾಧವ್‌, ಶಾಸಕರಾದ ದತ್ತಾತ್ರೇಯ ಸಿ.ಪಾಟೀಲ್‌ ರೇವೂರ, ಬಸವರಾಜ ಮತ್ತಿಮೂಡ, ಡಾ.ಅವಿನಾಶ್‌ ಜಾಧವ್‌, ಮಾಜಿ ವಿಧಾನ ಪರಿಷತ್‌ ಸದಸ್ಯ ಶಶಿಲ್‌ ಜಿ. ನಮೋಶಿ, ಬಿಜೆಪ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಹಾಗೂ ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು.

ಉದ್ಘಾಟನೆಗೂ ಮೊದಲೇ ಬಿರುಕು
ಕಲಬುರಗಿಯ ಸೇಡಂ ರಸ್ತೆಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಹೊಸದಾಗಿ ನಿರ್ಮಿಸಲಾಗಿರುವ ಮೂರು ಹೊಸ ಕೊಠಡಿಗಳನ್ನು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಅವರು ಸೋಮವಾರ ಲೋಕಾರ್ಪಣೆ ಮಾಡಿದ್ದಾರೆ. ದುರಂತವೆಂದರೆ, ಸಚಿವರು ಉದ್ಘಾಟನೆ ಮಾಡುವುದಕ್ಕೂ ಮೊದಲೇ ಹೊಸ ಕೋಣೆಗಳ ಗೋಡೆಗಳಲ್ಲಿಬಿರುಕುಗಳು ಮೂಡಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ