ಆ್ಯಪ್ನಗರ

ಸ್ಟಾರ್‌ ಸುವರ್ಣದಲ್ಲಿ ನಾಳೆಯಿಂದ ಪಾರ್ವತಿ ಅವತಾರ

'ಹರಹರ ಮಹಾದೇವ' ಧಾರಾವಾಹಿಯ 50 ಕಂತುಗಳನ್ನು ಈಗಾಗಲೇ ಪ್ರಸಾರ ಮಾಡಿರುವ 'ಸ್ಟಾರ್‌ ಸುವರ್ಣ' ವಾಹಿನಿಯಲ್ಲಿ ಅ.17ರ ಸೋಮವಾರದಿಂದ ರಾತ್ರಿ 7.30ಕ್ಕೆ ಪಾರ್ವತಿಯ ಅವತಾರದ ವಿಶೇಷ ಕ್ಷಣಗಳು ಪ್ರಸಾರವಾಗಲಿವೆ.

ವಿಕ ಸುದ್ದಿಲೋಕ 16 Oct 2016, 4:00 am

ಬೆಂಗಳೂರು: 'ಹರಹರ ಮಹಾದೇವ' ಧಾರಾವಾಹಿಯ 50 ಕಂತುಗಳನ್ನು ಈಗಾಗಲೇ ಪ್ರಸಾರ ಮಾಡಿರುವ 'ಸ್ಟಾರ್‌ ಸುವರ್ಣ' ವಾಹಿನಿಯಲ್ಲಿ ಅ.17ರ ಸೋಮವಾರದಿಂದ ರಾತ್ರಿ 7.30ಕ್ಕೆ ಪಾರ್ವತಿಯ ಅವತಾರದ ವಿಶೇಷ ಕ್ಷಣಗಳು ಪ್ರಸಾರವಾಗಲಿವೆ.

ಧಾರಾವಾಹಿಯಲ್ಲಿ ಪಾರ್ವತಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ರೂಪದರ್ಶಿ, ಕಲಬುರಗಿಯ ಪ್ರಿಯಾಂಕ ಚಿಂಚೋಳಿ ಅವರೇ ಈ ವಿಶೇಷ ಕಾರ್ಯಕ್ರಮದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಈ ಕಂತುಗಳಲ್ಲಿ ಮಹಾದೇವನನ್ನು ವರಿಸಲು ಆದಿಶಕ್ತಿಯ ಅವತಾರವನ್ನು ಎತ್ತಿ ಬಂದ ಪಾರ್ವತಿಯ ಬದುಕಿನ ಕತೆ ಇದೆ. ಜನ್ಮಾಂತರದ ಅಪರೂಪದ ಪ್ರೇಮಕತೆಯಾಗಿರುವ ಈ ಕಥಾನಕದಲ್ಲಿ ಪಾರ್ವತಿ-ಪರಮೇಶ್ವರನ ಪ್ರೇಮ ಪ್ರಸಂಗಗಳು ಮತ್ತು ಶಿವನನ್ನು ಪಾರ್ವತಿಯು ಸಂಸಾರಿಯಾಗಿಸಿದ ಕೌತುಕವನ್ನು ಹಿಡಿದಿಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ