ಆ್ಯಪ್ನಗರ

ಜೆಇಇ ಮೇನ್‌ ಫಲಿತಾಂಶ ಪ್ರಕಟ: ದೇಶಕ್ಕೆ ಸೂರಜ್‌ ಪ್ರಥಮ

ಐಐಟಿ, ಎನ್‌ಐಟಿ ಸೇರಿದಂತೆ ಪ್ರತಿಷ್ಠಿತ ತಾಂತ್ರಿಕ ವಿದ್ಯಾಲಯಗಳಿಗೆ ಪ್ರವೇಶ ಹಾದಿ ಸುಗಮಗೊಳಿಸುವ ಜಂಟಿ ಪ್ರವೇಶ ಪರೀಕ್ಷೆಯ (ಜೆಇಇ-ಮೇನ್ಸ್‌ ) ಫಲಿತಾಂಶವನ್ನು ಸಿಬಿಎಸ್‌ಇ ಸೋಮವಾರ ಪ್ರಕಟಿಸಿದ್ದು, ಆಂಧ್ರ ಪ್ರದೇಶದ ವಿಜಯವಾಡದ ಭೋಗಿ ಸೂರಜ್‌ ಕೃಷ್ಣ ಅಖಿಲ ಭಾರತ ಮಟ್ಟದಲ್ಲಿ ಮೊದಲ ರಾರ‍ಯಂಕ್‌ ಪಡೆದಿದ್ದಾರೆ. ಆಂಧ್ರದ ಕೆವಿಆರ್‌ ಹೇಮಂತ್‌ ಕುಮಾರ್‌ ಚೋಡಿಪಿಲ್ಲಿ ಮತ್ತು ರಾಜಸ್ಥಾನದ ಪಾರ್ಥ್‌ ಲತುರಿಯಾ ಕ್ರಮವಾಗಿ ಎರಡನೇ ಮತ್ತು ಮೂರನೇ ರಾರ‍ಯಂಕ್‌ ಪಡೆದಿದ್ದಾರೆ. ರಾರ‍ಯಂಕ್‌ ಪಟ್ಟಿಯಲ್ಲಿ ಆಂಧ್ರಪ್ರದೇಶ ಮತ್ತು ರಾಜಸ್ಥಾನ ಮೇಲುಗೈ ಸಾಧಿಸಿದ್ದಾರೆ.

Vijaya Karnataka 1 May 2018, 12:12 pm
ಹೊಸದಿಲ್ಲಿ: ಐಐಟಿ, ಎನ್‌ಐಟಿ ಸೇರಿದಂತೆ ಪ್ರತಿಷ್ಠಿತ ತಾಂತ್ರಿಕ ವಿದ್ಯಾಲಯಗಳಿಗೆ ಪ್ರವೇಶ ಹಾದಿ ಸುಗಮಗೊಳಿಸುವ ಜಂಟಿ ಪ್ರವೇಶ ಪರೀಕ್ಷೆಯ (ಜೆಇಇ-ಮೇನ್ಸ್‌ ) ಫಲಿತಾಂಶವನ್ನು ಸಿಬಿಎಸ್‌ಇ ಸೋಮವಾರ ಪ್ರಕಟಿಸಿದ್ದು, ಆಂಧ್ರ ಪ್ರದೇಶದ ವಿಜಯವಾಡದ ಭೋಗಿ ಸೂರಜ್‌ ಕೃಷ್ಣ ಅಖಿಲ ಭಾರತ ಮಟ್ಟದಲ್ಲಿ ಮೊದಲ ರಾರ‍ಯಂಕ್‌ ಪಡೆದಿದ್ದಾರೆ. ಆಂಧ್ರದ ಕೆವಿಆರ್‌ ಹೇಮಂತ್‌ ಕುಮಾರ್‌ ಚೋಡಿಪಿಲ್ಲಿ ಮತ್ತು ರಾಜಸ್ಥಾನದ ಪಾರ್ಥ್‌ ಲತುರಿಯಾ ಕ್ರಮವಾಗಿ ಎರಡನೇ ಮತ್ತು ಮೂರನೇ ರಾರ‍ಯಂಕ್‌ ಪಡೆದಿದ್ದಾರೆ. ರಾರ‍ಯಂಕ್‌ ಪಟ್ಟಿಯಲ್ಲಿ ಆಂಧ್ರಪ್ರದೇಶ ಮತ್ತು ರಾಜಸ್ಥಾನ ಮೇಲುಗೈ ಸಾಧಿಸಿದ್ದಾರೆ.
Vijaya Karnataka Web JEE
ಸಾಂದರ್ಭಿಕ ಚಿತ್ರ


ಜೆಇಇ ಮೇನ್ಸ್‌ 2018ರ ಆಫ್‌ಲೈನ್‌ ಪರೀಕ್ಷೆಯು ಏಪ್ರಿಲ್‌ 8ರಂದು ನಡೆದಿತ್ತು. ಏಪ್ರಿಲ್‌ 15 ಮತ್ತು 16ರಂದು ಆನ್‌ಲೈನ್‌ ಪರೀಕ್ಷೆ ನಡೆದಿತ್ತು. ಈ ವರ್ಷ 10,43,739 ಅಭ್ಯರ್ಥಿಗಳು (ಇವರಲ್ಲಿ 6,46,814 ವಿದ್ಯಾರ್ಥಿಗಳು , 2,66,745 ವಿದ್ಯಾರ್ಥಿನಿಯರು ಮತ್ತು ಮೂವರು ತೃತೀಯಲಿಂಗಿಗಳು) ಪರೀಕ್ಷೆಗೆ ಹಾಜರಾಗಿದ್ದರು. ದೇಶದ 104 ಹಾಗೂ ವಿದೇಶದ 8 ನಗರಗಳಲ್ಲಿ 1,621 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.

ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ ಪಾಸಾಗಿರುವ 2,31,024 ಅಭ್ಯರ್ಥಿಗಳು ಮೇ 20ರಂದು ನಡೆಯಲಿರುವ ಜೆಇಇ ಅಡ್ವಾನ್ಸ್ಡ್‌ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದಾರೆ. ಈ ಪರೀಕ್ಷೆಗೆ ನೋಂದಣಿ ಪ್ರಕ್ರಿಯೆ ಮೇ 2ರಿಂದ ಆರಂಭವಾಗಲಿದೆ. ಎನ್‌ಐಟಿ, ಐಐಐಟಿ ಸೇರಿದಂತೆ ಕೇಂದ್ರದ ಹಣಕಾಸು ನೆರವಿನಲ್ಲಿ ನಡೆಯುತ್ತಿರುವ ಇತರೆ ತಾಂತ್ರಿಕ ವಿದ್ಯಾಲಯಗಳ ಸೇರ್ಪಡೆಗೆ ಜೆಇಇ ಒಂದು ವರದಾನವಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ