ಆ್ಯಪ್ನಗರ

ಲೋಕ ಸಮರಕ್ಕೆ ಜನರ ಬಳಿ ಹೋಗಲು ಆರು ನಿರ್ಣಯ

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ವಿಶೇಷ ಸಭೆಯಲ್ಲಿ ಆರು ಪ್ರಮುಖ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಲೋಕಸಭಾ ಚುನಾವಣೆಗೆ ಭರದ ಸಿದ್ಧತೆ ಆರಂಭಿಸುವಂತೆ ಎಲ್ಲ ಮುಖಂಡರಿಗೆ ಸೂಚಿಸಲಾಗಿದೆ.

Vijaya Karnataka Web 20 Sep 2018, 4:00 am
ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ವಿಶೇಷ ಸಭೆಯಲ್ಲಿ ಆರು ಪ್ರಮುಖ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಲೋಕಸಭಾ ಚುನಾವಣೆಗೆ ಭರದ ಸಿದ್ಧತೆ ಆರಂಭಿಸುವಂತೆ ಎಲ್ಲ ಮುಖಂಡರಿಗೆ ಸೂಚಿಸಲಾಗಿದೆ.
Vijaya Karnataka Web bjp-logo


ದಿಲ್ಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ‍್ಯಕಾರಿಣಿ ಬೆನ್ನಲ್ಲೇ ಈ ಸಭೆ ನಡೆಸಲಾಗಿದ್ದು, '2019ರ ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಗೆಲ್ಲುವುದಕ್ಕೆ ಪ್ರಯತ್ನ ನಡೆಸುವಂತೆ ಸೂಚಿಸಲಾಗಿದೆ. ಸಭೆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಈ ನಿರ್ಣಯಗಳ ಮಾಹಿತಿ ನೀಡಿದ್ದಾರೆ.

ಸ್ವಚ್ಚತೆಯೇ ಸೇವೆ :
ಕೇಂದ್ರ ಸರಕಾರದ ಜನಪ್ರಿಯ ಸ್ವಚ್ಚ ಭಾರತ ಯೋಜನೆಯನ್ನು ಮುಂಬರುವ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿಸಲು ತೀರ್ಮಾನ. ಈ ಹಿನ್ನೆಲೆಯಲ್ಲಿ ಅಕ್ಟೋಬರ್‌ 2ರ ವರೆಗೆ ರಾಜ್ಯಾದ್ಯಂತ ಸ್ವಚ್ಚತೆಯೇ ಸೇವೆ ಕಾರ್ಯಕ್ರಮ

ಕಾವ್ಯಾಂಜಲಿ :
ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಸ್ಮರಣಾರ್ಥ ರಾಜ್ಯದ ಎಲ್ಲ ಲೋಕಸಭೆ ಹಾಗೂ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಕಾವ್ಯಾಂಜಲಿ ಕಾರ್ಯಕ್ರಮ. ವಾಜಪೇಯಿ ಕಾವ್ಯಗಳ ವಿಡಿಯೊ ಪ್ರಸಾರದ ಜತೆಗೆ ಯುವ ಕವಿಗಳ ಕವಿಗೋಷ್ಠಿ ಆಯೋಜನೆ

ಕಾರ್ಯಾಂಜಲಿ :
ಸೆಪ್ಟಂಬರ್‌ 25ರಂದು ಪಂಡಿತ್‌ ದೀನ್‌ ದಯಾಳ್‌ ಜಯಂತಿ ಹಿನ್ನೆಲೆಯಲ್ಲಿ ಅವರ ಅಂತ್ಯೋದಯ ಕನಸಿನ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿಯವರ 'ಸಬ್‌ ಕಾ ಸಾತ್‌ ಸಬ್‌ ಕಾ ವಿಕಾಸ್‌ ' ಘೋಷಣೆ ಪ್ರಚುರಪಡಿಸುವುದು. ಜತೆಗೆ ರಾಜ್ಯದ ದಲಿತ ಕಾಲೊನಿಗಳು ಹಾಗೂ ನಗರ ಪ್ರದೇಶದ ಸ್ಲಂಗಳಿಗೆ ತೆರಳಿ ಸೇವಾ ಕಾರ್ಯ ನಡೆಸುವುದು. ಕೇಂದ್ರ ಸರಕಾರದ ಆಯುಷ್ಮಾನ್‌ ಯೋಜನೆ ಬಗ್ಗೆ ಜಾಗೃತಿ ಮೂಡಿಸುವುದು.

ಶೌರ್ಯ ದಿನ :
2016ರ ಸೆಪ್ಟಂಬರ್‌ ತಿಂಗಳಲ್ಲಿ ನಡೆದ ಸರ್ಜಿಕಲ್‌ ಸ್ಟ್ರೈಕ್‌ ಹಿನ್ನೆಲೆಯಲ್ಲಿ ಸೆಪ್ಟಂಬರ್‌ 29ರಂದು ಶೌರ್ಯ ದಿನಾಚರಣೆ ಆಯೋಜನೆ. ಹುತಾತ್ಮ ಯೋಧರಿಗೆ ಗೌರವ ಸಮರ್ಪಣೆ, ಯೋಧರ ಕುಟುಂಬಕ್ಕೆ ಅಭಿನಂದನೆ ಸಲ್ಲಿಸುವುದು.

ಪಾದಯಾತ್ರೆ :
ಮಹಾತ್ಮ ಗಾಂಧಿಯವರ 150ನೇ ಜಯಂತಿ ಅಂಗವಾಗಿ 'ಪಾದಯಾತ್ರೆ-150' ಆಯೋಜನೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ದಿನ 10 ಕಿ.ಮೀ.ನಂತೆ 15 ದಿನ 150 ಕಿಮೀ ಪಾದಯಾತ್ರೆ ನಡೆಸುವುದು.

ಏಕತೆಗಾಗಿ ಓಟ :
ಸರ್ದಾರ್‌ ವಲ್ಲಭ ಬಾಯ್‌ ಪಟೇಲ್‌ ಜಯಂತಿ ಅಂಗವಾಗಿ ಅಕ್ಟೋಬರ್‌ 31ರಂದು ಏಕತೆಗಾಗಿ ಓಟ ಆಯೋಜನೆ.

ಬಿಜೆಪಿ ಯಾವುದೇ ಕಾರಣಕ್ಕೂ ಆಪರೇಷನ್‌ ಕಮಲ ನಡೆಸುವುದಿಲ್ಲ. ಸರಕಾರ ತನ್ನದೇ ಆದ ಗೊಂದಲಗಳಿಂದ ಪತನವಾಗಲಿದೆ. ನಾವಂತೂ ಸರಕಾರವನ್ನು ಬೀಳಿಸುವುದಿಲ್ಲ.
-ಅರಂವಿಂದ ಲಿಂಬಾವಳಿ, ಬಿಜೆಪಿ ಶಾಸಕ

ಭೂ ಕಬಳಿಕೆ ವಿರುದ್ಧ ಹೋರಾಟ
ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ವಿರುದ್ಧ ಮಾಜಿ ಸಚಿವ ಎ.ಮಂಜು ಮಾಡಿರುವ ಭೂ ಕಬಳಿಕೆ ಆರೋಪದ ಬಗ್ಗೆ ಹೋರಾಟ ನಡೆಸುವಂತೆ ವಿಶೇಷ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.

ಈ ಬಗ್ಗೆ ಬಿಜೆಪಿಯ ಎಲ್ಲ ಮುಖಂಡರು ಸಭೆಯಲ್ಲಿ ಪ್ರಸ್ತಾಪಿಸಿದ್ದು, ಪ್ರಜ್ವಲ್‌ ರೇವಣ್ಣ ಹಾಗೂ ಗೌಡರ ಕುಟುಂಬದ ವಿರುದ್ಧ ವ್ಯಕ್ತವಾಗಿರುವ ಆರೋಪವನ್ನು ತಾತ್ವಿಕ ಹಂತಕ್ಕೆ ಕೊಂಡೊಯ್ಯವಂತೆ ಸೂಚಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ