ಆ್ಯಪ್ನಗರ

ಹೈಕೋರ್ಟ್‌ಗೆ ಹತ್ತು ದಿನ ದಸರಾ ರಜೆ

ಹೈಕೋರ್ಟ್‌ಗೆ ಶನಿವಾರ(ಅ.13)ದಿಂದ ಅ.21ರವರೆಗೆ ದಸರಾ ರಜೆ ಇರುವುದರಿಂದ ರಜೆ ಅವಧಿಯಲ್ಲಿ ಧಾರವಾಡ ಹಾಗೂ ಕಲಬುರಗಿ ಪೀಠಗಳು ಸಂಪೂರ್ಣವಾಗಿ ಕಾರ‍್ಯ ನಿರ್ವಹಿಸುವುದಿಲ್ಲ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅಥವಾ ತುರ್ತು ಅರ್ಜಿಗಳಿದ್ದರೆ ಅವುಗಳನ್ನು ಬೆಂಗಳೂರು ಪೀಠದಲ್ಲಿ ಮಂಡಿಸಬಹುದಾಗಿದೆ.

Vijaya Karnataka 13 Oct 2018, 9:32 am
ಬೆಂಗಳೂರು: ಹೈಕೋರ್ಟ್‌ಗೆ ಶನಿವಾರ(ಅ.13)ದಿಂದ ಅ.21ರವರೆಗೆ ದಸರಾ ರಜೆ ಇರುವುದರಿಂದ ಅ.22ರಿಂದ ಕೋರ್ಟ್‌ ಕಲಾಪ ಪುನರಾರಂಭವಾಗಲಿದೆ.
Vijaya Karnataka Web high court


ರಜೆ ಅವಧಿಯಲ್ಲಿ ಧಾರವಾಡ ಹಾಗೂ ಕಲಬುರಗಿ ಪೀಠಗಳು ಸಂಪೂರ್ಣವಾಗಿ ಕಾರ‍್ಯ ನಿರ್ವಹಿಸುವುದಿಲ್ಲ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅಥವಾ ತುರ್ತು ಅರ್ಜಿಗಳಿದ್ದರೆ ಅವುಗಳನ್ನು ಬೆಂಗಳೂರು ಪೀಠದಲ್ಲಿ ಮಂಡಿಸಬಹುದಾಗಿದೆ.

ಅ.16ರಂದು ಮಂಗಳವಾರ ಒಂದು ದಿನ ಮಾತ್ರ ರಜೆ ಕಾಲದ ನ್ಯಾಯಪೀಠ ಕಾರ‍್ಯನಿರ್ವಹಿಸಲಿದೆ. ಅಂದು ನ್ಯಾಯಮೂರ್ತಿಗಳಾದ ಎಸ್‌.ಸುಜಾತ, ಎನ್‌.ಕೆ.ಸುಧೀಂದ್ರರಾವ್‌ ಮತ್ತು ಸುನಿಲ್‌ ದತ್‌ ಯಾದವ್‌ ಅವರು ರಜಾ ಪೀಠಗಳಲ್ಲಿ ಕಾರ‍್ಯನಿರ್ವಹಿಸುವರು ಎಂದು ಹೈಕೋರ್ಟ್‌ನ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ