ಆ್ಯಪ್ನಗರ

ಕನಕಪುರದಲ್ಲಿ ಏಸು ಪ್ರತಿಮೆ ನಿರ್ಮಾಣಕ್ಕೆ ಬೀಳುತ್ತಾ ಬ್ರೇಕ್‌?: ಗೋಮಾಳ ವಾಪಸ್‌ ಪಡೆಯಲು ಒತ್ತಾಯ

ಸರಕಾರದ ನೀತಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಗೋಮಾಳ ಖರೀದಿ ವಿಷಯದಲ್ಲಿ ಯಾವ ಕಾನೂನು ಕೂಡ ಪಾಲಿಸಿಲ್ಲ ಎಂದು ರವಿಕುಮಾರ್‌ ಪತ್ರದಲ್ಲಿ ವಿವರಿಸಿದ್ದಾರೆ.

Vijaya Karnataka Web 27 Dec 2019, 8:49 pm
ಬೆಂಗಳೂರು: ಕನಕಪುರದಲ್ಲಿ ಅತಿ ಎತ್ತದ ಏಸು ಕ್ರಿಸ್ತ ಪ್ರತಿಮೆ ನಿರ್ಮಾಣ ವಿಷಯ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.
Vijaya Karnataka Web ಏಸು ಕ್ರಿಸ್ತ ಪ್ರತಿಮೆ
ಏಸು ಕ್ರಿಸ್ತ ಪ್ರತಿಮೆ


ಈಗ ಇದಕ್ಕೆ ತಡೆ ಬೀಳುವ ಸಾಧ್ಯತೆಯೂ ಇದೆ. ಕನಕಪುರ ಬಂಡೆ ಕಪಾಲಿ ಬೆಟ್ಟದಲ್ಲಿ ಏಸು ಕ್ರಿಸ್ತ ಪ್ರತಿಮೆ ನಿರ್ಮಿಸಲು ಮುಂದಾಗಿದ್ದರು. ಇದಕ್ಕೆ ಭಾರಿ ಪ್ರತಿರೋಧ ವ್ಯಕ್ತವಾಗಿದೆ.

ಈಗ ಸರಕಾರ ಕೂಡ ಮಧ್ಯ ಪ್ರವೇಶಿಸುವ ನಿರೀಕ್ಷೆ ಇದೆ. ಕನಕಪುರದ ಕಪಾಲಿ ಬೆಟ್ಟವನ್ನು ಅಭಿವೃದ್ಧಿ ಹೆಸರಿನಲ್ಲಿ ಡಿಕೆಶಿ ಖರೀದಿಸಿದ್ದರು. ಸಾಮಾಜಿಕ ಉದ್ದೇಶಗಳಿಗೆ ಮೀಸಲಿಟ್ಟಿದ್ದ ಸರಕಾರಿ ಗೋಮಾಳವನ್ನು ಶಿವಕುಮಾರ್‌ ಖರೀದಿಸಿದ್ದರು.

ಎಚ್‌ಡಿ ಕುಮಾರಸ್ವಾಮಿ ಆಡಳಿತಾವಧಿದಲ್ಲಿ ಇದಕ್ಕೆ ವಿಧಿಸಲಾಗಿದ್ದ ಪರಿವರ್ತನಾ ಶುಲ್ಕವನ್ನು ಮನ್ನಾ ಮಾಡಲಾಗಿತ್ತು ಎಂದು ಹೇಳಲಾಗಿದೆ.

ಡಿ.ಕೆ ಶಿವಕುಮಾರ ರವರು ಸಾಮಾಜಿಕ ಉದ್ದೇಶಗಳಿಗೆ ಮೀಸಲಿಟ್ಟ ಸರ್ಕಾರಿ ಗೋಮಾಳದ ಜಮೀನು ಖರೀದಿಸಿ ವಿಶ್ವದ ಅತಿ ಎತ್ತರದ ಏಸು ಕ್ರಿಸ್ತನ ಪ್ರತಿಮೆ ನಿರ್ಮಿಸುವುದನ್ನು ತಡೆಯಬೇಕು ಹಾಗೂ ಗೋಮಾಳ ಜಮೀನು ವಾಪಸ್ ಪಡೆಯಬೇಕೆಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಪತ್ರ ಬರೆದು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ರಾಜ್ಯ ಕಂದಾಯ ಮಂತ್ರಿ ಆರ್ ಅಶೋಕ ಮತ್ತು ಕಾನೂನು ಸಚಿವಜೆ.ಸಿ ಮಾಧುಸ್ವಾಮಿಗೆ ಪತ್ರ ಬರೆಯಲಾಗಿದ್ದು, ಈ 10 ಎಕರೆ ಗೋಮಾಳ ಜಮೀನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿರುವ ಸರಕಾರ ಅತಿ ಶೀಘ್ರದಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದೆ ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ