ಆ್ಯಪ್ನಗರ

ಬಸ್‌, ಕಟ್ಟಡ ಮಾಲೀಕರಿಂದ 16.55 ಕೋಟಿ ಜಿಎಸ್‌ಟಿ ವಂಚನೆ

​​ಹವಾ ನಿಯಂತ್ರಿತ ಬಸ್‌ ಟಿಕೆಟ್‌ಗಳ ಮೇಲೆ ಬಸ್‌ ಪ್ರಯಾಣಕ್ಕೆ ಶೇ.5ರಷ್ಟು ಜಿಎಸ್‌ಟಿ ಪಾವತಿಸಬೇಕು. ಆದರೆ, ರಾಜ್ಯದ ಹಲವು ಆಪರೇಟರ್‌ಗಳು ಜಿಎಸ್‌ಟಿ ಪಾವತಿಸದೆ ವಂಚಿಸುತ್ತಿದ್ದಾರೆ.

Vijaya Karnataka 12 Oct 2019, 7:39 am
ಬೆಂಗಳೂರು: ಬಸ್‌ ಆಪರೇಟರ್‌ಗಳು ಹಾಗೂ ವಾಣಿಜ್ಯ ಕಟ್ಟಡಗಳ ಮಾಲೀಕರು ಜಿಎಸ್‌ಟಿ ಕಟ್ಟದೆ 16.55 ಕೋಟಿ ರೂ. ವಂಚಿಸಿರುವುದನ್ನು ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
Vijaya Karnataka Web GST


ಹವಾ ನಿಯಂತ್ರಿತ ಬಸ್‌ ಟಿಕೆಟ್‌ಗಳ ಮೇಲೆ ಬಸ್‌ ಪ್ರಯಾಣಕ್ಕೆ ಶೇ.5ರಷ್ಟು ಜಿಎಸ್‌ಟಿ ಪಾವತಿಸಬೇಕು. ಆದರೆ, ರಾಜ್ಯದ ಹಲವು ಆಪರೇಟರ್‌ಗಳು ಜಿಎಸ್‌ಟಿ ಪಾವತಿಸದೆ ವಂಚಿಸುತ್ತಿದ್ದಾರೆ. ಈ ಸಂಬಂಧ ಖಚಿತ ಮಾಹಿತಿ ಆಧರಿಸಿ 26 ಆರಪೇಟರ್‌ಗಳ ಕಚೇರಿಗಳಲ್ಲಿ ತಪಾಸಣೆ ನಡೆಸಲಾಗಿದೆ.

ದಾಖಲೆ ತೆರಿಗೆ ಸಂಗ್ರಹ: ಜಿಎಸ್‌ಟಿ ವ್ಯವಸ್ಥೆಯ ಹೊಸ ಮೈಲುಗಲ್ಲು

ಈ ವೇಳೆ 174.40 ಕೋಟಿ ರೂ. ಬಚ್ಚಿಟ್ಟ ಆಸ್ತಿಗೆ ಸಂಬಂಧಿಸಿದಂತೆ 8.72 ಕೋಟಿ ರೂ. ಜಿಎಸ್‌ಟಿ ವಂಚನೆ ಪತ್ತೆ ಹಚ್ಚಲಾಗಿದೆ. ವಾಣಿಜ್ಯ ಕಟ್ಟಡಗಳ ಬಾಡಿಗೆಯಿಂದ ಸಂಗ್ರಹವಾಗುವ ಆದಾಯಕ್ಕೆ ಜಿಎಸ್‌ಟಿ ಪಾವತಿಸದೆ 7.85 ಕೋಟಿ ರೂ. ವಂಚಿಸಿಧಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ