ಆ್ಯಪ್ನಗರ

ಅಖಂಡ ಶ್ರೀನಿವಾಸಮೂರ್ತಿ ಮನೆಯಿಂದ 2.5 ಕೆಜಿ ಚಿನ್ನ, 6 ಕೆಜಿ ಬೆಳ್ಳಿ ಲೂಟಿ!

ಮಂಗಳವಾರ ರಾತ್ರಿ ನಡೆದ ದಾಂಧಲೆ ವೇಳೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಯಲ್ಲಿದ್ದ 2.5 ಕೆಜಿ ಚಿನ್ನದ ಒಡವೆಗಳು, 6 ಕೆಜಿ ಬೆಳ್ಳಿ ಆಭರಣ ಮತ್ತು ವಸ್ತುಗಳ ಸಮೇತ ಲಕ್ಷಾಂತರ ರೂಪಾಯಿ ನಗದನ್ನು ದುಷ್ಕರ್ಮಿಗಳು ಲೂಟಿಗೈದಿದ್ದಾರೆ.

Vijaya Karnataka Web 13 Aug 2020, 11:12 pm
ಬೆಂಗಳೂರು: ಮಂಗಳವಾರ ರಾತ್ರಿ ನಡೆದ ದಾಂಧಲೆ ವೇಳೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಯಲ್ಲಿದ್ದ 2.5 ಕೆಜಿ ಚಿನ್ನದ ಒಡವೆಗಳು, 6 ಕೆಜಿ ಬೆಳ್ಳಿ ಆಭರಣ ಮತ್ತು ವಸ್ತುಗಳ ಸಮೇತ ಲಕ್ಷಾಂತರ ರೂಪಾಯಿ ನಗದನ್ನು ದುಷ್ಕರ್ಮಿಗಳು ಲೂಟಿಗೈದಿದ್ದಾರೆ.
Vijaya Karnataka Web gold loot new


ಬ್ಯಾಂಕ್‌ ಲಾಕರ್‌ನಲ್ಲಿದ್ದ ಒಡವೆಗಳನ್ನು ಲಕ್ಷ್ಮೀ ಪೂಜೆಗೆಂದು ಮನೆಗೆ ತಂದಿಟ್ಟಿದ್ದರು. ಪೂಜೆ ಮುಗಿದ ಬಳಿಕ ಅದನ್ನು ವಾಪಸ್‌ ಲಾಕರ್‌ನಲ್ಲಿಇಟ್ಟಿರಲಿಲ್ಲ. ಶಾಸಕರ ಪತ್ನಿ ಮತ್ತು ಮಗಳು ನಿತ್ಯ ಪೂಜೆ ಮಾಡುವುದು ಬೆಳ್ಳಿ ಸಾಮಗ್ರಿಗಳಲ್ಲೆ. ಇವುಗಳಲ್ಲಿಕೆಲವು ಬೆಂಕಿಗೆ ಆಹುತಿ ಆಗಿವೆ. ಉಳಿದವು ಕಳ್ಳತನ ಆಗಿವೆ ಎಂದು ಶಾಸಕರು ಮೌಖಿಕವಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ದೂರು ಕೊಡಲು ಮೀನಮೇಷ:
ಕಳ್ಳತನದ ಬಗ್ಗೆ ದೂರು ನೀಡಲು ಶಾಸಕರು ಇನ್ನೂ ಮನಸ್ಸು ಮಾಡಿಲ್ಲ. ಪೊಲೀಸ್‌ ಅಧಿಕಾರಿಗಳೇ ದೂರು ಕೊಡಿ ಎಂದು ಮನವೊಲಿಸಿದರೂ ಸ್ಥಳೀಯರ ವಿರುದ್ಧವೇ ಕಳ್ಳತನ ಆರೋಪ ಮಾಡಿದಂತಾಗುತ್ತದೆ ಎಂದು ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ. ಆದರೆ, ಪರಿಸ್ಥಿತಿ ಸ್ವಲ್ಪ ತಣ್ಣಗಾಗಲಿ. ಅಷ್ಟೊತ್ತಿಗೆ ದಾಂಧಲೆಗೆ ಹೊರಗಿನಿಂದ ಬಂದಿದ್ದ ಗ್ಯಾಂಗ್‌ಗಳ ಬಗ್ಗೆಯೂ ಸ್ಪಷ್ಟ ಮಾಹಿತಿ ಸಿಗುತ್ತದೆ. ಸ್ಥಳೀಯರನ್ನು ಭೇಟಿ ಆಗಿ ನಾನು ಮಾತನಾಡುತ್ತೇನೆ. ಬಳಿಕ ದೂರು ನೀಡುತ್ತೇನೆ ಎಂದು ಪೊಲೀಸ್‌ ಅಧಿಕಾರಿಗಳಿಗೆ ಶಾಸಕರು ತಿಳಿಸಿದ್ದಾರೆ.

ಬೆಂಗಳೂರು ಗಲಭೆ ಹಿಂದಿದೆ ಎಸ್‌ಡಿಪಿಐ ಪಿತೂರಿ? ಎಫ್‌ಐಆರ್‌ ದಾಖಲು, 189 ಮಂದಿ ಸೆರೆ

ಶಿವಾಜಿನಗರ ಗ್ಯಾಂಗ್‌
ಡಿಜೆ ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದ ದಾಂಧಲೆಗೆ ಶಿವಾಜಿ ನಗರದಿಂದಲೇ 300ಕ್ಕೂ ಹೆಚ್ಚು ಮಂದಿಯನ್ನು ಕರೆಸಲಾಗಿತ್ತು ಎಂದು ಸ್ಥಳೀಯರೇ ಶಾಸಕರನ್ನು ಭೇಟಿ ಆಗಿ ಮಾಹಿತಿ ನೀಡಿರುವುದಲ್ಲದೆ, ಪೊಲೀಸರಿಗೆ ಹೇಳಿಕೆ ನೀಡಲೂ ಮುಂದಾಗಿದ್ದಾರೆ.

ಮೊದಲಿಗೆ ಶಾಂತಿಯುತ ಪ್ರತಿಭಟನೆ ಎಂದು ನಮ್ಮನ್ನೆಲ್ಲ ಕರೆಸಿದರು. ಬಳಿಕ ದಾಂಧಲೆಗೆ ಇಳಿದರು. ಶಿವಾಜಿನಗರ ಮತ್ತು ಗೋರಿಪಾಳ್ಯದ ಗ್ಯಾಂಗ್‌ಗಳನ್ನು ಕರೆಸಿದ್ದು ವಾಜಿದ್‌ ಮತ್ತು ಮುಜಾಮಿಲ್‌ ಎಂದು ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಪಾಕ್‌ ವೈದ್ಯಕೀಯ ಪದವಿಗೆ ಭಾರತದಲ್ಲಿ ಮಾನ್ಯತೆ ಇಲ್ಲ ಎಂದ ಎಂಸಿಐ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ