ಆ್ಯಪ್ನಗರ

22 ಜಿಲ್ಲೆಗಳು ಪ್ರವಾಹ ಪೀಡಿತ ಪ್ರದೇಶವೆಂದು ಘೋಷಣೆ: ಆರ್‌ ಅಶೋಕ್‌

ಕರ್ನಾಟಕದಲ್ಲಿ ಕಂಡುಬಂದಿರುವ ಭೀಕರ ಪ್ರವಾಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿಶೇಷ ವಿಧಾನಸಭಾ ಅಧಿವೇಶನ ಕರೆಯಲಾಗಿದೆ. ಮೊದಲ ದಿನದ ಕಲಾಪದಲ್ಲಿ ಭಾರಿ ಚರ್ಚೆಗಳು ನಡೆದಿವೆ.

Vijaya Karnataka Web 10 Oct 2019, 9:51 pm
ಬೆಂಗಳೂರು: ರಾಜ್ಯದ 22 ಜಿಲ್ಲೆಗಳನ್ನು ಭೀಕರ ಮಳೆ ಮತ್ತು ಪ್ರವಾಹ ಪೀಡಿತ ಜಿಲ್ಲೆಗಳಾಗಿ ಘೋಷಿಸಲಾಗಿದೆ. 70 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದ್ದಾರೆ.
Vijaya Karnataka Web ಆರ್‌ ಅಶೋಕ್‌
ಆರ್‌ ಅಶೋಕ್‌


ಇತ್ತೀಚಿನ ಭಾರೀ ಮಳೆ ಮತ್ತು ಭೀಕರ ಪ್ರವಾಹ ಕುರಿತು ವಿಧಾನಪರಿಷತ್‌ನಲ್ಲಿ ನಡೆದ ಚರ್ಚೆಯ ಮಧ್ಯೆ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಮಾಡಿದ ಪ್ರಸ್ತಾಪವೊಂದಕ್ಕೆ ಕಂದಾಯ ಸಚಿವ ಅಶೋಕ್‌ ವಿವರಣೆ ನೀಡಿದರು.

1.20 ಲಕ್ಷಕ್ಕೂ ಹೆಚ್ಚು ಮನೆಗಳು ಹಾನಿಗೊಂಡಿವೆ. ಈ ಪೈಕಿ ಹೆಚ್ಚು ಹಾನಿಗೊಳಗಾಗಿರುವ ಎ ಮತ್ತು ಬಿ ವರ್ಗದ 42.300 ಮನೆಗಳಿಗೆ ೫ ಲಕ್ಷ ರೂಪಾಯಿ ನೀಡಲಾಗಿದೆ. ಹಾನಿಗೊಳಗಾದ ಸಿ ದರ್ಜೆಯ 77,500 ಕ್ಕೂ ಹೆಚ್ಚು ಮನೆಗಳಿಗೆ ಪರಿಹಾರ ಧನವನ್ನು 50 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ ಎಂದರು.

ಇನ್ನು ಮಳೆ ಬೀಳುತ್ತಿದ್ದು, ಮುಂದೆಯೂ ಹಾನಿಗೆ ಒಳಗಾಗುವ ಮನೆಗಳಿಗೆ ಪರಿಹಾರ ನೀಡಲಾಗುತ್ತದೆ. 118 ವರ್ಷಗಳ ನಂತರ ರಾಜ್ಯದಲ್ಲಿ ಇಂತಹ ಭೀಕರ ಪರಿಸ್ಥಿತಿ ತಲೆದೋರಿದೆ ಎಂದು ಸಚಿವರು ತಿಳಿಸಿದರು.

ಮಹಾರಾಷ್ಟ್ರದ ಅಣೆಕಟ್ಟುಗಳಿಂದ 9 ಲಕ್ಷ ಕ್ಯುಸೆಕ್‌ಗೂ ಹೆಚ್ಚು ನೀರನ್ನು ಕೃಷ್ಣಾ, ಭೀಮಾ, ಮಲಪ್ರಭಾ ನದಿಗಳಿಗೆ ಹರಿಸಿದ್ದರಿಂದ ಈ ಬಾರಿ ನೆರೆಹಾವಳಿ ಇಷ್ಟೊಂದು ಭೀಕರವಾಗಿದೆ ಎಂದು ಸಚಿವ ಆರ್‌ ಅಶೋಕ ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ