ಆ್ಯಪ್ನಗರ

ಸಂಪಿನಲ್ಲಿ ಮುಳುಗುತ್ತಿದ್ದ ಸ್ನೇಹಿತೆಯ ಕಾಪಾಡಿದ ಬಾಲಕ!

ಸಮಯೋಚಿತ ನಿರ್ಧಾರ ಹಾಗೂ ಧೈರ್ಯ ಸಾಹಸದಿಂದ 6 ವರ್ಷದ ಬಾಲಕನೊಬ್ಬ ಸಂಪಿನಲ್ಲಿ ಬಿದ್ದಿದ್ದ 5 ವರ್ಷದ ತನ್ನ ಸ್ನೇಹಿತೆಯನ್ನು ಪ್ರಾಣಾಪಾಯದಿಂದ ರಕ್ಷಿಸಿ, ಗ್ರಾಮಸ್ಥರ ಮೆಚ್ಚುಗೆಗೆ ಕಾರಣನಾಗಿದ್ದಾನೆ.

Vijaya Karnataka 4 Aug 2018, 7:52 am
ಶಿಡ್ಲಘಟ್ಟ: ಸಮಯೋಚಿತ ನಿರ್ಧಾರ ಹಾಗೂ ಧೈರ್ಯ ಸಾಹಸದಿಂದ 6 ವರ್ಷದ ಬಾಲಕನೊಬ್ಬ ಸಂಪಿನಲ್ಲಿ ಬಿದ್ದಿದ್ದ 5 ವರ್ಷದ ತನ್ನ ಸ್ನೇಹಿತೆಯನ್ನು ಪ್ರಾಣಾಪಾಯದಿಂದ ರಕ್ಷಿಸಿ, ಗ್ರಾಮಸ್ಥರ ಮೆಚ್ಚುಗೆಗೆ ಕಾರಣನಾಗಿದ್ದಾನೆ.
Vijaya Karnataka Web Boy saved girl


ತಾಲೂಕಿನ ಹಂಡಿಗನಾಳ ಗ್ರಾಮ ಪಂಚಾಯ್ತಿಯ ಅಪ್ಪೇಗೌಡನಹಳ್ಳಿಯ ಸಾತ್ವಿಕ್‌ ಈ ಸಾಹಸದ ರೂವಾರಿ. ಪೂರ್ವಿಕಾ ನೀರಿನ ಸಂಪಿಗೆ ಬಿದ್ದ ಬಾಲಕಿ. ಬುಧವಾರ ಸಂಜೆ ಈ ಅವಘಡ ನಡೆದಿದ್ದರೂ ತಡವಾಗಿ ಬೆಳಕಿಗೆ ಬಂದಿದೆ.

ಅಂಗನವಾಡಿಯಲ್ಲಿ ಓದುತ್ತಿರುವ ಪೂರ್ವಿಕಾ ತನ್ನ ಅಜ್ಜಿಯ ಮನೆಗೆ ಹೋಗುವ ದಾರಿಯ ಮಧ್ಯೆ ಗಣೇಶ್‌ ಎಂಬುವವರಿಗೆ ಸೇರಿದ ನಿರ್ಮಾಣ ಹಂತದಲ್ಲಿರುವ ಮನೆ ಕಂಡಿದ್ದಾಳೆ. ಅಲ್ಲಿರುವ ಸಂಪಿನ ಬಳಿ ಸಾತ್ವಿಕ್‌, ದೀಪಕ್‌ ಜತೆ ಆಟಕ್ಕೆ ಮುಂದಾಗಿದ್ದಾಳೆ. ಆಟ ಆಡುವಾಗ ಆಯತಪ್ಪಿ ಪೂರ್ವಿಕಾ ಸಂಪಿಗೆ ಬಿದ್ದಿದ್ದಾಳೆ. ಗಾಬರಿಗೊಂಡ ಸಾತ್ವಿಕ್‌ ಮತ್ತು ದೀಪಕ್‌ ಜೋರಾಗಿ ಕಿರುಚಿಕೊಂಡಿದ್ದಾರೆ. ಮೇಲಕ್ಕೆ ಬರಲಾಗದೇ ಕೈಗಳನ್ನು ಎತ್ತಿ ಸಹಾಯಕ್ಕೆ ಪೂರ್ವಿಕಾ ಅಂಗಲಾಚಲು ಆರಂಭಿಸಿದ್ದಾಳೆ. ಪೂರ್ವಿಕಾಳ ಅಜ್ಜಿ ಉಮಾ, ಪಕ್ಕದ ಮನೆಯ ಮುನಿರತ್ನಂ ಸ್ಥಳಕ್ಕೆ ಬರುವಷ್ಟರಲ್ಲಿ ಸಾತ್ವಿಕ್‌, ಪೂರ್ವಿಕಾಳ ಕೈ ಹಿಡಿದು ಮೇಲಕ್ಕೆ ಎಳೆದಿದ್ದಾನೆ. ಆಗ ಆಕೆಗೆ ಸಂಪಿನಿಂದ ಮೇಲಕ್ಕೆ ಬರಲು ಸಾಧ್ಯವಾಗಿದೆ. ಪಾಚಿಗಟ್ಟಿದ ನೀರು ಕುಡಿದು ನಿತ್ರಾಣಗೊಂಡಿದ್ದರೂ ಪೂರ್ವಿಕಾ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಈ ಅವಘಡದ ಬಗ್ಗೆ ಶುಕ್ರವಾರ ಹಂಡಿಗನಾಳ ಗ್ರಾಪಂ ಸದಸ್ಯ ತ್ಯಾಗರಾಜ್‌ ಗಮನಕ್ಕೆ ಬಂದ ತಕ್ಷ ಣವೇ, ಪಿಡಿಒ ಅಂಜನ್‌ಕುಮಾರ್‌ರೊಂದಿಗೆ ಸ್ಥಳಕ್ಕೆ ಆಗಮಿಸಿ, ಸಂಪು ಮುಚ್ಚುವಂತೆ ಮನೆ ಮಾಲೀಕ ಗಣೇಶ್‌ನಿಗೆ ತಾಕೀತು ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ