ಆ್ಯಪ್ನಗರ

ನರೇಗಾ ಕೂಲಿಗಾಗಿ ರಾಜ್ಯದಿಂದ 650 ಕೋಟಿ ಮುಂಗಡ ಬಿಡುಗಡೆ

ನರೇಗಾ ಯೋಜನೆಯಡಿ ಕೇಂದ್ರ ಸರಕಾರ ಬಿಡುಗಡೆ ಮಾಡಬೇಕಾಗಿರುವ ಅನುದಾನ ಬಿಡುಗಡೆಯಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೇ ಮತ್ತೊಮ್ಮೆ 649.73 ಕೋಟಿ ರೂ. ಮುಂಗಡ ಬಿಡುಗಡೆ ಮಾಡಲು ನಿರ್ಧರಿಸಿದೆ.

Vijaya Karnataka 5 May 2019, 5:00 am
ಬೆಂಗಳೂರು : ನರೇಗಾ ಯೋಜನೆಯಡಿ ಕೇಂದ್ರ ಸರಕಾರ ಬಿಡುಗಡೆ ಮಾಡಬೇಕಾಗಿರುವ ಅನುದಾನ ಬಿಡುಗಡೆಯಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೇ ಮತ್ತೊಮ್ಮೆ 649.73 ಕೋಟಿ ರೂ. ಮುಂಗಡ ಬಿಡುಗಡೆ ಮಾಡಲು ನಿರ್ಧರಿಸಿದೆ.
Vijaya Karnataka Web 650 crore rupees release for narega
ನರೇಗಾ ಕೂಲಿಗಾಗಿ ರಾಜ್ಯದಿಂದ 650 ಕೋಟಿ ಮುಂಗಡ ಬಿಡುಗಡೆ


ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದು, ಜನರು ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಪ್ಪಿಸಲು ನರೇಗಾ ಯೋಜನೆ ನೆರವಾಗಿದೆ. ಆದರೆ, ಸಕಾಲಕ್ಕೆ ಕೂಲಿ ಪಾವತಿಯಾಗದೆ ಯೋಜನೆ ವಿಫಲವಾಗುವುದನ್ನು ತಪ್ಪಿಸಲು ರಾಜ್ಯ ಸರಕಾರದಿಂದಲೇ ಒಟ್ಟು 649.73 ಕೋಟಿ ರೂ. ಮುಂಗಡ ಬಿಡುಗಡೆ ಮಾಡಲು ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಆದೇಶಿಸಿದ್ದಾರೆ. ಇದರೊಂದಿಗೆ, ನರೇಗಾ ಯೋಜನೆಗೆ ರಾಜ್ಯ ಸರಕಾರದಿಂದ ಒಟ್ಟು 1234.37 ಕೋಟಿ ರೂ ಮುಂಗಡ ಹಣ ಬಿಡುಗಡೆಯಾದಂತಾಗಿದೆ.

''ನರೇಗಾ ಯೋಜನೆಯಡಿ ಕೂಲಿಯ ಪೂರ್ಣ ಮೊತ್ತ ಹಾಗೂ ಸಾಮಗ್ರಿಗಳ ಭಾಗಶಃ ಮೊತ್ತವನ್ನು ಕೇಂದ್ರ ಸರಕಾರ ಭರಿಸಬೇಕಿದ್ದು, ಈವರೆಗೆ, 1649 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಕೇಂದ್ರ ಸರಕಾರವು ನಿಗದಿಯಂತೆ ಅನುದಾನವನ್ನು ಸಕಾಲಕ್ಕೆ ಬಿಡುಗಡೆ ಮಾಡದ ಕಾರಣ ರಾಜ್ಯ ಹೆಚ್ಚುವರಿ ಆರ್ಥಿಕ ಹೊರೆ ಅನುಭವಿಸುವಂತಾಗಿದೆ. ಕೇಂದ್ರ ಸರಕಾರ ಕೂಡಲೇ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು,'' ಎಂದು ಸಿಎಂ ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ