ಆ್ಯಪ್ನಗರ

ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ 69 ಸದಸ್ಯರ ನೇಮಕ, ವಿಶೇಷ ಆಹ್ವಾನಿತರಾಗಿ 25 ಮುಖಂಡರು

ಡಿ. 5ರಂದು ಬೆಳಗಾವಿಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸದಸ್ಯರ ಪಟ್ಟಿ ಪ್ರಕಟ ಮಾಡಲಾಗಿದೆ. ಈ ಸದಸ್ಯರ ಅವಧಿ 2023ರವರೆಗೆ ಇರಲಿದೆ. ಜತೆಗೆ 25 ಮುಖಂಡರನ್ನು ರಾಜ್ಯ ಕಾರ್ಯಕಾರಿಣಿಯ ವಿಶೇಷ ಆಹ್ವಾನಿತರಾಗಿ ಪರಿಗಣಿಸಲಾಗಿದೆ.

Vijaya Karnataka 30 Nov 2020, 10:33 pm
ಬೆಂಗಳೂರು: ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯರ ಪಟ್ಟಿಯನ್ನು ಪರಿಷ್ಕರಿಸಿ 69 ಸದಸ್ಯರ ಹೊಸ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಪೈಕಿ ಸಂಘ ಪರಿವಾರದ ಮೂಲದವರು ಹಾಗೂ ಪಕ್ಷ ನಿಷ್ಠರಿಗೆ ಸಿಂಹಪಾಲು ದೊರಕಿದೆ.
Vijaya Karnataka Web nalin kumar kateel


ಡಿಸೆಂಬರ್‌ 5ರಂದು ಬೆಳಗಾವಿಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸದಸ್ಯರ ಪಟ್ಟಿ ಪ್ರಕಟ ಮಾಡಲಾಗಿದೆ. ಈ ಸದಸ್ಯರ ಅವಧಿ 2023ರವರೆಗೆ ಇರುತ್ತದೆ. ಜತೆಗೆ 25 ಮುಖಂಡರನ್ನು ರಾಜ್ಯ ಕಾರ್ಯಕಾರಿಣಿಯ ವಿಶೇಷ ಆಹ್ವಾನಿತರಾಗಿ ಪರಿಗಣಿಸಲಾಗಿದೆ.
ರಾಜ್ಯ ಕಾರ್ಯಕಾರಿಣಿ ಸದಸ್ಯರಾದವರಲ್ಲಿ ಹೆಚ್ಚಿನವರು ಮಾಜಿ ಜಿಲ್ಲಾಧ್ಯಕ್ಷರು ಹಾಗೂ ನಾನಾ ಸ್ತರದಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡವರು ಇದ್ದಾರೆ. ಹಿರಿಯ ಮುಖಂಡರು, ಮಾಜಿ ಶಾಸಕರು, ಮಾಜಿ ಸಂಸದರನ್ನು ವಿಶೇಷ ಆಹ್ವಾನಿತರಾಗಿ ನೇಮಿಸಲಾಗಿದೆ.

ವಿಶೇಷ ಆಹ್ವಾನಿತರ ಪಟ್ಟಿಯಲ್ಲಿ ಪ್ರಭಾಕರ ಕೋರೆ, ಸಿ.ಎಚ್‌.ವಿಜಯಶಂಕರ್‌, ಬಿ.ಸೋಮಶೇಖರ್‌, ಕೃಷ್ಣ ಪಾಲೇಮಾರ್‌, ನಾರಾಯಣ ಸಾ. ಭಾಂಡಗೆ, ಬಾಬುರಾವ್‌ ಚಿಂಚನಸೂರ್‌, ಡಾ.ಎಂ.ಆರ್‌.ಹುಲಿನಾಯ್ಕರ್‌, ಕೆ.ಶಿವರಾಂ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಎನ್‌.ಜ್ಯೋತಿರೆಡ್ಡಿ, ಡಿ.ಎಸ್‌.ವೀರಯ್ಯ, ಶಂಕರ ಬಿದರಿ, ಮಾಳವಿಕ ಅವಿನಾಶ್‌, ಎಂ.ಎಚ್‌.ಶ್ರೀಧರ್‌ ಮುಂತಾದವರು ಇದ್ದಾರೆ.

ಪಕ್ಷದ ಮೇಲುಗೈ?

ನಿಗಮ ಮಂಡಳಿ ನೇಮಕದ ವೇಳೆ ಪಕ್ಷದ ಶಿಫಾರಸಿಗೆ ಪ್ರಾಶಸ್ತ್ಯ ನೀಡಿಲ್ಲ. ಸಿಎಂ ಬಿ.ಎಸ್‌.ಯಡಿಯೂರಪ್ಪ ತಮ್ಮ ಬೆಂಬಲಿಗರಿಗೆ ಆದ್ಯತೆ ಕೊಟ್ಟಿದ್ದಾರೆ. ಅದರಲ್ಲೂ ಕೆಜೆಪಿಯಿಂದ ಬಂದವರಿಗೆ ಮಣೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದಕ್ಕೆ ತಿರುಗೇಟು ನೀಡುವಂತೆ ಕಾರ್ಯಕಾರಿಣಿ ಸದಸ್ಯರ ನೇಮಕದಲ್ಲಿ ಪಕ್ಷ ಮೇಲುಗೈ ಪಡೆದಿದೆ ಎಂದು ಹೇಳಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ