ಆ್ಯಪ್ನಗರ

ಮೈಸೂರಲ್ಲಿ 70 ಸಾವಿರ ಮಂದಿಯ ಯೋಗ

70,000ಕ್ಕೂ ಹೆಚ್ಚು ಜನರು ಯೋಗ ಪ್ರದರ್ಶನ ಮಾಡುವ ಮೂಲಕ ಮೈಸೂರು ಕೀರ್ತಿ ಪತಾಕೆ ಹಾರಿಸಿದರು.

Vijaya Karnataka 22 Jun 2019, 5:00 am
ಮೈಸೂರು: 70,000ಕ್ಕೂ ಹೆಚ್ಚು ಜನರು ಯೋಗ ಪ್ರದರ್ಶನ ಮಾಡುವ ಮೂಲಕ ಮೈಸೂರು ಕೀರ್ತಿ ಪತಾಕೆ ಹಾರಿಸಿದರು.
Vijaya Karnataka Web Mysore


ಇಲ್ಲಿನ ರೇಸ್‌ಕೋರ್ಸ್‌ ಆವರಣದಲ್ಲಿ ಈ ಬೃಹತ್‌ ಯೋಗ ಪ್ರದರ್ಶನ ನಡೆಯಿತು. ಭಾಗವಹಿಸುವವರ ಸಂಖ್ಯೆಯನ್ನು ಹೆಚ್ಚಿಸಿಕೊಂಡ ಮೈಸೂರು, ತನ್ನ ದಾಖಲೆಯನ್ನ ತಾನೇ ಅಳಿಸಿ ಹಾಕಿ ಹೊಸ ದಾಖಲೆ ಸೃಷ್ಟಿಸಿದೆ. ಸಿದ್ಧತೆಗೆ ದಿನಗಳು ಕಡಿಮೆ ಕಾಲಾವಕಾಶವಿದ್ದ ಕಾರಣ ಜಿಲ್ಲಾಡಳಿತ ಈ ಬಾರಿ ಅಂತಾರಾಷ್ಟ್ರೀಯ ಯೋಗ ದಿನದಂದು ದಾಖಲೆಯ ಯೋಗ ಪ್ರದರ್ಶಿಸುವ ನಿರ್ಧಾರವನ್ನು ಕೈಬಿಟ್ಟಿತು. ಆದರೆ ಯೋಗವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಒಂದು ಲಕ್ಷ ಜನರನ್ನು ಒಳಗೊಂಡಂತೆ ಬೃಹತ್‌ ಯೋಗ ಪ್ರದರ್ಶಿಸುವ ಗುರಿ ಹೊಂದಲಾಗಿತ್ತು. ಅಂತೆಯೆ ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ರಾಜ್ಯ ಸರಕಾರ 60 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿತ್ತು. ಕಾರ್ಯಕ್ರಮ ಆಯೋಜನೆಗೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ವಿಶಾಲವಾದ ರೇಸ್‌ಕೋರ್ಸ್‌ ಆವರಣವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಕಳೆದ ಬಾರಿ 60,000 ಮಂದಿ ಇದೇ ವೇದಿಕೆಯಲ್ಲಿ ಸೇರಿ ಸಾಮೂಹಿಕ ಯೋಗ ಪ್ರದರ್ಶಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ