ಆ್ಯಪ್ನಗರ

ರೇಷನ್‌ ಕಾರ್ಡ್‌ಗೆ ಆಧಾರ್‌ ಲಿಂಕ್‌ ಆಗದಿದ್ದರೂ ಪಡಿತರ ನಿರಾಕರಿಸಲ್ಲ: ಖಾದರ್‌

ರೇಷನ್‌ ಕಾರ್ಡ್‌ಗೆ ಆಧಾರ್‌ ಲಿಂಕ್‌ ಬಹುತೇಕ ಪೂರ್ಣಗೊಂಡಿದೆ.

Vijaya Karnataka 20 Oct 2017, 9:54 am
ಬೆಂಗಳೂರು: ರಾಜ್ಯದಲ್ಲಿ ರೇಷನ್‌ ಕಾರ್ಡ್‌ಗೆ ಆಧಾರ್‌ ಲಿಂಕ್‌ ಮಾಡಿದವರ ಪ್ರಮಾಣ ಬಹುತೇಕ ಪೂರ್ಣಗೊಂಡಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ.
Vijaya Karnataka Web aadhar link to pds done khader
ರೇಷನ್‌ ಕಾರ್ಡ್‌ಗೆ ಆಧಾರ್‌ ಲಿಂಕ್‌ ಆಗದಿದ್ದರೂ ಪಡಿತರ ನಿರಾಕರಿಸಲ್ಲ: ಖಾದರ್‌


ಬಾಕಿ ಇದ್ದವರಿಗೂ ಪಡಿತರ ನಿರಾಕರಿಸಿಲ್ಲ. ಆಧಾರ್‌ ಕಡ್ಡಾಯಕ್ಕಾಗಿ ಕೇಂದ್ರವು ಡಿಸೆಂಬರ್‌ವರೆಗೂ ಗಡುವು ವಿಧಿಸಿದೆ. ಆನ್‌ಲೈನ್‌ ಮೂಲಕ ಆಧಾರ್‌ ನೋಂದಣಿ ಮಾಡಿದ ಸಂಖ್ಯೆಯನ್ನು ಆಹಾರ ನಿರೀಕ್ಷಕರಿಗೆ ತಲುಪಿಸಿದ್ದಲ್ಲಿ ಪಡಿತರ ಸಿಗುತ್ತದೆ ಎಂದು ಯು.ಟಿ. ಖಾದರ್‌ ತಿಳಿಸಿದ್ದಾರೆ.

ಪಡಿತರ ಲಭ್ಯ

ರಾಜ್ಯದಲ್ಲಿ ಆಧಾರ್‌ ಸಂಖ್ಯೆ ಲಿಂಕ್‌ ಪ್ರಮಾಣ ಶೇ.99ರಷ್ಟು ಪೂರ್ಣಗೊಂಡಿರುವುದರಿಂದ ಎಲ್ಲ ಕಾರ್ಡ್‌ದಾರರಿಗೂ ಪಡಿತರ ವಿತರಣೆಯಾಗುತ್ತಿದೆ. ಆಧಾರ್‌ ಲಿಂಕ್‌ ಮಾಡದವರಿಗೂ ಪಡಿತರ ನಿರಾಕರಿಸುತ್ತಿಲ್ಲ ಎಂದು ಆಹಾರ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

''ಕೇಂದ್ರ ಸರಕಾರ ಪಡಿತರ ಚೀಟಿಗೆ ಆಧಾರ್‌ ಜೋಡಣೆ ಕಡ್ಡಾಯ ಮಾಡಿದೆ. ಇದರನ್ವಯ ಎರಡು ವರ್ಷದಿಂದ ರಾಜ್ಯದಲ್ಲಿ ಹಲವು ಗಡುವಿನ ಬಳಿಕ ಬಹುತೇಕ ಆಧಾರ್‌ ಲಿಂಕ್‌ ಆಗಿದೆ. ಕೆಲವೆಡೆ ಮಾತ್ರ ತಾಂತ್ರಿಕ ಕಾರಣಕ್ಕಾಗಿ ಆಧಾರ್‌ ಸಂಖ್ಯೆ ಜೋಡಣೆ ಆಗಿಲ್ಲ. ಈ ಬಗ್ಗೆ ಆಹಾರ ಇಲಾಖೆಗೆ ಈ ಮಾಹಿತಿ ನೀಡಿದ್ದಲ್ಲಿ ಮಾಸಿಕ ಪಡಿತರ ನಿರಾಕರಿಸುವುದಿಲ್ಲ,'' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

''ಕೆಲವೆಡೆ ವೃದ್ಧರ ಕೈಬೆರಳ ರೇಖೆಗಳು ಅಳಿಸಿಹೋಗಿರುವುದರಿಂದ ಆಧಾರ್‌ಗೆ ಬೆರಳಚ್ಚು ನೀಡಲು ಸಾಧ್ಯವಾಗಿಲ್ಲ. ಇಂತಹ ಕೆಲ ಪ್ರಕರಣಗಳು ಇಲಾಖೆ ಗಮನಕ್ಕೆ ಬಂದಿದ್ದು, ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗಿದೆ. ಇಂಥವರು ಆಯಾ ಆಹಾರ ನಿರೀಕ್ಷಕರ ಬಳಿ ತೆರಳಿ ದೃಢೀಕರಣ ಮಾಡಿಸಿದ್ದಲ್ಲಿ ಆಧಾರ್‌ನಿಂದ ವಿನಾಯಿತಿ ನೀಡುವ ನಿಯಮವನ್ನು ಇಲಾಖೆ ಅನುಸರಿಸುತ್ತಿದೆ'' ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Aadhar Link to PDS Done: Khader

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ