ಆ್ಯಪ್ನಗರ

ಆರೋಗ್ಯ ಸಚಿವ ಶ್ರೀರಾಮುಲು ರಾಜೀನಾಮೆಗೆ ಎಎಪಿ ಆಗ್ರಹ

ರಾಜ್ಯದೆಲ್ಲೆಡೆ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದ್ದು, ಈ ಮಾರಕ ವೈರಾಣುವಿನಿಂದ ರಾಜ್ಯವನ್ನು ಆ ದೇವರೇ ಕಾಪಾಡಬೇಕು ಎಂದು ಆರೋಗ್ಯ ಸಚಿವ ಶ್ರೀರಾಮುಲು ಬುಧವಾರ ಹೇಳಿದ್ದರು. ಈ ಹೇಳಿಕೆಯೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

Vijaya Karnataka 16 Jul 2020, 2:58 pm

ಬೆಂಗಳೂರು: ಕೊರೊನಾ ವೈರಸ್‌ ಮಹಾ ಭೀತಿಯಿಂದ ನರಳುತ್ತಿರುವ ನಮ್ಮ ರಾಜ್ಯವನ್ನು ಆ ಭಗವಂತನೇ ಕಾಪಾಡಬೇಕು ಎಂಬ ಕಳವಳಕಾರಿ ಹೇಳಿಕೆಯನ್ನು ನೀಡಿರುವ ಆರೋಗ್ಯ ಸಚಿವ ಶ್ರೀರಾಮುಲು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಕರ್ನಾಟಕ ಎಎಪಿ ಸಂಚಾಲಕ ಪೃಥ್ವಿ ರೆಡ್ಡಿ ಆಗ್ರಹಿಸಿದ್ದಾರೆ.
Vijaya Karnataka Web sriramulu


ಬಿ ಶ್ರೀರಾಮಲು ಒಂದು ಕ್ಷಣವೂ ಆರೋಗ್ಯ ಇಲಾಖೆಯ ಮಂತ್ರಿಯಾಗಿ ಮುಂದುವರಿಯುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಆ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ರಾಜ್ಯದ ಜನತೆಯ ಸಂಪೂರ್ಣ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಪೃಥ್ವಿ ರೆಡ್ಡಿ, ಈಗಲೇ ರಾಜ್ಯದ ಜನತೆ ಭಯ ಭೀತಿಯಿಂದ ನರಳುತ್ತಿರುವ ಸಂದರ್ಭದಲ್ಲಿ ಆರೋಗ್ಯ ಸಚಿವರಾಗಿ ಧೈರ್ಯವನ್ನು ನೀಡುವ ಬದಲಾಗಿ ಈ ರೀತಿಯ ಬೇಜವಾಬ್ದಾರಿ ಹೇಳಿಕೆಯಿಂದ ರಾಜ್ಯದ ಜನತೆಯನ್ನು ಮತ್ತಷ್ಟು ಆತಂಕಕ್ಕೆ ದೂಡಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ಇಂತಹ ಆರೋಗ್ಯ ಸಂದಿಗ್ಧತೆಯನ್ನು ನಿಭಾಯಿಸುವಲ್ಲಿ ಸ್ವತಃ ಆರೋಗ್ಯ ಸಚಿವರೇ ಸಂಪೂರ್ಣ ಸೋತು ಕೈಚೆಲ್ಲಿರುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ತಿಳಿಸಿದ್ದಾರೆ.
ದೇವರು ಮಾತ್ರ ಕಾಪಾಡಲು ಸಾಧ್ಯ: ವ್ಯಾಪಕ ಚರ್ಚೆಗೆ ಕಾರಣವಾದ ತಮ್ಮ ಹೇಳಿಕೆಗೆ ಶ್ರೀರಾಮುಲು ಸ್ಪಷ್ಟನೆ!

‘Trust in god but tie your camel’ ಎಂಬ ಆಂಗ್ಲ ಭಾಷೆಯ ನಾಣ್ನುಡಿಯಂತೆ ಸಚಿವರು ಭಗವಂತನನ್ನು ನಂಬಿ ಒಂಟೆಯನ್ನು ಕಟ್ಟಿ ಹಾಕದೆ ಓಡಿ ಹೋಗಲು ಬಿಟ್ಟಿರುವ ಸಂಗತಿ ಗೋಚರಿಸುತ್ತಿದೆ. ಆಮ್ ಆದ್ಮಿ ಪಕ್ಷದ ದೆಹಲಿ ರಾಜ್ಯ ಸರಕಾರ ಕೊರೊನಾ ನಿಯಂತ್ರಣಕ್ಕೆ ಕೈಗೊಂಡಿರುವ ಅನೇಕ ಕ್ರಮಗಳನ್ನು ಸರಕಾರದ ಬಳಿ ಹಂಚಿಕೊಳ್ಳಲು ನಾವು ಸಿದ್ಧರಿದ್ದೇವೆಂದು ತಿಳಿಸಿದ್ದೇವೆ. ಆದರೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಸುಧಾಕರ್ ಹಾಗೂ ಶ್ರೀರಾಮುಲು ಈ ಬಗ್ಗೆ ಸಿದ್ಧರಿಲ್ಲದಿರುವುದು ಕಳವಳಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯವನ್ನು ಕೊರೊನಾದಿಂದ ದೇವರೇ ಕಾಪಾಡಬೇಕು! ಶ್ರೀರಾಮುಲು ಹೇಳಿಕೆಗೆ ಡಿಕೆಶಿ ಗರಂ

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದ್ದು, ಈ ಮಾರಕ ವೈರಾಣುವಿನಿಂದ ರಾಜ್ಯವನ್ನು ಆ ದೇವರೇ ಕಾಪಾಡಬೇಕು ಎಂದು ಆರೋಗ್ಯ ಸಚಿವ ಶ್ರೀರಾಮುಲು ಬುಧವಾರ ಹೇಳಿದ್ದರು. ಈ ಹೇಳಿಕೆಯೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ