ಆ್ಯಪ್ನಗರ

ಹೊಸ ವರ್ಷಾಚರಣೆಗೆ ರಾಜ್ಯದ ಹಲವೆಡೆ ಹೆಚ್ಚುವರಿ ಆಂಬ್ಯುಲೆನ್ಸ್‌ ನಿಯೋಜನೆ

ಹೊಸ ವರ್ಷಾಚರಣೆಗೆ ಬೆಂಗಳೂರು ಸೇರಿ ರಾಜ್ಯದ ಜನತೆ ಸಿದ್ಧವಾಗುತ್ತಿದ್ದಾರೆ. ಆದರೆ, ಈ ದಿನ ಅಪಘಾತಗಳು ಹೆಚ್ಚು ಸಂಭವಿಸುತ್ತವೆ ಎಂಬ ಕಾರಣದಿಂದಾಗಿ ಹೆಚ್ಚುವರಿ ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗುತ್ತಿದೆ.

Vijaya Karnataka 31 Dec 2019, 9:46 am
ಬೆಂಗಳೂರು: ಹೊಸ ವರ್ಷಾಚರಣೆಯ ದಿನವಾದ ಡಿಸೆಂಬರ್ 31ರ ರಾತ್ರಿ ಅಪಘಾತಗಳು ಸಂಭವಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಆಯ್ದ ಸ್ಥಳಗಳಲ್ಲಿ 'ಆರೋಗ್ಯ ಕವಚ 108' ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗುತ್ತಿದೆ.
Vijaya Karnataka Web 108 ambulance 12


ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಹೊಸ ವರ್ಷಾಚರಣೆಯ ಸಮಯದಲ್ಲಿ ಅಪಘಾತ ಪ್ರಮಾಣ ಶೇ.30 ರಿಂದ ಶೇ.35 ರಷ್ಟು ಹೆಚ್ಚುವುದು ಕಂಡು ಬಂದಿದೆ. ಹೀಗಾಗಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ ಹಾಗೂ ಮಂಗಳೂರು ನಗರಗಳಲ್ಲಿ ಪೊಲೀಸ್‌ ಠಾಣೆ, ಆಸ್ಪತ್ರೆ ಹಾಗೂ ಅಗ್ನಿಶಾಮಕ ದಳದ ಕಚೇರಿ ಸೇರಿದಂತೆ ಹಲವೆಡೆ ಹೆಚ್ಚುವರಿ ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗುತ್ತದೆ.

ಕಳೆದ ವರ್ಷ ಅಪಘಾತ ಸಂಭವಿಸಿದ ಪ್ರದೇಶಗಳ ಆಧಾರದ ಮೇಲೆ ಸಂಭಾವ್ಯ ಸ್ಥಳಗಳನ್ನು ಗುರುತಿಸಿ ಅಲ್ಲಿ ಆಂಬ್ಯುಲೆನ್ಸ್‌ ನಿಯೋಜಿಸಲಾಗುತ್ತದೆ. ಹೊಸ ವರ್ಷದ ರಾತ್ರಿ 11.45 ರಿಂದ 12.30 ರವರೆಗೆ ನೆಟ್‌ವರ್ಕ್ ದುರ್ಬಲಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ, ಆಂಬ್ಯುಲೆನ್ಸ್‌ಗಳನ್ನು ಪೊಲೀಸ್‌ ವೈರ್‌ಲೆಸ್‌ ಮೂಲಕ ಸಂಪರ್ಕಿಸಲು ಪೊಲೀಸ್‌ ಠಾಣೆಗಳ ಬಳಿ ಆಂಬ್ಯುಲೆನ್ಸ್‌ಗಳನ್ನು ಇರಿಸಲು ತೀರ್ಮಾನಿಸಲಾಗಿದೆ.

ಈ ಸುದ್ದಿ ಓದಿ: ಹೊಸ ವರ್ಷಾಚರಣೆ ಅಬ್ಬರ: ರಾಜ್ಯದೆಲ್ಲೆಡೆ ಪೊಲೀಸರ ಕಟ್ಟೆಚ್ಚರ

ಇದನ್ನೂ ಓದಿ: New Year Scam: ಅಪಾಯಕಾರಿ ವಂಚನೆಗೆ ಬಲಿಯಾಗಬೇಡಿ..

New Year Party: ಕ್ಯಾಬ್ ಬುಕ್ ಮಾಡುವಾಗ ಎಚ್ಚರಿಕೆ..

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ