ಆ್ಯಪ್ನಗರ

ಏರೋ ಇಂಡಿಯಾ ಅಗ್ನಿ ದುರಂತ: ಸುಟ್ಟ ವಾಹನಗಳ ಮಾಲೀಕರಿಗೆ ಪೂರ್ಣ ವಿಮೆ

ಏರೋ ಇಂಡಿಯಾ ಸಂದರ್ಭದಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಸುಟ್ಟುಹೋಗಿರುವ ಎಲ್ಲ 277 ವಾಹನಗಳ ಮಾಲೀಕರಿಗೆ ಸಂಪೂರ್ಣ ವಿಮಾ ಮೊತ್ತ ಸಿಗಲಿದೆ...

Vijaya Karnataka 6 Mar 2019, 5:00 am
ಬೆಂಗಳೂರು: ಏರೋ ಇಂಡಿಯಾ ಸಂದರ್ಭದಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಸುಟ್ಟುಹೋಗಿರುವ ಎಲ್ಲ 277 ವಾಹನಗಳ ಮಾಲೀಕರಿಗೆ ಸಂಪೂರ್ಣ ವಿಮಾ ಮೊತ್ತ ಸಿಗಲಿದೆ.
Vijaya Karnataka Web Bableshwar- MB Patil- Congress


ವಿಮೆ ಇಲ್ಲದ ಕಾರು ಮತ್ತಿತರ ವಾಹನಗಳಿಗೂ ಮಾನವೀಯತೆ ಆಧಾರದ ಮೇಲೆ ಸಿಎಂ ಪರಿಹಾರ ನಿಧಿಯಿಂದ ಸ್ವಲ್ಪಮಟ್ಟಿಗೆ ಪರಿಹಾರ ಕಲ್ಪಿಸಲು ರಾಜ್ಯ ಸರಕಾರ ನಿರ್ಧರಿಸಿದೆ.

ಈ ಸಂಬಂಧ ಗೃಹ ಸಚಿವ ಎಂ.ಬಿ.ಪಾಟೀಲ್‌ ಮಂಗಳವಾರ ವಿಧಾನಸೌಧದಲ್ಲಿ ವಿಮಾ ಕಂಪನಿಗಳ ಪ್ರತಿನಿಧಿಗಳು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

''ಫೆ.23 ರಂದು ಸಂಭವಿಸಿದ ಅಗ್ನಿ ದುರಂತದಲ್ಲಿ ಒಟ್ಟು 277 ವಾಹನಗಳು ಸುಟ್ಟಿದ್ದು, ಈ ಪೈಕಿ 251 ವಾಹನಗಳು ಶೇ.100 ರಷ್ಟು ಸುಟ್ಟುಹೋಗಿವೆ. 60 ವಾಹನಗಳಲ್ಲಿ ಎಂಜಿನ್‌ ನಂಬರ್‌ ಕೂಡ ಅಳಿಸಿಹೋಗಿ ಗುರುತಿಸಲೂ ಸಾಧ್ಯವಾಗಿಲ್ಲ. 26 ವಾಹನಗಳು ಭಾಗಶಃ ಸುಟ್ಟಿವೆ,'' ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.

ವಿಮಾ ಕಂಪನಿಯೊಂದರ ಮೂಲಕ ಮೂವರು ಫಲಾನುಭವಿಗಳಿಗೆ ಸಾಂಕೇತಿಕವಾಗಿ ವಿಮಾ ಪರಿಹಾರದ ಚೆಕ್‌ ಅನ್ನು ಸಚಿವರು ಹಸ್ತಾಂತರಿಸಿದರು.

ರಾಜ್ಯದಿಂದ ತನಿಖೆ ಇಲ್ಲ

''ಅಗ್ನಿ ದುರಂತದ ಕುರಿತಂತೆ ರಾಜ್ಯ ಸರಕಾರದ ಕಡೆಯಿಂದ ಯಾವುದೇ ತನಿಖೆ ನಡೆಯುವುದಿಲ್ಲ. ದುರಂತ ಸಂಭವಿಸಿದ ಸ್ಥಳವು ರಕ್ಷಣಾ ಸಚಿವಾಲಯಕ್ಕೆ ಸೇರಿರುವ ಕಾರಣ ಕೇಂದ್ರ ಸರಕಾರವೇ ತನಿಖೆ ನಡೆಸುತ್ತಿದೆ. ಸಿಎಂ ಹಾಗೂ ರಕ್ಷಣಾ ಸಚಿವರು ಸಭೆ ನಡೆಸಿ ಈ ತೀರ್ಮಾನ ಮಾಡಿದ್ದಾರೆ,'' ಎಂದು ತಿಳಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ