ಆ್ಯಪ್ನಗರ

ಹೆಚ್ಚಾಗ್ತಿದೆ ಸೈಕ್ಲಿಂಗ್‌ ಹವ್ಯಾಸ, ಲಾಕ್‌ಡೌನ್‌ ಬಳಿಕ ರಾಜ್ಯ ಸೈಕಲ್‌ ಉದ್ಯಮಕ್ಕೆ ಮರುಜೀವ

ಕೊರೊನಾ ಲಾಕ್‌ಡೌನ್‌ ಬಳಿಕ ರಾಜ್ಯದಲ್ಲಿ ಸೈಕಲ್‌ ಉದ್ಯಮಕ್ಕೆ ಮರುಜೀವ ಬಂದಿದೆ. ಬೈಕ್‌ ಕಾರು ಖರೀದಿಯಲ್ಲಿ­ದ್ದವರು ಸಹ ಸೈಕಲ್‌ ಖರೀದಿಗೆ ಮುಂದಾಗುತ್ತಿದ್ದಾರೆ.

Vijaya Karnataka Web 18 Jul 2020, 11:18 am
ನಾಗರಾಜು ಎ. ಚಿಕ್ಕಬಳ್ಳಾಪುರ
Vijaya Karnataka Web cycling


ಕೊರೊನಾ ಲಾಕ್‌ಡೌನ್‌ ಒಂದಷ್ಟು ಕ್ಷೇತ್ರ ಗಳಿಗೆ ದೊಡ್ಡ ಪೆಟ್ಟು ನೀಡಿದ್ದರೆ, ಹಲವು ಕ್ಷೇತ್ರಗಳಿಗೆ ಹೊಸ ಚೈತನ್ಯ ನೀಡಿದೆ. ರಾಜ್ಯದಲ್ಲಿ ಸೈಕಲ್‌ ಉದ್ಯಮಕ್ಕೆ ಮರುಜೀವ ನೀಡಿದ್ದು, ಬೈಕ್‌ ಕಾರು ಖರೀದಿಯಲ್ಲಿ­ದ್ದವರು ಸಹ ಸೈಕಲ್‌ ಖರೀದಿಗೆ ಮುಂದಾಗುತ್ತಿದ್ದಾರೆ.

ಜತೆಗೆ, ವೀಕೆಂಡ್‌ಗಳಲ್ಲಿ ಪ್ರಕೃತಿಯೆಡೆಗೆ ಸೈಕ್ಲಿಂಗ್‌ ಹೊರಡುವ ಹವ್ಯಾಸಕ್ಕೆ ಮಾರು ಹೋಗುತ್ತಿದ್ದಾರೆ. ವರ್ಷದಲ್ಲಿ ಸಾಮಾನ್ಯವಾಗಿ 4 ತಿಂಗಳಷ್ಟೇ ಸೈಕಲ್‌ಗಳಿಗೆ ಬೇಡಿಕೆ ಸೃಷ್ಟಿಯಾಗುತ್ತದೆ. ರಾಜ್ಯದಲ್ಲಿ ಮಾರ್ಚ್ ಅಂತ್ಯದಿಂದ ಆಗಸ್ಟ್‌ ಆರಂಭಕ್ಕೆ ಬಹುತೇಕ ಸೈಕಲ್‌ ಮಾರಾಟ ಮುಕ್ತಾಯ ಕಾಣುತ್ತದೆ. ಮಕ್ಕಳ ಬೇಸಿಗೆ ರಜೆಯನ್ನಾಧರಿಸಿ ಸೈಕಲ್‌ ಖರೀದಿಗೆ ಪೋಷಕರು ಮುಂದಾಗುತ್ತಾರೆ. ರಾಜ್ಯದ 1200ಕ್ಕೂ ಹೆಚ್ಚು ಸೈಕಲ್‌ ಶಾಪ್‌ಗಳಲ್ಲಿ ವಾರ್ಷಿಕ 2.5ಲಕ್ಷದಿಂದ 3 ಲಕ್ಷ ಸೈಕಲ್‌ಗಳು ಮಾರಾಟವಾಗುತ್ತಿದ್ದವು. ಆದರೆ, ಈ ಬಾರಿ ಈ ಸಂಖ್ಯೆ ದ್ವಿಗುಣ ಹೊಂದಿದೆ. 20 ವರ್ಷಗಳಲ್ಲಿಇದೇ ಮೊದಲ ಬಾರಿಗೆ ಸೈಕಲ್‌ಗಳ ಖರೀದಿ ಯಲ್ಲಿ ಭಾರಿ ಎನ್ನುವಷ್ಟು ಹೆಚ್ಚಳ ಕಂಡುಬಂದಿದ್ದು, ಸೈಕಲ್‌ ಮಾರಾಟ ಗಾರರಿಗೆ ಪುನರ್ಜೀವ ಬಂದಂತಾಗಿದೆ.

ಕಳೆದ 20 ವರ್ಷಗಳಿಂದ ಸೈಕಲ್‌ಗಳಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಇಳಿಮುಖವಾಗುತ್ತಿತ್ತು. ಈ ಹಿನ್ನೆಲೆ ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ಸೈಕಲ್‌ ಬಿಡಿಭಾಗಗಳ ಹೋಲ್‌ಸೇಲ್‌ನಲ್ಲಿ ಸಿಗುವುದು ಕಷ್ಟಸಾಧ್ಯವಾಗುತ್ತಿತ್ತು. ರಾಜ್ಯದಲ್ಲಿ ಬಹುತೇಕ ಎಲ್ಲೆಡೆ ಬಿಡಿಭಾಗಗಳ ಮಾರಾಟಕ್ಕೆ ಬ್ರೇಕ್‌ ಬಿದ್ದಿತ್ತು. ರಾಜ್ಯದ ಸೈಕಲ್‌ ರೀಟೈಲರ್ಸ್‌ ಹೊರರಾಜ್ಯಗಳಿಂದ ವಸ್ತುಗಳನ್ನು ಖರೀದಿಸಬೇಕಾದ ಸ್ಥಿತಿಯಿದೆ. ಪ್ರಸ್ತುತ, ಪಂಜಾಬ್‌ನ ಲೂದಿಯಾನಾದಿಂದ ಸೈಕಲ್‌, ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಬೆಂಗಳೂರಿನ ಸೈಕಲ್‌ಶೋರೂಂ ವ್ಯಾಪಾರಸ್ಥ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ