ಆ್ಯಪ್ನಗರ

ಭಗವದ್ಗೀತೆಯನ್ನು ಧರ್ಮಗ್ರಂಥವೆಂದು ಏಕೆ ಒಪ್ಪಬೇಕು?: ಪ್ರೊ.ಜಿ.ಕೆ.ಗೋವಿಂದರಾವ್

ತಮ್ಮದೇ ಶೈಲಿಯಲ್ಲಿ ಹಿಂದೂ ಧರ್ಮ ಹಾಗೂ ಅದರ ಪವಿತ್ರ ಗ್ರಂಥವನ್ನು ಜರಿಯುವುದನ್ನು ಮುಂದುವರಿಸಿದ ಚಿಂತಕ ಪ್ರೊ.ಜಿ.ಕೆ.ಗೋವಿಂದ ರಾವ್, 'ಭಾರತ ನಮ್ಮ ರಾಷ್ಟ್ರವೇ ಹೊರತು, ಇದು ಹಿಂದೂ ರಾಷ್ಟ್ರವಲ್ಲ, ಎಂದರು.

ವಿಕ ಸುದ್ದಿಲೋಕ 21 Aug 2016, 3:46 pm
ಬೆಂಗಳೂರು: ತಮ್ಮದೇ ಶೈಲಿಯಲ್ಲಿ ಹಿಂದೂ ಧರ್ಮ ಹಾಗೂ ಅದರ ಪವಿತ್ರ ಗ್ರಂಥವನ್ನು ಜರಿಯುವುದನ್ನು ಮುಂದುವರಿಸಿದ ಚಿಂತಕ ಪ್ರೊ.ಜಿ.ಕೆ.ಗೋವಿಂದ ರಾವ್, 'ಭಾರತ ನಮ್ಮ ರಾಷ್ಟ್ರವೇ ಹೊರತು, ಇದು ಹಿಂದೂ ರಾಷ್ಟ್ರವಲ್ಲ. ಕೇವಲ ಒಂದು ಗ್ರಂಥವಾದ ಭಗವದ್ಗೀತೆಯನ್ನು ಧರ್ಮಗ್ರಂಥವೆಂದು ಏಕೆ ಒಪ್ಪಬೇಕು?' ಎಂದು ಪ್ರಶ್ನಿಸಿದರು.
Vijaya Karnataka Web ahinda meet held in bangalore
ಭಗವದ್ಗೀತೆಯನ್ನು ಧರ್ಮಗ್ರಂಥವೆಂದು ಏಕೆ ಒಪ್ಪಬೇಕು?: ಪ್ರೊ.ಜಿ.ಕೆ.ಗೋವಿಂದರಾವ್


ಇಲ್ಲಿ ನಡೆದ ಯುವ ಅಹಿಂದ ಸಭೆಯಲ್ಲಿ ಮಾತನಾಡಿ, 'ಭಾರತವೊಂದು ವೈವಿಧ್ಯಮಯ ದೇಶ. ಪ್ರಜಾತಂತ್ರವೆಂದರೆ ವೈಯಕ್ತಿಕ ಸ್ವಾತಂತ್ರ್ಯ,' ಎಂದು ಹೇಳಿದ್ದು, 'ದೇಶದಲ್ಲಿ ಹಸುಗಳಾಗಿ ಹುಟ್ಟಬೇಕು. ಏಕೆಂದರೆ ಅದರ ರಕ್ಷಣೆಗೆ ಎಷ್ಟು ಜನರಿದ್ದಾರೆ ನೋಡಿ? ಹಸುಗಳನ್ನು ರಕ್ಷಿಸಲು ಮನುಷ್ಯನ ರಕ್ತ ಹರಿಸಬೇಕಾ?' ಎಂದರು.

'ನಾಲ್ಕು ಬಸ್, ಬ್ಯುಲ್ಡಿಂಗ್ ಕಟ್ಚಿದರೆ ಅಭಿವೃದ್ಧಿಯೇ?' ಎಂದು ಗುಜರಾತ್ ಅಭಿವೃದ್ಧಿ ಬಗ್ಗೆ ಮಾತನಾಡಿದ ಚಿಂತಕರು, 'ಅಭಿವೃದ್ಧಿ ಹೆಸರು ಹೇಳುವವರ ಬಗ್ಗೆ ಎಚ್ಚರವಿರಲಿ. ಗುಜರಾತ್‌ನಲ್ಲಿ ಏನು ನಡೆಯುತ್ತಿದೆ ನೋಡಿ?' ಎಂದು ಎಚ್ಚರಿಸಿ 'ನಾವು ಮುಂದಿನ ಚುನಾವಣೆಯಲ್ಲಿಯೂ ಗೆಲ್ಲುವ ಅಗತ್ಯವಿದೆ, ' ಎಂದರು.

'ಹೊಡೆಯುವುದಾದರೆ ನನಗೆ ಹೊಡೆಯಿರಿ,' ಎಂದು ಪ್ರಧಾನಿ ಮೋದಿ ಹೇಳಿಯನ್ನು ಉಲ್ಲೇಖಿಸಿದ ಅವರು, 'ಸುತ್ತಲೂ ಅಂಗರಕ್ಷಕರ ಇಟ್ಟುಕೊಂಡು ಹೊಡೀರಿ ಅಂದ್ರೆ? ಹೊರಗೆ ಬಂದು ಈ ಮಾತು ಹೇಳಿ. ಅಲಂಕಾರಿಕ ಮಾತುಗಳು ನಮಗೆ ಬೇಕಾಗಿಲ್ಲ,' ಮೋದಿಗೆ ಟಾಂಗ್ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ