ಆ್ಯಪ್ನಗರ

ಇನ್ನಷ್ಟು ದುಬಾರಿಯಾಗಲಿದೆ ಮದ್ಯ! ಹೆಚ್ಚುವರಿ ಸುಂಕ ವಿಧಿಸಲು ಸರಕಾರ ತಯಾರಿ

ಮದ್ಯದ ಎಂಆರ್‌ಪಿ ಮೇಲೆ ದಿಲ್ಲಿ ಸರಕಾರ ಶೇ.70 ರಷ್ಟು ಹಾಗೂ ಆಂಧ್ರ ಸರಕಾರ ಶೇ.25 ರಷ್ಟು ಹೆಚ್ಚುವರಿ ಅಬಕಾರಿ ತೆರಿಗೆ ಹೆಚ್ಚಳ ಮಾಡಿರುವ ಬೆನ್ನಲ್ಲೆ ಕರ್ನಾಟಕ ಸರಕಾರವೂ ಅಬಕಾರಿ ಮೇಲಿನ ಹೆಚ್ಚುವರಿ ತೆರಿಗೆ ಹೆಚ್ಚಿಸಬೇಕೆಂಬ ಸಲಹೆಗಳು ಸರಕಾರಕ್ಕೆ ಬಂದಿವೆ.

Vijaya Karnataka Web 5 May 2020, 10:33 pm
ಬೆಂಗಳೂರು: ಮದ್ಯದ ಎಂಆರ್‌ಪಿ ಮೇಲೆ ದಿಲ್ಲಿ ಸರಕಾರ ಶೇ.70 ರಷ್ಟು ಹಾಗೂ ಆಂಧ್ರ ಸರಕಾರ ಶೇ.25 ರಷ್ಟು ಹೆಚ್ಚುವರಿ ಅಬಕಾರಿ ತೆರಿಗೆ ಹೆಚ್ಚಳ ಮಾಡಿರುವ ಬೆನ್ನಲ್ಲೆ ಕರ್ನಾಟಕ ಸರಕಾರವೂ ಅಬಕಾರಿ ಮೇಲಿನ ಹೆಚ್ಚುವರಿ ತೆರಿಗೆ ಹೆಚ್ಚಿಸಬೇಕೆಂಬ ಸಲಹೆಗಳು ಸರಕಾರಕ್ಕೆ ಬಂದಿವೆ.
Vijaya Karnataka Web Liquor Store


ರಾಜ್ಯ ಸರಕಾರ ಈಗಾಗಲೇ 2020-21 ಸಾಲಿನ ಬಜೆಟ್‌ನಲ್ಲಿ ಮದ್ಯದ ಎಲ್ಲಾ 18 ಘೋಷಿತ ಸ್ಪ್ಯಾಬ್‌ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕಗಳ ದರವನ್ನು ಶೇ.6 ರಂದು ಹೆಚ್ಚಿಸಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಏ.1 ರಿಂದ ಜಾರಿಯಾಗದ ಹೊಸ ದರ ಮಂಗಳವಾರದಿಂದಲೇ ಜಾರಿಗೆ ಬಂದಿದೆ. ಇದರಿಂದ ಈ ವರ್ಷ 22,700 ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದೆ.

ಆದರೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದರಿಂದ ಸದ್ಯ ಸರಕಾರಕ್ಕೆ ಗ್ಯಾರೆಂಟಿ ಇರುವ ಆದಾಯ ಮೂಲವೆಂದರೆ ಅಬಕಾರಿ ಮಾತ್ರ. ಹೀಗಾಗಿ ಇದರ ಮೇಲೆ ಮತ್ತೆ ಶೇ.10 ರಿಂದ 15 ರಷ್ಟು ಹೆಚ್ಚುವರಿ ಅಬಕಾರಿ ಸುಂಕ ವಿಧಿಸಬೇಕೆಂಬ ಸಲಹೆಗಳು ಬಂದಿವೆ, ಆದರೆ ರಾಜ್ಯ ಸರಕಾರ ಇದರ ಬಗ್ಗೆ ಇನ್ನು ಯಾವುದೇ ತೀರ್ಮಾನ ಕೈಗೊಂಡಿಲ್ಲ.

ಮದ್ಯ ಪ್ರಿಯರಿಗೆ ಬೆಳಗ್ಗೆ ಕಿಕ್‌, ಸಂಜೆ ಶಾಕ್‌! 6% ಬೆಲೆ ಏರಿಕೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ