ಆ್ಯಪ್ನಗರ

ಭಾಸ್ಕರ್‌ ರಾವ್‌ ನೇಮಕ ಪ್ರಶ್ನಿಸಿ ಸಲ್ಲಿಸಿದ್ದ ಹಿಂಪಡೆದ ಅಲೋಕ್‌ ಕುಮಾರ್‌

ಬೆಂಗಳೂರು ನಗರ ಪೊಲೀಸ್‌ ಆಯುಕ್ತರನ್ನಾಗಿ ಹಿರಿಯ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆ.2ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಹಿಂದಿನ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಸಿಎಟಿಯಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ಹಿಂಪಡೆದರು.

Vijaya Karnataka 17 Aug 2019, 5:00 am
ಬೆಂಗಳೂರು : ಬೆಂಗಳೂರು ನಗರ ಪೊಲೀಸ್‌ ಆಯುಕ್ತರನ್ನಾಗಿ ಹಿರಿಯ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆ.2ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಹಿಂದಿನ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಸಿಎಟಿಯಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ಹಿಂಪಡೆದರು.
Vijaya Karnataka Web alokkumar withdraw application
ಭಾಸ್ಕರ್‌ ರಾವ್‌ ನೇಮಕ ಪ್ರಶ್ನಿಸಿ ಸಲ್ಲಿಸಿದ್ದ ಹಿಂಪಡೆದ ಅಲೋಕ್‌ ಕುಮಾರ್‌


ಈ ಬೆಳವಣಿಗೆ ಪೊಲೀಸ್‌ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಕೇಂದ್ರೀಯ ಆಡಳಿತ ನ್ಯಾಯಮಂಡಳಿ(ಸಿಎಟಿ)ಸದಸ್ಯರಾದ ಕೆ.ಬಿ. ಸುರೇಶ್‌ ಮತ್ತು ಸಿ.ವಿ. ಶಂಕರ್‌ ಅವರಿದ್ದ ಪೀಠದ ಮುಂದೆ ಅರ್ಜಿ ವಿಚಾರಣೆಗೆ ಬಂದಿತು.

ಆಗ ಅಲೋಕ್‌ ಕುಮಾರ್‌ ಪರ ವಕೀಲರು, ಮೆಮೊ ಸಲ್ಲಿಸಿ ತಾವು ಅರ್ಜಿಯನ್ನು ಹಿಂಪಡೆಯುವುದಾಗಿ ಹೇಳಿದರು. ಮೆಮೊದಲ್ಲಿ ಅರ್ಜಿ ವಾಪಸ್‌ ಪಡೆಯಲು ಯಾವುದೇ ಕಾರಣ ತಿಳಿಸಿಲ್ಲ. ಇದರಿಂದ ಗರಂ ಆದ ನ್ಯಾಯಪೀಠದ ಸದಸ್ಯರು, ಕೆಲ ಕಾಲ ಅರ್ಜಿದಾರ ಅಲೋಕ್‌ ಕುಮಾರ್‌ ಅವರಿಗೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದರು.

ಆದರೆ ಸರಕಾರದ ಪರ ವಾದ ಮಂಡನೆಗೆ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ, ''ಅರ್ಜಿದಾರರು ಸರಕಾರದ ಹಿರಿಯ ಅಧಿಕಾರಿ, ಹಾಗೆ ದಂಡ ವಿಧಿಸುವುದು ಸರಿಯಲ್ಲ ,''ಎಂದರು.

ಆಗ ನ್ಯಾಯಪೀಠ, ಅರ್ಜಿಯನ್ನು ವಾಪಸ್‌ ಪಡೆಯಲು ಸಮ್ಮತಿಸಿತು. ಕಳೆದ ವಿಚಾರಣೆ ವೇಳೆ ನ್ಯಾಯಪೀಠ ಭಾಸ್ಕರ್‌ ರಾವ್‌ ನೇಮಕಕ್ಕೆ ತಡೆ ನೀಡಲು ನಿರಾಕರಿಸಿತ್ತು.

ಅಲೋಕ್‌ ಕುಮಾರ್‌ 2019ರ ಜೂ.17ರಂದು ನಗರ ಪೊಲೀಸ್‌ಆಯುಕ್ತರಾಗಿ ನೇಮಕಗೊಂಡಿದ್ದರು. ಒಂದೂವರೆ ತಿಂಗಳಿಗೆ ಅವರನ್ನು ಆ ಹುದ್ದೆಯಿಂದ ವರ್ಗಾವಣೆ ಮಾಡಲಾಗಿತ್ತು.

''ಇದು ಕಾನೂನು ಬಾಹಿರ ಕ್ರಮವಾಗಿದೆ.ವರ್ಗಾವಣೆಯಲ್ಲಿ ಸಹಜ ನ್ಯಾಯಪಾಲನೆ ಮಾಡಿಲ್ಲ, ಅವರ ವರ್ಗಾವಣೆ ಪೊಲೀಸ್‌ ಕಾಯಿದೆ 1963 ಸೆಕ್ಷನ್‌ 20ಎಫ್‌ಗೆ, ಐಪಿಎಸ್‌ ಶ್ರೇಣಿ ನಿಯಮ 1954ರ ಉಲ್ಲಂಘನೆಯಾಗಿದೆ. ಸರಕಾರ ವಿವೇಚನೆ ಬಳಸದೆ ಕಾನೂನು ಮೀರಿ ಮಾಡಿರುವ ವರ್ಗಾವಣೆ ಮತ್ತು ನೇಮಕ ಆದೇಶವನ್ನು ರದ್ದುಗೊಳಿಸಬೇಕು''ಎಂದು ಅಲೋಕ್‌ ಕುಮಾರ್‌ ನ್ಯಾಯಪೀಠವನ್ನು ಕೋರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ