ಆ್ಯಪ್ನಗರ

ಬೆಟ್ಟದ ನೆಲ್ಲಿ ಬೆಳೆದು ಮೋದಿ ಮನಗೆದ್ದ ರೈತ

ಕೇವಲ 2.10 ಎಕರೆ ಜಮೀನಿನಲ್ಲಿ ಬೆಟ್ಟದ ನೆಲ್ಲಿ ಬೆಳೆದು ಮೌಲ್ಯವರ್ಧನೆ ಮಾಡಿದ ಜಿಲ್ಲೆಯ ಸಣ್ಣ ರೈತನೋರ್ವ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಮನ್‌ ಕಿ ಬಾತ್‌ ಮೂಲಕ ಗಮನ ಸೆಳೆದಿದ್ದಾರೆ.

Vijaya Karnataka 25 Feb 2019, 5:00 am
ತುಮಕೂರು: ಕೇವಲ 2.10 ಎಕರೆ ಜಮೀನಿನಲ್ಲಿ ಬೆಟ್ಟದ ನೆಲ್ಲಿ ಬೆಳೆದು ಮೌಲ್ಯವರ್ಧನೆ ಮಾಡಿದ ಜಿಲ್ಲೆಯ ಸಣ್ಣ ರೈತನೋರ್ವ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಮನ್‌ ಕಿ ಬಾತ್‌ ಮೂಲಕ ಗಮನ ಸೆಳೆದಿದ್ದಾರೆ.
Vijaya Karnataka Web TMK-24TUM2


ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ನಾಗೇನಹಳ್ಳಿಯ ರೈತ ಮಹೇಶ್‌, ಕಡಿಮೆ ಜಮೀನಿನಲ್ಲಿ ಭರ್ಜರಿ ಬೆಳೆ ತೆಗೆಯುತ್ತಿದ್ದಾರೆ. ಸಾಲದಕ್ಕೆ ಸ್ವಯಂ ಮೌಲ್ಯವರ್ಧನೆ ಮಾಡಿ ಸ್ವಾವಲಂಬಿಯಾಗಿದ್ದಾರೆ.

ಸಣ್ಣ ರೈತರಿಗೆ 6 ಸಾವಿರ ರೂ. ಸಹಾಯಧನ ನೀಡುವ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್‌ ಯೋಜನೆಗೆ ಉತ್ತರಪ್ರದೇಶದ ಗೋರಖಪುರದಲ್ಲಿ ಭಾನುವಾರ ಚಾಲನೆ ನೀಡಿದ ಪ್ರಧಾನಿ ಮೋದಿ ಜತæ ನಡೆದ ಆನ್‌ ಲೈನ್‌ ಸಂವಾದದಲ್ಲಿ ಬೆಂಗಳೂರಿನ ಹೆಸರಘಟ್ಟ ಫಾರ್ಮ್‌ನಿಂದ ಮಹೇಶ್‌ ಮಾತನಾಡಿದರು.

ರೈತ ಮಹೇಶ್‌, ''ಕೃಷಿ ಸಮ್ಮಾನ್‌ ಅತ್ಯುತ್ತಮವಾದ ಯೋಜನೆಯಾಗಿದೆ. ಮುಂಗಾರಿನ ವæೕಳæ ಸಿಗುವ ಮೊದಲ ಕಂತಿನಲ್ಲಿ 2 ಸಾವಿರ ರೂ.ನಲ್ಲಿ ಉಳುಮೆ ಮತ್ತು ಗೊಬ್ಬರ ಖರೀದಿಸಲು ಸಹಾಯವಾಗುತ್ತದೆ. ಇತರ ಕಂತಿನಲ್ಲಿ ನೀಡುವುದು ಇತರೆ ಖರ್ಚು ವೆಚ್ಚಗಳನ್ನು ಸರಿದೂಗಿಸಲು ಸಹಾಯವಾಗುತ್ತದೆ,'' ಎಂದು ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ರೈತರಿಗೆ ಈವರೆಗೆ ಈ ರೀತಿಯ ನೆರವನ್ನು ಯಾವ ಸರಕಾರವೂ ಕೊಟ್ಟಿರಲಿಲ್ಲ. ಕೆಲವೊಮ್ಮೆ ಉಳುಮೆಗೂ ಹಣ ಇರುವುದಿಲ್ಲ. ರೈತರಿಗೆ 6 ಸಾವಿರ ರೂ. ದೊಡ್ಡ ಮೊತ್ತವೇ ಆಗುತ್ತದೆ. ಮೋದಿ ಜತೆಗಿನ ಮಾತು ಖುಷಿ ತಂದಿದೆ.

- ಮಹೇಶ್‌. ರೈತ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ