ಆ್ಯಪ್ನಗರ

ನೆರೆ ಪರಿಹಾರಕ್ಕೆ ಹೆಚ್ಚುವರಿ ₹5400 ಕೋಟಿ: ಡಿ ವಿ ಸದಾನಂದಗೌಡ ಭರವಸೆ

ಕರ್ನಾಟಕಕ್ಕೆ ನೆರೆ ಪರಿಹಾರಕ್ಕೆ ಹೆಚ್ಚುವರಿ 5400 ಕೋಟಿ ರೂ.‌ ನೀಡಬಹುದು ಎಂದು ಹಣಕಾಸು‌ ಆಯೋಗ ಅಭಿಪ್ರಾಯ ಪಟ್ಟಿದೆ. ಸಚಿವೆ ನಿರ್ಮಲಾ‌ ಸೀತಾರಾಮನ್ ಜತೆ ಚರ್ಚಿಸಿ ಹಣ‌ ಬಿಡುಗಡೆ ಮಾಡುವಂತೆ ಮನವಿ ಮಾಡುತ್ತೇನೆ ಎಂದು‌ ಕೇಂದ್ರ ಸಚಿವ ಡಿವಿ ಸದಾನಂದಗೌಡ ತಿಳಿಸಿದರು.

Vijaya Karnataka Web 9 Mar 2020, 1:27 pm
ಬೆಂಗಳೂರು: ಕರ್ನಾಟಕಕ್ಕೆ ನೆರೆ ಪರಿಹಾರಕ್ಕೆ ಹೆಚ್ಚುವರಿ 5400 ಕೋಟಿ ರೂ.‌ ನೀಡಬಹುದು ಎಂದು ಹಣಕಾಸು‌ ಆಯೋಗ ಅಭಿಪ್ರಾಯ ಪಟ್ಟಿದೆ. ಈ ಅಂಶವನ್ನು ಸಿಎಂ ನನ್ನ ಗಮನಕ್ಕೆ ತಂದಿದ್ದಾರೆ. ಸಚಿವೆ ನಿರ್ಮಲಾ‌ ಸೀತಾರಾಮನ್‌ ಜತೆ ಚರ್ಚಿಸಿ ಹಣ‌ ಬಿಡುಗಡೆ ಮಾಡುವಂತೆ ಮನವಿ ಮಾಡುವೆ ಎಂದು‌ ಕೇಂದ್ರ ಸಚಿವ ಡಿವಿ ಸದಾನಂದಗೌಡ ತಿಳಿಸಿದರು.
Vijaya Karnataka Web d v sadananda gowda


ವಿವಿ ಟವರ್ ನಲ್ಲಿ ಸೋಮವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು. ಮಾ.15 ರಂದು ನಂದಿನಿ‌ ಲೇಔಟ್ನ ಎಸ್ . ಜಿ ಇಂಟರ್ ನ್ಯಾಷನಲ್‌ ಪಬ್ಲಿಕ್ ಶಾಲೆಯಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 3 ರವರೆಗೆ ಉದ್ಯೋಗ ಮೇಳ ನಡೆಯಲಿದೆ. 500 ಯುವಜನರಿಗೆ ಉದ್ಯೋಗ ನೀಡುವ ಗುರಿಯೊಂದಿಗೆ ಈ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಹೇಳಿದರು.

ಯಶವಂತಪುರ ರೈಲ್ವೆ ಎಲ್‌ಎಚ್‌ಬಿ ಕೋಚ್‌ಗೆ ಪರಿವರ್ತನೆ

ವಿಧಾನಸಭೆಯಲ್ಲಿ ಮಾಧ್ಯಮಗಳ ಮೇಲಿನ ನಿರ್ಬಂಧ ಕುರಿತು ಮಾತನಾಡಿ, ವಿಧಾನಸಭೆಯ ತೀರ್ಮಾನಗಳು‌ ಸ್ಪೀಕರ್ ಗೆ ಬಿಟ್ಟಿದ್ದು. ಆದರೆ ಪ್ರಜಾಪ್ರಭುತ್ವ ದಲ್ಲಿ ಮಾಧ್ಯಮ ಗಳನ್ನು ದೂರ‌ ಇಡುವುದು ಸರಿಯಲ್ಲ. ಕೆಲ ಮಾಧ್ಯಮಗಳು ಎಲ್ಲೆ‌ ಮೀರಿವೆ. ಹಾಗೆಂದು ಎಲ್ಲ ಮಾಧ್ಯಮ ಸರಿ ಇಲ್ಲ ಎಂದು ತೀರ್ಮಾನಿಸಬಾರದು ಎಂದರು.

ಬೆಂಗಳೂರು: ಕೊರೊನಾ, ಎಚ್‌1ಎನ್‌1 ಭೀತಿ ಜತೆ ಕಾಲರಾ ಕೂಡ ಪತ್ತೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ