ಆ್ಯಪ್ನಗರ

ಬ್ರಾಹ್ಮಣ ಮಂಡಳಿಗೆ ನೇಮಕ

ಅವಿಶ್ವಾಸದ ಆತಂಕದಲ್ಲಿರುವ ರಾಜ್ಯ ಮೈತ್ರಿ ಸರಕಾರ ಮಂಗಳವಾರ ಮೂರು ಮಹತ್ವದ ಆದೇಶ ಹೊರಡಿಸಿದೆ.

Vijaya Karnataka 17 Jul 2019, 5:00 am
ಬೆಂಗಳೂರು : ಅವಿಶ್ವಾಸದ ಆತಂಕದಲ್ಲಿರುವ ರಾಜ್ಯ ಮೈತ್ರಿ ಸರಕಾರ ಮಂಗಳವಾರ ಮೂರು ಮಹತ್ವದ ಆದೇಶ ಹೊರಡಿಸಿದೆ.
Vijaya Karnataka Web ananth subbarao nominated as brahmins board president
ಬ್ರಾಹ್ಮಣ ಮಂಡಳಿಗೆ ನೇಮಕ


ಔರಾದ್ಕರ್‌ ವರದಿ ಜಾರಿ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಸದಸ್ಯರ ನೇಮಕ ಹಾಗೂ ಸಾಲ ಮನ್ನಾ ಅವಧಿಯನ್ನು ಈ ತಿಂಗಳಾಂತ್ಯದವರೆಗೂ ವಿಸ್ತರಿಸುವ ಮಹತ್ವದ ಆದೇಶ ಪ್ರಕಟಿಸಿದೆ.

2018ರ ಬಜೆಟ್‌ನಲ್ಲಿ ರಾಜ್ಯ ಸರಕಾರ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡುವ ನಿರ್ಧಾರ ಪ್ರಕಟಿಸಿತ್ತು. ಹಾಸನ ಜಿಲ್ಲ್ಲೆ ಬೇಲೂರು ತಾಲೂಕಿನ ತೊ.ಚ.ಅನಂತಸುಬ್ಬರಾಯ ಅವರನ್ನು ಮಂಡಳಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಕೆ.ಎಸ್‌.ವೆಂಕಟನಾರಾಯಣ, ಎ.ಎಸ್‌.ಜಯಸಿಂಹ, ಆರ್‌.ಲಕ್ಷ್ಮಿಕಾಂತ್‌, ಎಲ್‌.ನಾಗರಾಜ್‌ ರಾವ್‌, ಕೃಷ್ಣ ಬಿ.ಕುಲಕರ್ಣಿ, ಆರ್‌.ಎನ್‌. ರಘುನಾಥ್‌, ಮದನ ಕುಲಕರ್ಣಿ, ಮುರಳೀಧರ್‌ ಪ್ರಭು, ಡಾ.ಸುಜಾತ, ಕೃಷ್ಣಾನಂದ ಚಾತ್ರ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ