ಆ್ಯಪ್ನಗರ

ಸರ್ಜಾ ಬಂಧನ ಬೇಡವೆಂಬ ಆದೇಶ ಮುಂದುವರಿಸಿದ ಹೈಕೋರ್ಟ್‌

ನಟಿ ಶ್ರುತಿ ಹರಿಹರನ್‌ ನೀಡಿರುವ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ನಟ ಅರ್ಜುನ್‌ ಸರ್ಜಾ ಅವರನ್ನು ಬಂಧಿಸದಂತೆ, ತನಿಖೆ ...

Vijaya Karnataka 15 Nov 2018, 5:00 am
ಬೆಂಗಳೂರು: ನಟಿ ಶ್ರುತಿ ಹರಿಹರನ್‌ ನೀಡಿರುವ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ನಟ ಅರ್ಜುನ್‌ ಸರ್ಜಾ ಅವರನ್ನು ಬಂಧಿಸದಂತೆ, ತನಿಖೆ ಮುಂದುವರಿಸಲು ನೀಡಿದ್ದ ಮಧ್ಯಾಂತರ ಆದೇಶವನ್ನು ಹೈಕೋರ್ಟ್‌ ಬುಧವಾರ ಮುಂದುವರಿಸಿತು.
Vijaya Karnataka Web 2510-2-2-104


ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ನಟ ಅರ್ಜುನ್‌ ಸರ್ಜಾ ಸಲ್ಲಿಸಿರುವ ಅರ್ಜಿ ನಿಗದಿಯಂತೆ ಬುಧವಾರ ನ್ಯಾ.ಪಿ.ಎಸ್‌.ದಿನೇಶ್‌ ಕುಮಾರ್‌ ಅವರಿದ್ದ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತು.

ಈ ವೇಳೆ ಸರಕಾರಿ ವಕೀಲರು, ''ಪ್ರಕರಣದಲ್ಲಿ ಸರಕಾರದ ಪರ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎ.ಎಸ್‌.ಪೊನ್ನಣ್ಣ ವಾದ ಮಂಡಿಸಬೇಕಿತ್ತು. ಅವರು ಬೇರೊಂದು ನ್ಯಾಯಾಲಯದಲ್ಲಿದ್ದಾರೆ'' ಎಂದು ನ್ಯಾಯಾಲಯದ ಗಮನಸೆಳೆದರು.

ಆಗ ಅರ್ಜಿದಾರರ ಪರ ವಕೀಲರು, ''ನ.2ರಂದು ನೀಡಿರುವ ಮಧ್ಯಾಂತರ ಆದೇಶವನ್ನು ಮುಂದುವರಿಸಬೇಕು'' ಎಂದು ಕೋರಿದರು. ಆಗ ನ್ಯಾಯಾಲಯ, ವಿಚಾರಣೆಯನ್ನು ನ.28ಕ್ಕೆ ಮುಂದೂಡಿ ಅಲ್ಲಿಯವರೆಗೆ ಮಧ್ಯಾಂತರ ಆದೇಶವನ್ನು ವಿಸ್ತರಣೆ ಮಾಡಿರುವುದಾಗಿ ಆದೇಶಿಸಿತು.

''ಮೂರು ವರ್ಷದ ನಂತರ ದೂರು ನೀಡಲಾಗಿದೆ. ಸರಕಾರ ಏಕಿಷ್ಟು ಆತುರ ತೋರುತ್ತಿದೆ. ಸರಕಾರ ನ್ಯಾಯದಂತೆ ನಡೆದುಕೊಳ್ಳಬೇಕು. ಅರ್ಜಿದಾರರ ವಿರುದ್ಧ ಆತುರದ ಕ್ರಮ ಬೇಡ, ಮುಂದಿನ ಆದೇಶದವರೆಗೆ ಅವರನ್ನು ಬಂಧಿಸಬೇಡಿ, ಆದರೆ ವಿಚಾರಣೆ ನಡೆಸಿ,ತನಿಖೆ ಮುಂದುವರಿಸಿ'' ಎಂದು ನ್ಯಾಯಾಲಯ ನ.2ರಂದು ಮಧ್ಯಾಂತರ ಆದೇಶ ನೀಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ