ಆ್ಯಪ್ನಗರ

ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪಗೆ ಭಾರತ ರತ್ನ ಸಿಗಲಿ

ಹಲವು ದಶಕಗಳಿಂದಲು ಇದು ಕಾರ್ಯಪ್ಪ ಅವರಿಗೆ ಬಾಕಿ ಇದೆ.

Vijaya Karnataka Web 4 Nov 2017, 4:47 pm
ಮಡಿಕೇರಿ: ಭಾರತದ ಸೇನಾ ಪಡೆಯಲ್ಲಿ ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಅವರ ಹೆಸರು ಚಿರಸ್ಥಾಯಿ. ಇಂಥ ಮಹಾನ್‌ ನಾಯಕನಿಗೆ ಭಾರತದ ಸರ್ವಶ್ರೇಷ್ಠ ಭಾರತ ರತ್ನ ಪ್ರಶಸ್ತಿ ಸಿಗಬೇಕು ಎಂದು ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ತಿಳಿಸಿದ್ದಾರೆ.
Vijaya Karnataka Web army chief calls bharat ratna for field marshal k m cariappa
ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪಗೆ ಭಾರತ ರತ್ನ ಸಿಗಲಿ


ಕೊಡಗು ಜಿಲ್ಲೆಯಲ್ಲಿರುವ ಕಾವೇರಿ ಕಾಲೇಜಿನಲ್ಲಿ ಕಾರ್ಯಪ್ಪ ಹಾಗೂ ಜನರಲ್‌ ತಿಮ್ಮಯ್ಯ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ ನಂತರ ಭಾಷಣ ಮಾಡಿದರು.

ದೇಶದ ಮೊಟ್ಟ ಮೊದಲ ಕಮಾಂಡರ್‌ ಇನ್‌ ಚೀಫ್‌ ಆಗಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರಿಗೆ ಈ ಪ್ರಶಸ್ತಿ ಸಿಗಬೇಕು. ಬೇರೆಯವರಿಗೆ ಭಾರತ ರತ್ನ ಸಿಗುತ್ತಿದೆ. ಆದರೆ ಕಾರ್ಯಪ್ಪ ಅವರಿಗೂ ಈ ಪ್ರಶಸ್ತಿ ದಕ್ಕಬೇಕು ಎಂದು ರಾವತ್‌ ತಿಳಿಸಿದರು.

1947ರಲ್ಲಿ ನಡೆದ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಕಾರ್ಯಪ್ಪ ಮಹತ್ವದ ಪಾತ್ರ ವಹಿಸಿದ್ದರು ಎಂದು ರಾವತ್‌ ಸ್ಮರಿಸಿದರು.

ಸೇನೆಯಲ್ಲಿ ಐದು ಸ್ಟಾರ್ ದರ್ಜೆಯನ್ನು ಹೊಂದಿರುವ ಅಧಿಕಾರಿಯಾಗಿದ್ದ ಕೆ.ಎಂ. ಕಾರ್ಯಪ್ಪ 1193, ಮೇ 15 ರಂದು ತಮ್ಮ 94ನೇ ವಯಸ್ಸಿನಲ್ಲಿ ಮೃತಪಟ್ಟರು.

Army Chief calls Bharat Ratna for Field Marshal K M Cariappa

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ