ಆ್ಯಪ್ನಗರ

ಅತ್ಯಾಚಾರ : ಆರೋಪಿ ಬಂಧನ

ಮಾತು ಬಾರದ 28 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮಹೇಶ್‌ (23) ಎಂಬಾತನನ್ನು ಭಾರತಿ ನಗರ ಪೊಲೀಸರು ಬಂಧಿಸಿದ್ದಾರೆ...

Vijaya Karnataka 16 Apr 2018, 5:00 am
ಬೆಂಗಳೂರು: ಮಾತು ಬಾರದ 28 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮಹೇಶ್‌ (23) ಎಂಬಾತನನ್ನು ಭಾರತಿ ನಗರ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web arrest rapist
ಅತ್ಯಾಚಾರ : ಆರೋಪಿ ಬಂಧನ


ಚಾಮರಾಜನಗರ ಮೂಲದ ಮಹೇಶ್‌, ನಗರದಲ್ಲಿ ಸಂಬಂಧಿಯ ಮನೆಯಲ್ಲಿ ವಾಸವಿದ್ದು, ಟಿಂಬರ್‌ ಯಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ. ಸಂಬಂಧಿಯ ಮಗಳಿಗೆ ಮಾತು ಬರುತ್ತಿರಲಿಲ್ಲ. ಒಂಟಿಯಾಗಿರುವಾಗ ಆಕೆಯ ಅಮಾಯಕತೆಯನ್ನು ದುರ್ಬಳಕೆ ಮಾಡಿಕೊಂಡು ಆರೋಪಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆಂದು ಆರೋಪಿಸಲಾಗಿದೆ.

ಇತ್ತೀಚೆಗೆ ದೌರ್ಜನ್ಯ ಎಸಗುತ್ತಿದ್ದಾಗ ಮಹೇಶನನ್ನು ಹಿಡಿದುಕೊಂಡ ಸಂಬಂಧಿ ಆತನನ್ನು ಥಳಿಸಿ ಮನೆಯಿಂದ ಹೊರಗೆ ಹಾಕಿದ್ದರು. ಯುವತಿಯಲ್ಲಿ ಮತ್ತೊಮ್ಮೆ ಈ ಕುರಿತು ವಿಚಾರಣೆ ನಡೆಸಿದಾಗ ಹಲವು ಬಾರಿ ಮಹೇಶ ಅತ್ಯಾಚಾರ ಎಸಗಿರುವ ವಿಚಾರವನ್ನು ತಿಳಿಸಿದ್ದಾಳೆ. ಕೂಡಲೇ ಅವರು ಭಾರತಿ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ