ಆ್ಯಪ್ನಗರ

ಆಶಾ ಕಾರ್ಯಕರ್ತೆಯರಿಂದ 12ಕ್ಕೆ ವಿಧಾನಸೌಧ ಚಲೋ

''ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ 18 ಸಾವಿರ ರೂ...

Vijaya Karnataka 9 Jul 2019, 5:00 am
ಬೆಂಗಳೂರು: ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ 18 ಸಾವಿರ ರೂ. ಕನಿಷ್ಠ ವೇತನದೊಂದಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಕಲ್ಪಿಸುವಂತೆ'' ಸರಕಾರವನ್ನು ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಸಂಘ ಜು. 12ರಂದು ವಿಧಾನಸೌಧ ಚಲೋ ಹಮ್ಮಿಕೊಂಡಿದೆ.
Vijaya Karnataka Web asha workers
ಆಶಾ ಕಾರ್ಯಕರ್ತೆಯರಿಂದ 12ಕ್ಕೆ ವಿಧಾನಸೌಧ ಚಲೋ


''ತಮ್ಮ ಸಮಸ್ಯೆಗಳ ಕುರಿತು ಸರಕಾರದ ಗಮನ ಸೆಳೆಯಲು ಅಂದು ರೈಲ್ವೆ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ವಿಧಾನಸೌಧ ಚಲೋ ನಡೆಸಲಾಗುವುದು. ಸೆಂಟರ್‌ ಫಾರ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ (ಸಿಐಟಿಯು) ಬೆಂಬಲದೊಂದಿಗೆ ನಡೆಯುವ ಪ್ರತಿಭಟನೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ'' ಎಂದು ಸಂಘದ ರಾಜ್ಯಾಧ್ಯಕ್ಷೆ ಎಸ್‌. ವರಲಕ್ಷ್ಮೇ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

''ಕಳೆದ 10 ವರ್ಷಗಳಿಂದ ನಮ್ಮ ಎಲ್ಲಾ ಕೆಲಸಗಳನ್ನೂ ಗಮನಿಸಿ ಈವರೆಗೂ ಸೂಕ್ತ ವೇತನ ನಿಗದಿಪಡಿಸಿಲ್ಲ. ಹೀಗಾಗಿ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ,'' ಎಂದು ಹೇಳಿದರು.

ಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೆಸ್ತಾ, ಜಿಲ್ಲಾ ಅಧ್ಯಕ್ಷೆ ಲಕ್ಷ್ಮೇದೇವಮ್ಮ ಮೊದಲಾದವರು ಉಪಸ್ಥಿತರಿದ್ದರು.

ಬೇಡಿಕೆಗಳು

1 ಆಂಧ್ರಪ್ರದೇಶ ಮಾದರಿಯಲ್ಲಿ ಮಾಸಿಕ 10 ಸಾವಿರ ರೂ. ವೇತನ

2 ಕೇಂದ್ರ ಸರಕಾರದ ಎನ್‌ಆರ್‌ಎಚ್‌ಎಂ ಯೋಜನೆಗೆ ಬಜೆಟ್‌ನಲ್ಲಿ ನೆರವು

3 ವಿದ್ಯಾರ್ಹತೆ ಆಧರಿಸಿ ಅರ್ಹರ ಆಯ್ಕೆ

4 8 ತಿಂಗಳಿಂದ ಬಾಕಿ ಇರುವ ಎಂಸಿಟಿಎಸ್‌ ಪ್ರೋತ್ಸಾಹ ಧನ ಬಿಡುಗಡೆ

5 ಆರೋಗ್ಯ ಇಲಾಖೆ ಗುಲಾಮರಂತೆ ದುಡಿಸಿಕೊಳ್ಳುವದನ್ನು ನಿಲ್ಲಿಸಬೇಕು

6 ಕರ್ತವ್ಯದ ವೇಳೆ ಮರಣ ಹೊಂದಿದವರಿಗೆ ಮರಣ ಪರಿಹಾರ ಜಾರಿ

ಈಗ ಮಾಡುತ್ತಿರುವ ಕಾರ‍್ಯ

1ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ತಾಯಿ ಮತ್ತು ಶಿಶು ಮರಣ ಕಡಿಮೆ ಮಾಡುವುದು

2ಡೆಂಗೆ, ಚಿಕೂನ್‌ಗುನ್ಯಾದಂತಹ ಸಾಂಕ್ರಾಮಿಕ ರೋಗಗಳ ತಡೆ,ಜಾಗೃತಿ ಕೆಲಸ

3ಕುಷ್ಟರೋಗ ಶಂಕಿತ ತಪಾಸಣಾ ಪ್ರಕರಣಗಳ ಪತ್ತೆ

4ಗ್ರಾಮಾಂತರದಲ್ಲಿ ಆರೋಗ್ಯ ಸಮೀಕ್ಷೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ