ಆ್ಯಪ್ನಗರ

ತೆರಿಗೆಯಿಂದ ತಪ್ಪಿಸಿಕೊಳ್ಳಲು ಯತ್ನ, 60 ಲಕ್ಷ ಜಪ್ತಿ

ನಗರದಿಂದ ಹೊಸಪೇಟೆಗೆ ಅಕ್ರಮವಾಗಿ ಸಾಗಿಸುತ್ತಿದ್ದ 500, 1000 ರೂ. ಮುಖಬೆಲೆಯ 60 ಲಕ್ಷ ನಗದು ಹಣವನ್ನು ಕೇಶ್ವಾಪುರ ಪೊಲೀಸರು ಸೋಮವಾರ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಈ ಪೈಕಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ವಿಕ ಸುದ್ದಿಲೋಕ 15 Nov 2016, 4:20 am
ಅಕ್ರಮ ಹಣ ಸಾಗಣೆ ಪ್ರಕರಣ | ಸಾವಿರ,ಐದು ನೂರು ಮುಖ ಬೆಲೆಯ ನೋಟು, ಇಬ್ಬರ ಸರೆ
Vijaya Karnataka Web attempt to escape the tax rs 60 lakh seized
ತೆರಿಗೆಯಿಂದ ತಪ್ಪಿಸಿಕೊಳ್ಳಲು ಯತ್ನ, 60 ಲಕ್ಷ ಜಪ್ತಿ


ಹುಬ್ಬಳ್ಳಿ: ನಗರದಿಂದ ಹೊಸಪೇಟೆಗೆ ಅಕ್ರಮವಾಗಿ ಸಾಗಿಸುತ್ತಿದ್ದ 500, 1000 ರೂ. ಮುಖಬೆಲೆಯ 60 ಲಕ್ಷ ನಗದು ಹಣವನ್ನು ಕೇಶ್ವಾಪುರ ಪೊಲೀಸರು ಸೋಮವಾರ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಈ ಪೈಕಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಹೊಸಪೇಟೆಯ ಎಲೆಕ್ಟ್ರಿಕಲ್‌ ಸಲಕರಣೆ ವ್ಯಾಪಾರಿ ಪ್ರವೀಣ್‌ ಜೈನ್‌ ಮತ್ತು ಕಮಿಷನ್‌ ಏಜೆಂಟ್‌ ಶ್ರೀನಿವಾಸಮೂರ್ತಿ ಬಂಧಿತರು. ತೆರಿಗೆಯಿಂದ ತಪ್ಪಿಸಿಕೊಳ್ಳಲು ಪ್ರವೀಣ್‌ ಜೈನ್‌ ಹೊಸಪೇಟೆಯಿಂದ ಹುಬ್ಬಳ್ಳಿಯ ಅರಿಹಂತ ನಗರದಲ್ಲಿರುವ ಸಂಬಂಧಿಕರ ಮನೆಗೆ ಹಣ ವಿನಿಮಯಕ್ಕೆ 60 ಲಕ್ಷ ರೂ. ತಂದಿದ್ದರು. ಆದರೆ ವಿನಿಮಯ ಸಾಧ್ಯವಾಗದ ಕಾರಣ ಸ್ಕಾರ್ಪಿಯೊ ವಾಹನದಲ್ಲಿ ಬೆಳಗ್ಗೆ 5.30ರ ಸುಮಾರಿಗೆ ವಾಪಸ್‌ ಕೊಂಡೊಯ್ಯುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಈ ಸಂಬಂಧ ಕೇಶ್ವಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳಿಗೆ ಜಾಮೀನು: ಪೊಲೀಸರು ಆರೋಪಿಗಳಿಂದ 1000 ರೂ. ಮುಖಬೆಲೆಯ 49 ಲಕ್ಷ ರೂ, 500 ರೂ. ಮುಖಬೆಲೆಯ 11 ಲಕ್ಷ ರೂ. ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಆನಂತರ ಇವರಿಗೆ ಎರಡನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಜಾಮೀನು ದೊರೆತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ