ಆ್ಯಪ್ನಗರ

ಅಯೋಧ್ಯೆಗೆ ಬಾಬರ್‌ ಎಂಬ ವ್ಯಕ್ತಿಯೇ ಬಂದಿಲ್ವಂತೆ !

ಅಯೋಧ್ಯೆಗೆ ಬಾಬರ್‌ ಎಂಬ ವ್ಯಕ್ತಿಯೇ ಬಂದಿಲ್ಲ ಎಂದು ರಾಮಜನ್ಮ ಭೂಮಿ ಪುನರುತ್ಥಾನ ಸಮಿತಿಯ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ರಾಮಜನ್ಮ ಭೂಮಿ ವಿವಾದದ ಕುರಿತಾಗಿ ಸುಪ್ರೀಂ ಕೋರ್ಟ್ ನಲ್ಲಿ ವಾದ ವಿವಾದ ನಡೆಯುತ್ತಿರುವ ಈ ಸಂದರ್ಭದಲ್ಲಿ ಬಂದಿರುವ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

Vijaya Karnataka 26 Sep 2019, 8:48 pm
ಬೆಂಗಳೂರು: ಅಯೋಧ್ಯೆಗೆ ಬಾಬರ್‌ ಎಂಬ ವ್ಯಕ್ತಿಯೇ ಬಂದಿಲ್ಲ. ಈ ಕುರಿತು ಕೆಲ ಬುದ್ಧಿಜೀವಿಗಳು ಇತಿಹಾಸವನ್ನು ತಿರುಚಿ ಸುಳ್ಳು ದಾಖಲೆ ಸೃಷ್ಟಿ ಮಾಡಿದ್ದಾರೆ ಎಂದು ಅಖಿಲ ಭಾರತ ರಾಮಜನ್ಮ ಭೂಮಿ ಪುನರುತ್ಥಾನ ಸಮಿತಿಯ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಆರೋಪಿಸಿದ್ದಾರೆ.
Vijaya Karnataka Web babari maszid


ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವ್ರು''ಬಾಬರ್‌ ಹೆಸರಿನ ವ್ಯಕ್ತಿ ಅಯೋಧ್ಯೆಗೆ ಬಂದಿಲ್ಲ. ಈ ಬಗ್ಗೆ ಬಾಬರ್‌ ನಾಮ ಕೃತಿಯಲ್ಲಿಉಲ್ಲೇಖಿಸಲಾಗಿದೆ. ಇನ್ನು ಅಲ್ಲಿ ಮಸೀದಿ ನಿರ್ಮಾಣ ಹೇಗೆ ಸಾಧ್ಯ?'' ಎಂದು ಪ್ರಶ್ನಿಸಿದರು.

ಅಯೋಧ್ಯೆ ವಿವಾದ - ಸಂಧಾನ ಪ್ರಕ್ರಿಯೆ ಹೇಗೆ ನಡೆಯಲಿದೆ?

''ಅಯೋಧ್ಯೆಯಲ್ಲಿ ಹಿಂದೂ ದೇವಾಲಯವಿದ್ದ ಬಗ್ಗೆ ಅದೇ ಕಟ್ಟಡದಲ್ಲಿ ಕೆಲವು ಕುರುಹುಗಳು ದೊರೆತಿವೆ. ಜತೆಗೆ ಭಾರತ ಪುರಾತತ್ವ ಇಲಾಖೆಯಲ್ಲೂ ದಾಖಲೆಗಳು ದೊರೆತಿವೆ. ಸ್ಥಳೀಯರಿಂದಲ್ಲೂ ನೈಜ ವಿಷಯ ಹೊರಬರುತ್ತದೆ. ಆದರೆ ಕೆಲವು ಬುದ್ಧಿಜೀವಿಗಳು ಇತಿಹಾಸವನ್ನು ತಿರುಚಿ, ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿದ್ದಾರೆ. ಕೆಲವರು ಬದಲಿಸಿದ ಇತಿಹಾಸದ ದಾಖಲೆಗಳನ್ನೇ ನಿಜವೆಂದು ನಂಬಿ ಮುಸ್ಲಿಂ ಸಮುದಾಯದ ಕೆಲ ನಾಯಕರು ಸುಪ್ರೀಂ ಮೊರೆ ಹೋಗಿದ್ದಾರೆ,'' ಎಂದರು.

ರಾಮಮಂದಿರ ನಿರ್ಮಾಣ ವಿವಾದ ನ್ಯಾಯಾಂಗದ ಚೌಕಟ್ಟಿನೊಳಗೆ ಪರಿಹಾರವಾಗಲಿ: ಕೋಟ

''1992ರಲ್ಲಿ ಲಕ್ಷಾಂತರ ಜನರು ಕರ ಸೇವೆಗೆಂದು ಅಯೋಧ್ಯೆಗೆ ತೆರಳಿದ್ದರು. ಈ ವೇಳೆ ಅವರು ಬಾಬ್ರಿ ಮಸೀದಿ ಎಂದು ತಿಳಿದು ಆಕ್ರೋಶಗೊಂಡು ಹಿಂದೂ ದೇವಾಲಯವನ್ನು ಧ್ವಂಸ ಮಾಡಿದ್ದರು. ಆ ದೇವಾಲಯ ಧ್ವಂಸಗೊಳ್ಳದಿದ್ದರೆ ದೇವಾಲಯವಿದ್ದ ಬಗ್ಗೆ ಇನ್ನೂ ಅನೇಕ ದಾಖಲೆಗಳು ದೊರೆಯುತ್ತಿದ್ದವು,'' ಎಂದು ತಿಳಿಸಿದರು.

ಮತ್ತೆ ರಾಮಾಯಣ ಎಕ್ಸ್‌ಪ್ರೆಸ್‌ ಚಾಲು: ಶ್ರೀರಾಮ ಓಡಾಡಿದ ಪವಿತ್ರ ಸ್ಥಳಗಳನ್ನು ಸುತ್ತಿ

''ರಾಜ್ಯ ಸರಕಾರ ಅಥವಾ ಕೇಂದ್ರ ಸರಕಾರಗಳಿಗೆ ಮಂದಿರ, ಮಸೀದಿ, ಚರ್ಚ್ ನಿರ್ಮಾಣ ಮಾಡುವ ಅಧಿಕಾರವಿರುವುದಿಲ್ಲ. ಆದ್ದರಿಂದ ಸರಕಾರ ಆಧ್ಯಾತ್ಮಿಕ ಗುರುಗಳನ್ನೊಳಗೊಂಡ ಸಮಿತಿ ರಚನೆ ಮಾಡಬೇಕು. ಸಮಿತಿ ಮೂಲಕ ಶಾಸ್ತ್ರ, ಸಂಪ್ರದಾಯ ಪ್ರಕಾರ ಮಂದಿರ ನಿರ್ಮಾಣ ಮಾಡಬೇಕು'' ಎಂದು ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ