ಆ್ಯಪ್ನಗರ

ಬಂದ್‌ಗೆ ಅವಕಾಶವಿಲ್ಲ, ಕಾನೂನು ಕೈಗೆತ್ತಿಕೊಂಡರೆ ಕ್ರಮ ಖಚಿತ - ಪ್ರತಿಭಟನಾಕಾರರಿಗೆ ಸಿಎಂ ಎಚ್ಚರಿಕೆ

​ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರ ಪರವಾಗಿದ್ದು, ಕೃಷಿ ಕಾಯಿದೆಗಳ ವಿಚಾರದಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸುವುದು ಬೇಡ. ರೈತ ಮುಖಂಡರು ಈಗಲಾದರೂ ಇದನ್ನು ಅರ್ಥ ಮಾಡಿಕೊಂಡು ಬಂದ್‌ನಿಂದ ಹಿಂದೆ ಸರಿಯಬೇಕು ಎಂದು ಬಿಎಸ್‌ ಯಡಿಯೂರಪ್ಪ ಮನವಿ ಮಾಡಿದ್ದಾರೆ.

Vijaya Karnataka 27 Sep 2020, 9:21 pm
ಬೆಂಗಳೂರು: ರಾಜ್ಯದಲ್ಲಿ ಬಂದ್‌ಗೆ ಅವಕಾಶವಿಲ್ಲ. ಬಂದ್‌ ಹೆಸರಿನಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸರಕಾರ ಎಚ್ಚರಿಸಿದೆ.
Vijaya Karnataka Web BS Yediyurappa R Ashok


ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಬಿಎಸ್‌ ಯಡಿಯೂರಪ್ಪ ಹಾಗೂ ಕಂದಾಯ ಸಚಿವ ಆರ್‌ ಅಶೋಕ್‌ ಈ ವಿಷಯ ತಿಳಿಸಿದ್ದಾರೆ.

"ಬಂದ್‌ಗೆ ಸರಕಾರದ ಸಹಕಾರವಿಲ್ಲ. ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ಆದೇಶದಂತೆ ರಾಜ್ಯ ಬಂದ್‌ ಮಾಡುವುದಕ್ಕೂ ಅವಕಾಶವಿಲ್ಲ. ಸೋಮವಾರ ಎಂದಿನಂತೆಯೇ ಸರಕಾರಿ ಕಚೇರಿ, ಆಸ್ಪತ್ರೆ ಇತ್ಯಾದಿ ಸೇವೆಗಳು ಇರುತ್ತವೆ. ಬಸ್‌, ಟ್ಯಾಕ್ಸಿ ಸಂಚಾರವಿರುತ್ತದೆ. ಅಂಗಡಿ, ಮುಂಗಟ್ಟುಗಳೂ ತೆರೆದಿರುತ್ತವೆ. ಹಾಗಾಗಿ ಜನರು ತಮ್ಮ ಕೆಲಸದ ನಿಮಿತ್ತ ಓಡಾಡಲು ಭಯ ಪಡಬೇಕಿಲ್ಲ. ಯಾರಾದರೂ ಕಿಡಿಗೇಡಿಗಳು ಬಸ್‌ ಹಾಗೂ ಸಾರ್ವಜನಿಕ ಆಸ್ತಿ, ಪಾಸ್ತಿ ಮೇಲೆ ಕಲ್ಲು ತೂರಿದರೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ," ಎಂದು ಸಚಿವ ಅಶೋಕ್‌ ಸರಕಾರದ ನಿಲುವನ್ನು ಸ್ಪಷ್ಟಪಡಿಸಿದರು. ಬಂದ್‌ಗೆ ಅವಕಾಶವಿಲ್ಲವೆಂದು ಸಿಎಂ ಅವರೂ ಹೇಳಿದರು.

ಕರ್ನಾಟಕ ಬಂದ್: ಸೋಮವಾರ ಎಂದಿನಂತೆ ಸರಕಾರಿ ಬಸ್ ಸೇವೆ ಎಂದ ಡಿಸಿಎಂ ಲಕ್ಷ್ಮಣ್ ಸವದಿ
ಬಂದ್‌ ಕೈಬಿಡಲು ಸಿಎಂ ಮನವಿ

ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರ ಪರವಾಗಿವೆ. ಕೃಷಿ ಕಾಯಿದೆಗಳ ವಿಚಾರದಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸುವುದು ಬೇಡ. ರೈತ ಮುಖಂಡರು ಈಗಲಾದರೂ ಇದನ್ನು ಅರ್ಥ ಮಾಡಿಕೊಂಡು ಬಂದ್‌ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಸಿಎಂ ಬಿಎಸ್‌ ಯಡಿಯೂರಪ್ಪ ಮನವಿ ಮಾಡಿಕೊಂಡರು.

ಸೋಮವಾರ ಕರ್ನಾಟಕ ಬಂದ್: ಏನಿರುತ್ತೆ, ಏನಿರಲ್ಲ?

"ರೈತ ತನ್ನ ಬೆಳೆಯನ್ನು ರಾಜ್ಯ ಅಥವಾ ದೇಶದ ಯಾವುದೇ ಭಾಗದಲ್ಲಿ ಮಾರಾಟ ಮಾಡುವ ಸ್ವಾತಂತ್ರ್ಯವನ್ನು ಹೊಸ ಕಾಯಿದೆ ನೀಡುತ್ತದೆ. ಇದು ರೈತರ ಹಕ್ಕು ಕೂಡ. ನೂರಕ್ಕೆ ತೊಂಬತ್ತರಷ್ಟು ರೈತರು ಇದನ್ನು ಸ್ವಾಗತಿಸಿದ್ದಾರೆ. ರೈತ ಮುಖಂಡರು ಈ ಸಂಗತಿಯನ್ನು ಅರಿತುಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿಯವರು ರೈತರ ಹಿತದೃಷ್ಟಿಯಿಂದಲೇ ವರ್ಷಕ್ಕೆ 6 ಸಾವಿರ ರೂ. ನೀಡುವ ಯೋಜನೆ ತಂದಿದ್ದಾರೆ. ರಾಜ್ಯದಿಂದಲೂ ರೈತರ ಖಾತೆಗೆ 4 ಸಾವಿರ ರೂ. ಹಾಕಲಾಗುತ್ತಿದೆ. ನಾವು ರೈತರ ಜೊತೆಗಿದ್ದೇವೆ,’’ ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ