ಆ್ಯಪ್ನಗರ

ಅಳಿವಿನಂಚಿನಲ್ಲಿವೆ ಬೆಂಗಳೂರಿನ ಕೆರೆಗಳು, ಸರಕಾರಕ್ಕೆ ಕೇಂದ್ರದ ನೆರವು ಬೇಕಿಲ್ಲ

ಜಲಮೂಲಗಳ ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ' ಯೋಜನೆಯಡಿ ಕೇಂದ್ರ ಜಲ ಸಂಪನ್ಮೂಲಗಳ ಸಚಿವಾಲಯವು ಕೆರೆಗಳ ಸುಧಾರಣೆ ಮತ್ತು ಪುನರುಜ್ಜೀವನಕ್ಕಾಗಿ ರಾಜ್ಯಗಳಿಗೆ ನೆರವು ನೀಡುತ್ತದೆ.

TIMESOFINDIA.COM 9 Jan 2019, 2:04 pm
ಬೆಂಗಳೂರು: ಬೆಂಗಳೂರಿನಲ್ಲಿರುವ ಅನೇಕ ಕೆರೆಗಳು ಅಳಿವಿನಂಚಿನಲ್ಲಿವೆ. ಆದರೆ ನಗರದಲ್ಲಿ ಯಾವುದೇ ಜಲಮೂಲಗಳ ಪುನರುಜ್ಜೀವನದ ಅಗತ್ಯವಿಲ್ಲ ಎಂಬಂತೆ ಕುಳಿತಿದೆ ಕರ್ನಾಟಕ ಸರಕಾರ.
Vijaya Karnataka Web Belandooru Lake


ಜಲಮೂಲಗಳ ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ' ಯೋಜನೆಯಡಿ ಕೇಂದ್ರ ಜಲ ಸಂಪನ್ಮೂಲಗಳ ಸಚಿವಾಲಯವು ಕೆರೆಗಳ ಸುಧಾರಣೆ ಮತ್ತು ಪುನರುಜ್ಜೀವನಕ್ಕಾಗಿ ರಾಜ್ಯಗಳಿಗೆ ನೆರವು ನೀಡುತ್ತದೆ. ಆದರೆ ಈ ಯೋಜನೆಯ ಲಾಭ ಪಡೆಯುವ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಇಲ್ಲಿಯವರೆಗೆ ಒಂದೇ ಒಂದು ಪ್ರಸ್ತಾಪವನ್ನು ಸಲ್ಲಿಸಿಲ್ಲ ಎಂದು ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ರಾಜ್ಯ ಸಚಿವ ಮಹೇಶ್ ಶರ್ಮಾ ರಾಜ್ಯಸಭೆಯಲ್ಲಿ ಮಂಗಳವಾರ ಹೇಳಿದ್ದಾರೆ.

ನಗರದಲ್ಲಿ ಕೆರೆ ಮತ್ತು ಅಂತರ್ಜಲದ ಪುನರುಜ್ಜೀವನದ ಬಗ್ಗೆ ಸಂಸದ ರಾಜೀವ್ ಚಂದ್ರಶೇಖರ್ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಶರ್ಮಾ ಈ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿರುವ ಸಾಕಷ್ಟು ಕೆರೆಗಳು ಮಲಿನಗೊಂಡಿದ್ದು ವಿನಾಶದ ಅಂಚಿನಲ್ಲಿವೆ. ಚರಂಡಿ ನೀರುಗಳು, ಕಾರ್ಖಾನೆಗಳ ವಿಷಯುಕ್ತ ವಸ್ತುಗಳು ಬಂದು ಸಂಪೂರ್ಣ ಕಲುಷಿತಗೊಂಡಿದೆ. ರಾಜಧಾನಿಯ ಕೆರೆಗಳು ಎಷ್ಟು ಕಲುಷಿತಗೊಂಡಿವೆ ಎಂದು ತಿಳಿಯಬೇಕಾದರೆ ಬೆಳಂದೂರು ಕೆರೆ ನೋಡಿದರೆ ಸಾಕು. ಈ ಕೆರೆಯ ಆತಂಕಕಾರಿ ಸ್ಥಿತಿಯ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆಗಳಾಗಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ