ಆ್ಯಪ್ನಗರ

ಬೆಂವಿವಿ ಕುಲಪತಿ ಕೆ.ಆರ್‌. ವೇಣುಗೋಪಾಲ್‌ ನೇಮಕ ರದ್ದುಗೊಳಿಸಿದ ಹೈಕೋರ್ಟ್‌

ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಕೆ ಸೇರಿದಂತೆ ಹಲವು ಅಕ್ರಮಗಳ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೆಆರ್‌...

Vijaya Karnataka 25 Sep 2019, 5:00 am
ಬೆಂಗಳೂರು: ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಕೆ ಸೇರಿದಂತೆ ಹಲವು ಅಕ್ರಮಗಳ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್‌.ವೇಣುಗೋಪಾಲ್‌ ನೇಮಕವನ್ನು ಹೈಕೋರ್ಟ್‌ ರದ್ದುಪಡಿಸಿದೆ.
Vijaya Karnataka Web highcourt


ನಿವೃತ ಪ್ರೊ. ಸಂಗಮೇಶ್‌ ಪಾಟೀಲ್‌ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ.ಅಲೋಕ್‌ ಅರಾಧೆ ಅವರಿದ್ದ ಏಕಸದಸ್ಯಪೀಠ ಮಂಗಳವಾರ ಈ ಮಹತ್ವದ ಆದೇಶ ನೀಡಿತು.

''ಕೆ.ಆರ್‌.ವೇಣುಗೋಪಾಲ್‌ ನೇಮಕಕ್ಕೆ ಸರಕಾರದಿಂದ ಕುಲಾಧಿಪತಿಯೂ ಆಗಿರುವ ರಾಜ್ಯಪಾಲರು ಒಪ್ಪಿಗೆ ಪಡೆಯದೇ ಇರುವುದರಿಂದ ಆ ನೇಮಕ ಊರ್ಜಿತವಾಗುವುದಿಲ್ಲ,''ಎಂದು ನ್ಯಾಯಪೀಠ ಆದೇಶಿಸಿದೆ.

''ಕೆ.ಆರ್‌.ವೇಣುಗೋಪಾಲ್‌ ವಿರುದ್ಧ ಹಲವು ಅಕ್ರಮಗಳ ಆರೋಪಗಳಿವೆ. ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಕೆ ಆರೋಪದ ಜೊತೆಗೆ ಅರ್ಹತೆ ಇಲ್ಲದಿದ್ದರೂ ಪೊ›ಫೆಸರ್‌ ಹುದ್ದೆಗೆ ಪದೋನ್ನತಿ ಪಡೆದಿರುವ ಗಂಭೀರ ಆರೋಪವೂ ಇದೆ. ಅವರು ಯುವಿಸಿಇ ಪ್ರಿನ್ಸಿಪಾಲ್‌ ಆಗಿದ್ದಾಗಲೂ ಹಲವು ಅಕ್ರಮಗಳನ್ನು ಎಸಗಿದ್ದಾರೆ. ಅವರು ಶೂನ್ಯ ಹಾಜರಾತಿ ಇದ್ದ ಕೆಲವರಿಗೆ ಪರೀಕ್ಷೆ ಪ್ರವೇಶಕ್ಕೆ ಅವಕಾಶ ನೀಡಿದ್ದರು.ರೀಡರ್‌ ಹುದ್ದೆಗೆ ಅವರನ್ನು ನೇಮಕ ಮಾಡಿದ್ದನ್ನೂ ಸಹ ಹೈಕೋರ್ಟ್‌ ರದ್ದುಪಡಿಸಿತ್ತು,'' ಎಂದು ನ್ಯಾಯಪೀಠ ತನ್ನ ಆದೇಶದಲ್ಲಿಉಲ್ಲೇಖಿಸಿತು.

ಅರ್ಜಿದಾರರ ಪರ ವಕೀಲ ಡಿ.ಆರ್‌. ರವಿಶಂಕರ್‌, ''ಹಲವು ಅರೋಪಗಳನ್ನು ಮುಚ್ಚಿಟ್ಟು ವೇಣುಗೋಪಾಲ್‌ ಕುಲಪತಿ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ಹೀಗಾಗಿ ಅವರ ನೇಮಕ ಕೂಡಲೇ ರದ್ದುಗೊಳಿಸಬೇಕು. ಉಪಲೋಕಾಯುಕ್ತರೂ ವೇಣುಗೋಪಾಲ್‌ ವಿರುದ್ಧ ವರದಿ ನೀಡಿದ್ದರು. ಆದರೂ ಕುಲಪತಿ ಹುದ್ದೆಗೆ ನೇಮಕ ಮಾಡಲಾಗಿದೆ,''ಎಂದು ,'' ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದರು.

ಯವಿಸಿಇನಲ್ಲಿವಿದ್ಯಾರ್ಥಿನಿಯೊಬ್ಬರಿಗೆ ಅಕ್ರಮವಾಗಿ ಪರೀಕ್ಷೆ ಬರೆಯಲು ಸಹಾಯ ಮಾಡಿದ್ದರು, ರೀಡರ್‌ ಹುದ್ದೆಗೆ ನೇಮಕಗೊಂಡಿದ್ದನ್ನು ಹೈಕೋರ್ಟ್‌ ರದ್ದುಗೊಳಿಸಿತ್ತು. ವೇಣುಗೋಪಾಲ್‌ಗೆ ಪೊ›ಫೆಸರ್‌ ಶ್ರೇಣಿಗೆ ಬಡ್ತಿ ನೀಡಬಾರದು ಎಂದು ಉನ್ನತ ಶಿಕ್ಷಣ ಇಲಾಖೆ ಸೂಚಿಸಿದ್ದರೂ ಅದನ್ನು ಕಡೆಗಣಿಸಲಾಗಿದೆ. ಯುವಿಸಿನಲ್ಲಿಪೂರ್ಣಾವಧಿ ನೌಕರರಾಗಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಅವರು ತಮ್ಮ ಪಿಎಚ್‌.ಡಿ ಅಧ್ಯಯನಕ್ಕೆ ಸಂಬಂಧಪಡದ ನಾಲ್ಕು ಕೋರ್ಸ್‌ಗಳನ್ನು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಏಕಕಾಲಕ್ಕೆ ಪೂರೈಸಿದ್ದಾರೆ ಎಂದೂ ಸಹ ಅರ್ಜಿಯಲ್ಲಿಆರೋಪಿಸಲಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ