ಆ್ಯಪ್ನಗರ

ಕನ್ನಡದಲ್ಲಿ ಬ್ಯಾಂಕಿಂಗ್‌ ಪರೀಕ್ಷೆ, ಹಣಕಾಸು ಸಚಿವರ ಜೊತೆ ಚರ್ಚೆಸುವೆ: ಸಚಿವ ಜೋಶಿ

"ಒಂದು ಕೋಟಿ ರೂ. ಕೂಡ ಇಲ್ಲದವರು ಇಂದು ನೂರಾರು ಕೋಟಿ ರೂ. ಆಸ್ತಿ ಘೋಷಿಸಿಕೊಂಡು ಜೈಲಿನಲ್ಲಿಕಣ್ಣೀರಿಡುತ್ತಿದ್ದಾರೆ. ಹಾಗಿದ್ದರೆ, ಜೀವನದಲ್ಲಿ ತೃಪ್ತಿ ಎಂದರೆ ಏನು? ಈ ಬಗ್ಗೆ ಅವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ'' - ಪ್ರಹ್ಲಾದ್‌ ಜೋಶಿ.

Agencies 13 Sep 2019, 9:03 pm
ಬೆಂಗಳೂರು: ಕನ್ನಡದಲ್ಲಿ ಬ್ಯಾಂಕಿಂಗ್‌ ಪರೀಕ್ಷೆಗಳನ್ನು ನಡೆಸಲು ಅವಕಾಶ ನೀಡುವ ಸಂಬಂಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಜತೆಗೆ ತಕ್ಷಣ ಚರ್ಚೆ ನಡೆಸುತ್ತೇನೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ತಿಳಿಸಿದರು.
Vijaya Karnataka Web Prahlad Joshi


ನಗರದಲ್ಲಿ ಶುಕ್ರವಾರ ರಾಷ್ಟ್ರೀಯ ಮೌಲ್ಯೀಕರಣ ಮತ್ತು ಮಾನ್ಯತಾ ಪರಿಷತ್ತು (ನ್ಯಾಕ್‌) ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿ,"ಈ ಹಿಂದೆ ಕನ್ನಡದಲ್ಲಿ ಬ್ಯಾಂಕಿಂಗ್‌ ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ನಿರ್ಮಲಾ ಸೀತಾರಾಮನ್‌ ಹೇಳಿದ್ದರು. ಅದು ನನ್ನ ಗಮನಕ್ಕೂ ಬಂದಿದೆ. ಈಗ ಹಣಕಾಸು ಸಚಿವರೊಂದಿಗೆ ಈ ಕುರಿತು ಚರ್ಚಿಸಿ, ಮನವೊಲಿಸಲಾಗುವುದು,'' ಎಂದರು.

''ದೇಶದ ಹತ್ತು ರಾಜ್ಯಗಳಲ್ಲಿಈ ಬಾರಿ ನೆರೆ ಬಂದಿದೆ. ನೆರೆ ಹಾನಿ ಬಗ್ಗೆ ವರದಿ ಸಿದ್ಧಪಡಿಸಿದ ನಂತರ ಹಣ ಬಿಡುಗಡೆ ಆಗಲಿದೆ. ಕೇವಲ ಕರ್ನಾಟಕಕ್ಕೆ ಅಲ್ಲ ನೆರೆ ಪೀಡಿತ ಉಳಿದ ರಾಜ್ಯಗಳಿಗೂ ಇನ್ನೂ ಪರಿಹಾರ ಬಿಡುಗಡೆ ಮಾಡಿಲ್ಲ'' ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

''ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರು ತಾವು ರಾಜಕಾರಣಕ್ಕೆ ಬರುವ ಮೊದಲು ತಮ್ಮ ಆಸ್ತಿ ಎಷ್ಟಿತ್ತು? ಈಗ ಎಷ್ಟಿದೆ ಎಂಬುದನ್ನು ಬಹಿರಂಗಪಡಿಸಲಿ. ಆದಾಯ ಮೂಲದ ಮಾಹಿತಿ ನೀಡಿದರೆ ಯಾರಿಗೂ ಭಯಪಡುವ ಅಗತ್ಯವಿಲ್ಲ. ಆದರೆ, ಭಾವನಾತ್ಮಕವಾಗಿ ಜನರನ್ನು ಪ್ರಚೋದಿಸುವ ಕೆಲಸ ಸರಿಯಲ್ಲ,'' ಎಂದು ಪ್ರಹ್ಲಾದ್‌ ಜೋಶಿ ತಿಳಿಸಿದರು.

ಇದಕ್ಕೂ ಮುನ್ನ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ''ಒಂದು ಕೋಟಿ ರೂ. ಕೂಡ ಇಲ್ಲದವರು ಇಂದು ನೂರಾರು ಕೋಟಿ ರೂ. ಆಸ್ತಿ ಘೋಷಿಸಿಕೊಂಡು ಜೈಲಿನಲ್ಲಿಕಣ್ಣೀರಿಡುತ್ತಿದ್ದಾರೆ. ಹಾಗಿದ್ದರೆ, ಜೀವನದಲ್ಲಿ ತೃಪ್ತಿ ಎಂದರೆ ಏನು ? ಈ ಬಗ್ಗೆ ಅವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ'' ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್‌ ಕುರಿತು ಟೀಕಿಸಿದರು.

''ಅನೇಕ ಜನ ಸಾಕಷ್ಟು ಹಣ ಸಂಪಾದಿಸಿದ್ದಾರೆ. ಆದರೆ, ಹಿಂದೆ ಒಂದು ಕೋಟಿಯೂ ಇಲ್ಲದವರು ಇಂದು 800 ಕೋಟಿ ರೂ. ಆಸ್ತಿ ಘೋಷಿಸಿಕೊಂಡು, ಜೈಲಿನಲ್ಲಿ ಕಣ್ಣೀರಿಡುತ್ತಿದ್ದಾರೆ. ತೃಪ್ತಿ ಎಂದರೆ ಹಣ ಗಳಿಕೆ ಅಲ್ಲ. ಶಿಕ್ಷಕರಿಂದ ಕಲಿತ ವಿದ್ಯಾರ್ಥಿ ಸಮಾಜದಲ್ಲಿ ಉನ್ನತ ಸ್ಥಾನ ಅಲಂಕರಿಸುವುದೇ ಅಂತಿಮ ತೃಪ್ತಿ,'' ಎಂದು ಪ್ರತಿಪಾದಿಸಿದರು.

ಎಚ್‌ಡಿಕೆ ಹೇಳಿಕೆಗೆ ಖಂಡನೆ:

'ಚಂದ್ರಯಾನ- 2' ಸಂಪರ್ಕ ಕಳೆದುಕೊಂಡಿದ್ದಕ್ಕೂ ಮತ್ತು ಇಸ್ರೊ ಕಚೇರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಆಗಮನಕ್ಕೂ ತಳಕು ಹಾಕಿರುವುದು ಮಾಜಿ ಸಿಎಂ ವ್ಯಕ್ತಿತ್ವಕ್ಕೆ ಶೋಭೆ ತರುವಂತಹದ್ದಲ್ಲ' ಎಂದು ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ತಿರುಗೇಟು ನೀಡಿದರು.

''ಹೀಗೆ ತಳಕು ಹಾಕುವ ಮೂಲಕ ಪ್ರಧಾನಿಗೂ ಹಾಗೂ ಇಸ್ರೊ ವಿಜ್ಞಾನಿಗಳು ಇಬ್ಬರಿಗೂ ಕುಮಾರಸ್ವಾಮಿ ಅಮಾನ ಮಾಡಿದ್ದಾರೆ. ಈ ರೀತಿಯ ಹೇಳಿಕೆಗಳು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ಇದು ಕ್ಷುಲ್ಲಕ ರಾಜಕೀಯ'' ಎಂದು ಅವರು ಟೀಕಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ