ಆ್ಯಪ್ನಗರ

ಬಿಟ್ ಕಾಯಿನ್: ತಪ್ಪು ಮಾಡಿದವರ ವಿರುದ್ಧ ಮುಲಾಜಿಲ್ಲದೆ ಕ್ರಮ; ಬಸವರಾಜ ಬೊಮ್ಮಾಯಿ

ಬಿಟ್ ಕಾಯಿನ್ ವಿಚಾರವಾಗಿ ತಪ್ಪು ಮಾಡಿದವರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಬೆಂಗಳೂರಿನಲ್ಲಿ ಭಾನುವಾರ ಮಾತನಾಡಿದ ಅವರು ಏನು ಹೇಳಿದ್ದಾರೆ ಎಂಬ ವಿವರ ಇಲ್ಲಿದೆ.

Vijaya Karnataka Web 14 Nov 2021, 11:31 am

ಹೈಲೈಟ್ಸ್‌:

  • ಬಿಟ್ ಕಾಯಿನ್ ಹಗರಣ
  • ತಪ್ಪು ಮಾಡಿದವರ ಮೇಲೆ ಮುಲಾಜಿಲ್ಲದೆ ಕ್ರಮ
  • ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಕೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web basavaraj bommai
ಬೆಂಗಳೂರು: ಬಿಟ್ ಕಾಯಿನ್ ವಿಚಾರವಾಗಿ ತಪ್ಪು ಮಾಡಿದವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ವಿಧಾನಸೌಧದಲ್ಲಿ ಭಾನುವಾರ ಮಾತನಾಡಿದ ಅವರು, ಯಾರೇ ಎಷ್ಟೇ ಪ್ರಭಾವಿಗಳಾದರೂ ಬಲಿ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಅವರು, ಆರೋಪಿ ಶ್ರೀ ಕೃಷ್ಣನನ್ನು ಕಾಂಗ್ರೆಸ್ ಆಡಳಿತದಲ್ಲಿ ಇದ್ದಾಗ 2018ರಲ್ಲಿ ಬಂಧಿಸಿ ಬಿಡುಗಡೆ ಮಾಡಿದರು. ಅದತ್ತೇ ತನಿಖೆ ನಡೆಸಿದ್ದರೆ ಮಾಹಿತಿ ಸಿಗುತ್ತಿತ್ತು. ಅವನನ್ನು ವಿಚಾರಣೆ ಕೂಡಾ ಮಾಡಿಲ್ಲ. ನಾವು ಹಿಡಿದಾಗ ಡ್ರಗ್ ಕೇಸ್‌ನಲ್ಲಿ ವಿಚಾರರಣೆ ನಡೆಸಿದಾಗ ಬಿಟ್ ಕಾಯಿನ್ ವಿಚಾರ ಹೊರಗಡೆ ಬಂತು ಎಂದರು.
ನಾವು ಎಲ್ಲವನ್ನು ಬಹಿರಂಗಪಡಿಸಿದ್ದೇವೆ, ಇದೀಗ ನಮ್ಮನ್ನೇ ಪ್ರಶ್ನೆ ಮಾಡುತ್ತೀರಾ? ಟ್ವಿಟ್ಟರ್ ಹ್ಯಾಂಡಲ್ ಆಧಾರದ ಮೇಲೆ ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಾರೆ. ನಿಮ್ಮ ಚಿಂತನೆ ದಿವಾಳಿ ಆಗಿದೆ. ಯಾವುದೇ ಪುರಾವೆ ಇಲ್ಲದೆ ಮಾತನಾಡುವುದು ಸರಿಯೇ? ಎಂದು ಪ್ರಶ್ನಿಸಿದರು.

Bitcoin Scam:'ಬಿಟ್'ರೂ ಬಿಡದ ಹಗರಣ; ಬಿಟ್‌ ಕಾಯಿನ್‌ ಪ್ರಕರಣದ ಸಂಪೂರ್ಣ ಟೈಮ್‌ಲೈನ್‌..!

ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಕೇಳಿರುವ ಆರು ಪ್ರ್ನೆಗೆ ಉತ್ತರ ಕೊಟ್ಟಿದ್ದೇವೆ. 2016 ರಿಂದ ಬಿಟ್ ಕಾಯಿನ್ ದಂಧೆ ಇದೆ ಎಂದಿದ್ದಾರೆ. ಕರ್ನಾಟಕಕ್ಕೆ ಸಂಬಂಧ ಇದ್ದಿದ್ದಲ್ಲಿ ತನಿಖೆ ಏಕೆ ಮಾಡಿಲ್ಲ, ನಿಮ್ಮದೇ ಸರ್ಕಾರ ಇತ್ತಲ್ಲಾ? ನಿಮ್ಮ ಪಕ್ಷದ ಸಿಎಂ, ಸಚಿವರನ್ನು ಕೇಳಬೇಕು. ಯಾಕೆ ಗಮನ ಹರಿಸಿಲ್ಲ ಎಂದು ಮರು ಪ್ರಶ್ನಿಸಿದರು.

ಇದು ರಾಷ್ಟ್ರೀಯ ಪಕ್ಷದ ವಕ್ತಾರರಿಗೆ ಸರಿ ಕಾಣುವುದಿಲ್ಲ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ತರಾಟೆಗೆ ತೆಗೆದುಕೊಂಡ ಬೊಮ್ಮಾಯಿ, ನಾವು ಮುಕ್ತವಾಗಿದ್ದೇನೆ ಹಾಗೂ ಬಿಟ್‌ ಕಾಯಿನ್‌ ಪ್ರಕರಣವನ್ನು ಬಯಲುಗೊಳಿಸಿದ್ದೇ ನಾವು, ಇಡಿ, ಸಿಬಿಐ, ಇಂಟರ್ ಪೋಲ್‌ಗೆ ಕೊಟ್ಟಿದ್ದೇವೆ. ಯಾರನ್ನು ಕೂಡಾ ಬಿಡಲ್ಲ, ಹಿಂದೆ ಮುಂದೆ ನೋಡುವ ಪ್ರಶ್ನೆಯೇ ಇಲ್ಲ, ಬಲಿ ಹಾಕುತ್ತೇವೆ ಎಂದರು.

ಯಾರೇ ಇದ್ದರೂ ತನಿಖೆ, ಮುಲಾಜಿಲ್ಲದೆ ಮಾಡುತ್ತೇವೆ. ಯಾರು ಮೋಸ ಮಾಡಿದ್ದಾರೆ, ಪ್ರಭಾವ ಬೀರಿದ್ದಾರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಆದರೆ ಆರೋಪಿ ಶ್ರೀಕಿಯನ್ನು ಬಂಧಿಸಿ ಬಿಡುಗಡೆ ಮಾಡಿದವರಿಂದ ಪಾಠ ಕಲಿಯಬೇಕಿಲ್ಲ. ಅಷ್ಟಕ್ಕೂ ನಿಮ್ಮಲ್ಲಿ ಮಾಹಿತಿ ಇದ್ದರೆ ತನಿಖೆ ಮಾಡುತ್ತಿರುವವರಿಗೆ ನೀಡಿ ಎಂದರು.

ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಜವಹರಲಾಲ್‌ ನೆರಹೂ ಜನ್ಮದಿನಾಚರಣೆ ಅಂಗವಾಗಿ ಮಾತನಾಡಿದ ಅವರು, ಸ್ವತಂತ್ರ ನಂತರ ಭಾರತವನ್ನು ಕಟ್ಟಲು ನೆಹರೂ ಪಾತ್ರ ದೊಡ್ಡದು, ಪಂಚವಾರ್ಷಿಕ ಯೋಜನೆ ಜಾರಿಯ ಮೂಲಕ ಭಾರತದ ಸ್ವಾತಂತ್ರ್ಯದ ನಂತರ ಗುರಿ ಮುಟ್ಟಲು ಭದ್ರ ಬುನಾದಿ ಹಾಕಿದ ಶ್ರೇಷ್ಠ ನಾಯಕ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರಮುಖ ಸ್ಥಾನದಲ್ಲಿ ತೆಗೆದುಕೊಂಡು ಹೋಗುವಲ್ಲಿ ಅವರ ಪಾತ್ರ ದೊಡ್ಡದಿದೆ ಎಂದರು.

ತಿರುಪತಿಯಲ್ಲಿ ದೇಶದ ಗೃಹ ಸಚಿವ ಅಮಿತ್ ಶಾ ಅವರು ದಕ್ಷಿಣ ಭಾತರದ ಸಿಎಂಗಳ ಸಭೆಯನ್ನು ಕರೆದಿದ್ದಾರೆ. ಹಲವಾರು ವಿಷಯಗಳು, ಅಂತರಾಜ್ಯ ವಿಷಯಗಳ ಬಗ್ಗೆ ಮಹತ್ವದ ಚರ್ಚೆ ಸಭೆಯಲ್ಲಿ ನಡೆಯಲಿದೆ. ಸೌಹಾರ್ದದಿಂದ ಅಭಿವೃದ್ದಿ ಕಾರ್ಯಗಳನ್ನು ಯಾವ ರೀತಿ ಮಾಡಬೇಕು ಎಂಬ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಮಧ್ಯಾಹ್ಮ ನಾನು ಕೂಡಾ ತಿರುಪತಿಗೆ ಹೋಗುತ್ತೇನೆ. ಸಭೆಯಲ್ಲಿ ನೀರಾವರಿ ವಿವಾದಗಳ ಬಗ್ಗೆ ಚರ್ಚೆಗೆ ನಡೆಯುವ ಸಾಧ್ಯತೆ ಇಲ್ಲ. ಸಣ್ಣ ನೀರಾವರಿ, ರೈಲ್ವೇ ವಿಚಾರಗಳು, ಹಾಗೂ ಮೂಲಭೂತಸೌಕರ್ಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ