ಆ್ಯಪ್ನಗರ

ಪಠ್ಯ ವಿವಾದ: ಗುರುವಾರ ಬಸವರಾಜ ಬೊಮ್ಮಾಯಿಗೆ ಮತ್ತಷ್ಟು ಮಾಹಿತಿ ನೀಡಲಿದ್ದಾರೆ ಬಿ.ಸಿ ನಾಗೇಶ್

ಪಠ್ಯ ವಿವಾದ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದು, ಗುರುವಾರ ಬಸವರಾಜ ಬೊಮ್ಮಾಯಿಗೆ ಮತ್ತಷ್ಟು ಮಾಹಿತಿಯನ್ನು ಸಚಿವ ಬಿ.ಸಿ ನಾಗೇಶ್ ನೀಡಲಿದ್ದಾರೆ. ಇದಾದ ಬಳಿಕ ಸಿಎಂ ಅವರು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರಿಗೆ ಉತ್ತರ ನೀಡಲಿದ್ದಾರೆ.

Vijaya Karnataka Web 23 Jun 2022, 9:57 am

ಹೈಲೈಟ್ಸ್‌:

  • ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ ಪಠ್ಯ ವಿವಾದ
  • ಗುರುವಾರ ಬಸವರಾಜ ಬೊಮ್ಮಾಯಿಗೆ ಮತ್ತಷ್ಟು ಮಾಹಿತಿ ನೀಡಲಿದ್ದಾರೆ ಬಿ.ಸಿ ನಾಗೇಶ್
  • ಸ್ಪಷ್ಟನೆ ಪಡೆದುಕೊಂಡ ಬಳಿಕ ದೇವೇಗೌಡರಿಗೆ ಸಿಎಂ ಉತ್ತರ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web CM Basavaraj Bommai
ಬೆಂಗಳೂರು: ಪಠ್ಯ ಪರಿಷ್ಕರಣೆ ವಿವಾದದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರವನ್ನು ಬರೆದಿರುವ ಹಿನ್ನೆಲೆಯಲ್ಲಿ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ವಿಚಾರವಾಗಿ ಬುಧವಾರ ಸಿಎಂ ನಿವಾಸದಲ್ಲಿ ಸಭೆ ನಡೆದಿದ್ದು, ಪರಿಷ್ಕರಣೆ ಕುರಿತಾಗಿ ಮಾಹಿತಿಯನ್ನು ಸಚಿವ ಬಿ.ಸಿ ನಾಗೇಶ್ ನೀಡಿದ್ದಾರೆ. ಗುರುವಾರ ಕೂಡಾ ಸಿಎಂ ಅವರನ್ನು ಭೇಟಿ ಮಾಡಲಿರುವ ನಾಗೇಶ್ ಮತ್ತಷ್ಟು ಮಾಹಿತಿಯನ್ನು ನೀಡಲಿದ್ದಾರೆ.


ಪಠ್ಯ ಪರಿಷ್ಕರಣೆಯ ವಿಚಾರವಾಗಿ ಶನಿವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆದಿತ್ತು. ಈ ಪ್ರತಿಭಟನೆಯಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಭಾಗಿಯಾಗಿದ್ದರು. ಬಳಿಕ ಸುದೀರ್ಘವಾಗಿ ಸಿಎಂ ಬೊಮ್ಮಾಯಿ ಅವರಿಗೆ ಪತ್ರವನ್ನು ಬರೆದಿದ್ದರು. ಪತ್ರದಲ್ಲಿ ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥ ಅವರ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದರು.

ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ : ಶಿಕ್ಷಣ ಸಚಿವ ಬಿ. ಸಿ. ನಾಗೇಶ್‌ರಿಂದ ಸ್ಪಷ್ಟನೆ
ಅಷ್ಟೇ ಅಲ್ಲದೆ, ಪರಿಷ್ಕೃತಗೊಂಡ ಪಠ್ಯವನ್ನು ವಾಪಸ್‌ ಪಡೆದುಕೊಂಡು ಹಳೆ ಪಠ್ಯವನ್ನು ಮುಂದುವರಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಅವರು ಬುಧವಾರ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಜೊತೆ ಸಭೆಯನ್ನು ನಡೆಸಿದ್ದಾರೆ. ಒಟ್ಟು ವಿವಾದದ ಕುರಿತಾಗಿ ಪೂರ್ಣ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಇನ್ನು ಗುರುವಾರ ಕೂಡಾ ಮತ್ತಷ್ಟು ಮಾಹಿತಿಯನ್ನು ನಾಗೇಶ್ ಅವರು ನೀಡಲಿದ್ದಾರೆ. ಬುಧವಾರ ಸಭೆಯಲ್ಲಿ ಒಂದೆರಡು ವಿಷಯಗಳ ಬಗ್ಗೆ ಸಿಎಂ ಅವರು ಸ್ಪಷ್ಟನೆ ಕೇಳಿದ್ದರು. ಈ ಸಂದರ್ಭದಲ್ಲಿ ಪೂರಕ ಮಾಹಿತಿಯನ್ನು ನೀಡಲು ಸಾಧ್ಯವಾಗಿರಲಿಲ್ಲ. ಈ ನಿಟ್ಟಿನಲ್ಲಿ ಇಂದು ಮತ್ತಷ್ಟು ಪೂರಕ ಮಾಹಿತಿಯನ್ನು ಸಚಿವರು ಸಿಎಂಗೆ ನೀಡಲಿದ್ದಾರೆ.

ಇದಾದ ಬಳಿಕ ಸುದೀರ್ಘವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರಿಗೆ ಉತ್ತರವನ್ನು ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಈ ನಡುವೆ ಪಠ್ಯ ವಿವಾದದ ಕುರಿತಾಗಿ ಪ್ರಮುಖ ಸಾಹಿತಿಗಳು ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಲು ಅವಕಾಶ ಕೇಳಿದ್ದಾರೆ. ಸಾಹಿತಿಗಳಾದ ಕೆ. ಮರುಳಸಿದ್ದಪ್ಪ, ಪ್ರೊ. ಎಸ್‌.ಜಿ ಸಿದ್ಧರಾಮಯ್ಯ, ರಾಜೇಂದ್ರ ಚೆನ್ನಿ, ಬಂಜಗೆರೆ ಜಯಪ್ರಕಾಶ್, ಕೆಎಸ್‌ ವಿಮಲಾ ಅವರನ್ನು ಒಳಗೊಂಡ ಸಾಹಿತಿಗಳು ಸಿಎಂಗೆ ಪತ್ರವನ್ನು ಬರೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ