ಆ್ಯಪ್ನಗರ

ಲಿಂಗಾಯತರಿಗೆ 16% ವಿಶೇಷ ಮೀಸಲಾತಿ: ಕುಲಶಾಸ್ತ್ರೀಯ ಅಧ್ಯಯನಕ್ಕಾಗಿ ಸಿಎಂಗೆ ಹೊರಟ್ಟಿ ಪತ್ರ

ಮಹಾರಾಷ್ಟ್ರ ಮಾದರಿಯಲ್ಲಿ ಲಿಂಗಾಯತ ಸಮಾಜಕ್ಕೆ ಶೇ.16 ರಷ್ಟು ವಿಶೇಷ ಮೀಸಲನ್ನು ಕಲ್ಪಿಸುವ ಕುರಿತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ಕುಲಶಾಸ್ತ್ರೀಯ ಅಧ್ಯಯನ ನಡೆಸಬೇಕು ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಅವರು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದಾರೆ.

Vijaya Karnataka Web 17 Jan 2020, 9:19 pm
ಬೆಂಗಳೂರು: ಮಹಾರಾಷ್ಟ್ರ ಮಾದರಿಯಲ್ಲಿ ಲಿಂಗಾಯತ ಸಮಾಜಕ್ಕೆ ಶೇ.16 ರಷ್ಟು ವಿಶೇಷ ಮೀಸಲನ್ನು ಕಲ್ಪಿಸುವ ಕುರಿತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ಕುಲಶಾಸ್ತ್ರೀಯ ಅಧ್ಯಯನ ನಡೆಸಬೇಕು ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಅವರು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದಾರೆ.
Vijaya Karnataka Web basavaraj horatti


ಈ ಸಂಬಂಧ ಸಿಎಂಗೆ ಪತ್ರ ಬರೆದಿರುವ ಅವರು,''ಮಹಾರಾಷ್ಟ್ರ ಸರಕಾರವು ಪ್ರವರ್ಗ 3ಬಿ ಯಲ್ಲಿರುವ ಅಲ್ಲಿಯ ಬಹುಸಂಖ್ಯಾತ ಹಿಂದೂ ಮರಾಠ ಸಮಾಜಕ್ಕೆ ಶೇ.52 ರಷ್ಟು ಮೀಸಲಿನಲ್ಲಿ ಯಾವುದೇ ಕಡಿತಗೊಳಿಸದೇ ಶೇ.16 ರಷ್ಟು ವಿಶೇಷ ಮೀಸಲನ್ನು ಡಿಸೆಂಬರ್‌ 1 ರಿಂದ ಜಾರಿಗೆ ಬರುವಂತೆ ಮೀಸಲು ಪ್ರಮಾಣವನ್ನು ಶೇ.68 ರಷ್ಟು ಹೆಚ್ಚಳ ಮಾಡಿದೆ,'' ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಸುಪ್ರೀಂಕೋರ್ಟ್‌ 2010ರಲ್ಲಿನೀಡಿದ ಆದೇಶದಂತೆ ಖಚಿತ ವೈಜ್ಞಾನಿಕ ದಾಖಲೆಗಳು ಇದ್ದಲ್ಲಿ ಸರಕಾರವು ಮೀಸಲು ಪ್ರಮಾಣವನ್ನು ಶೇ.50 ಕ್ಕಿಂತ ಹೆಚ್ಚಿಸಬಹುದು ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ನೆರೆ ರಾಜ್ಯದ ಸರಕಾರವು ಅಲ್ಲಿನ ಬಹುಸಂಖ್ಯಾತ ಹಿಂದೂ ಮರಾಠ ಸಮಾಜಕ್ಕೆ ಈ ಕೊಡುಗೆ ನೀಡಿದೆ. ಕಳೆದ ವರ್ಷದ ಜೂನ್‌ 27 ರಂದು ಮಹಾರಾಷ್ಟ್ರ ಹೈಕೋರ್ಟ್‌ ಶೇ.16 ರಷ್ಟು ವಿಶೇಷ ಮೀಸಲನ್ನು ಎತ್ತಿ ಹಿಡಿದಿದೆ.

ಹೊರಟ್ಟಿಗೆ ಏಕೆ ಮೀಸಲು ಚಿಂತೆ: ಡಿಸಿಎಂ ಸವದಿ

ತಮಿಳುನಾಡಿನಲ್ಲಿ ಶೇ.69 ಹಾಗೂ ಹರಿಯಾಣದಲ್ಲಿ ಶೇ.70 ಮೀಸಲು ಜಾರಿಯಲ್ಲಿರುತ್ತದೆ. ರಾಜ್ಯದ ಬಹುಸಂಖ್ಯಾತ ಪ್ರವರ್ಗ 3ಬಿ ಯಲ್ಲಿರುವ ಲಿಂಗಾಯತರಿಗೆ ಈಗಿರುವ ಶೇ.50 ಮೀಸಲನ್ನು ಕಡಿತಗೊಳಿಸದೆ ಮಹಾರಾಷ್ಟ್ರ ಮಾದರಿಯಲ್ಲಿಯೇ ಜಾರಿಗೆ ತರಬೇಕು,''ಎಂದು ಮನವಿ ಮಾಡಿದ್ದಾರೆ.

ಕಲ್ಲಡ್ಕ ಭಟ್ಟರು ಸಂವಿಧಾನ ತಿಳಿಯುವ ಅಗತ್ಯವಿದೆ: ಐವನ್‌ ಡಿಸೋಜ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ