ಆ್ಯಪ್ನಗರ

ಶೂಟ್‌ ಕೊರೊನಾ ! ಗಮನ ಸೆಳೆಯುತ್ತಿದೆ ಬೆಂಗಳೂರು ಪೊಲೀಸರ ಹಾಡು

ಕೊರೊನಾ ಮಹಾಮಾರಿಯ ವಿರುದ್ಧ ಹೋರಾಟ ನಡೆಸುತ್ತಿರುವ ಈ ಸಂದರ್ಭದಲ್ಲಿ ಜನರು ಸಹಕಾರ ನೀಡಬೇಕು ಎಂದು ಹಾಡಿನ ಮೂಲಕ ಬೆಂಗಳೂರು ಪೊಲೀಸರು ಮನವಿ ಮಾಡುತ್ತಿದ್ದಾರೆ. ಪೊಲೀಸರ ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಗಮನಸೆಳೆಯುತ್ತಿದೆ.

Vijaya Karnataka Web 31 Mar 2020, 9:22 am
ಬೆಂಗಳೂರು: ಕೊರೊನಾ ಮಹಾಮಾರಿಯ ವಿರುದ್ಧ ದೇಶ ಹೋರಾಡುತ್ತಿದೆ. 21 ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್‌ ಜಾರಿಯಲ್ಲಿದೆ. ಜನರು ವಿನಾ ಕಾರಣ ಹೊರಬರದಂತೆ ಹಗಲು-ರಾತ್ರಿ ಪೊಲೀಸರು ಕಾವಲು ಕಾಯುತ್ತಿದ್ದಾರೆ.
Vijaya Karnataka Web bhaskar rao


ಮನೆಯಿಂದ ಹೊರಬಂದವರ ಮೇಲೆ ಲಾಠಿ ಪ್ರಹಾರವನ್ನು ನಡೆಸುತ್ತಿದ್ದಾರೆ. ಖಾಕಿಗಳ ಕುರಿತಾಗಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಈ ಸಂದರ್ಭದಲ್ಲಿ ಬೆಂಗಳೂರು ಪೊಲೀಸರ ಈ ಹಾಡೊಂದು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.

ಕೇರಳದಲ್ಲಿ ಗುಣಮುಖರಾದವರಿಗೆ ಕೇಕ್‌ ಕೊಟ್ಟು ಬೀಳ್ಕೊಟ್ಟ ಆಸ್ಪತ್ರೆ ಸಿಬ್ಬಂದಿ


ಕೊರೊನಾ ಹೊಡೆದೋಡಿಸಲು ಜನರು ನಮ್ಮ ಜೊತೆಗೆ ಸಹಕರಿಸಬೇಕು ಎಂದು ಪೊಲೀಸರು ಭಿನ್ನ ಸ್ವರೂಪದಲ್ಲಿ ಜನರ ಗಮನ ಸೆಳೆಯುತ್ತಿದ್ದಾರೆ. ಸದ್ಯ ಲಾಠಿಯನ್ನು ದೂರ ಇಡಿ ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್ ಸೂಚನೆಯ ಹಿನ್ನೆಲೆಯಲ್ಲಿ ಹಾಡಿನ ಮೂಲಕ ರಸ್ತೆಯಲ್ಲಿ ಚಿತ್ರ ಬಿಡಿಸುವ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.

ಕೊರೊನಾ ವೈರಸ್ ಲೈವ್ ಅಪ್ಡೇಟ್ಸ್: ದೇಶದಲ್ಲಿ 1300 ಗಡಿ ದಾಟಿದ ಸೋಂಕಿತ ಪ್ರಕರಣ!

ಇದೇ ಮಾದರಿಯಲ್ಲಿ ಬೆಂಗಳೂರು ಪೊಲೀಸರು "ಶೂಟ್‌ ಕೊರೊನಾ ನೆಮ್ಮದಿ ಪಡೆಯೋಣ" ಎಂದು ಹಾಡನ್ನು ಹಾಡಿ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಪೊಲೀಸರು ಹಾಡಿದ ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೊರೊನಾದಂತಹಾ ಸಂಕಷ್ಟದ ಸಮಯದಲ್ಲೂ ಪೊಲೀಸರ ಪರಿಸ್ಥಿತಿ ಹೇಗಿರುತ್ತದೆ, ಅವರ ಕುಟುಂಬದ ಆತಂಕ ಏನು ಎಂಬುವುದನ್ನು ಈ ವಿಡಿಯೋ ಹಾಡಿನ ಮೂಲಕ ತೋರಿಸಿದ್ದಾರೆ.

ಲಾಕ್ ಡೌನ್ ಹಿನ್ನೆಲೆ, ಕಲ್ಯಾಣಮಂಟಪದಲ್ಲಿ ಕಾರ್ಮಿಕರಿಗೆ ನೆಲೆ

ಅಲ್ಲದೆ ಬೆಂಗಳೂರು ನಗರದಲ್ಲಿ ಪೊಲೀಸರು ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂಬವುದು ಹಾಡಿನ ವಿಡಿಯೋದಲ್ಲಿ ತೊರಿಸಲಾಗಿದೆ. ಹೀಗೆ ಪೊಲೀಸರಲ್ಲೂ ಆತ್ಮವಿಶ್ವಾಸ ಮೂಡಿಸುವ ಹಾಗೂ ಅವರಲ್ಲಿ ಉತ್ಸಾಹ ತುಂಬುವುದರ ಜೊತೆಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ವಿಡಿಯೋ ಹಾಡನ್ನು ತಯಾರಿಸಲಾಗಿದೆ.

ಪೊಲೀಸರು ಈ ವಿಭಿನ್ನ ಪ್ರಯತ್ನಕ್ಕೆ ನೆಟ್ಟಿಗರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಲಾಠಿಯ ಬದಲಾಗಿ ವಿಭಿನ್ನವಾಗಿ ಜನರಲ್ಲಿಅರಿವು ಮೂಡಿಸುವ ಮೂಲಕ ಅವರನ್ನು ವಿಶ್ವಾಸಕ್ಕೆ ಪಡೆದುಕೊಳ್ಳುವ ಪೊಲೀಸರ ಈ ಪ್ರಯತ್ನ ಶ್ಲಾಘನೀಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ