ಆ್ಯಪ್ನಗರ

ಅಕ್ಷಯ್ ಕುಮಾರ್ 'ಗುಡ್‌ ನ್ಯೂಸ್‌' ಸಿನೆಮಾಗೆ ಹೈಕೋರ್ಟ್ ಕೊಡ್ತು 'ಗುಡ್‌ ನ್ಯೂಸ್‌'..!

'ಗುಡ್‌ ನ್ಯೂಸ್ ಚಿತ್ರದಲ್ಲಿ ಇಂದಿರಾ ಐವಿಎಫ್‌ ಕೇಂದ್ರವನ್ನು ಮಾತ್ರ ಉತ್ತೇಜಿಸುವಂತಿದೆ, ಜೊತೆಗೆ ಅದು ಈಗಾಗಲೇ ಕೃತಕ ಗರ್ಭಧಾರಣೆ ಮಾಡಿಸಿಕೊಂಡಿರುವವರಲ್ಲಿ ಸಾಕಷ್ಟು ಗೊಂದಲ ಮೂಡಿಸಲಿದೆ' - ಹೈಕೋರ್ಟ್‌ಗೆ ಅರ್ಜಿ

Vijaya Karnataka Web 27 Dec 2019, 8:22 pm
ಬೆಂಗಳೂರು: ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಮತ್ತು ಕರೀನಾ ಕಪೂರ್‌ ನಟಿಸಿರುವ 'ಗುಡ್‌ ನ್ಯೂಸ್‌' ಹಿಂದಿ ಚಲನಚಿತ್ರದ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿದ್ದ ಅರ್ಜಿಯ ವಿಚಾರಣೆಯನ್ನು ಜನವರಿ ಮೊದಲ ವಾರಕ್ಕೆ ಹೈಕೋರ್ಟ್‌ ಮುಂದೂಡಿದೆ.
Vijaya Karnataka Web good news movie
ಅಕ್ಷಯ್ ಕುಮಾರ್ 'ಗುಡ್‌ ನ್ಯೂಸ್‌' ಸಿನೆಮಾಗೆ ಹೈಕೋರ್ಟ್ ಕೊಡ್ತು 'ಗುಡ್‌ ನ್ಯೂಸ್‌'..!


ಹಾಗಾಗಿ, ಶುಕ್ರವಾರ ದೇಶಾದ್ಯಂತ ಬಿಡುಗಡೆಯಾಗಿರುವ ಚಿತ್ರದ ಪ್ರದರ್ಶನ ರಾಜ್ಯದಲ್ಲೂ ಅಬಾಧಿತವಾಗಿ ಮುಂದುವರೆದಿದೆ. ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸಮೀಮ್‌ ರಝಾ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಶುಕ್ರವಾರ ನಡೆಯಿತು. ನ್ಯಾ. ಕೃಷ್ಣ ದೀಕ್ಷಿತ್‌ ಮತ್ತು ನ್ಯಾ.ಎಂ.ನಾಗಪ್ರಸನ್ನ ನೇತೃತ್ವದ ರಜಾಕಾಲದ ವಿಭಾಗೀಯಪೀಠದ ಮುಂದೆ ಅರ್ಜಿ ವಿಚಾರಣೆಗೆ ಬಂದಿತ್ತು.

ಗುಡ್‌ ನ್ಯೂಸ್‌ ಸಿನೆಮಾ ವಿರುದ್ಧ ಏಕೆ ತಕರಾರು..?

ಗುಡ್‌ನ್ಯೂಸ್‌ ಚಿತ್ರದ ಕಥಾವಸ್ತು ಕೃತಕ ಗರ್ಭಧಾರಣೆ ಚಿಕಿತ್ಸೆ ಕುರಿತಾಗಿದೆ. ಚಿತ್ರದ ಸಂಭಾಷಣೆಯೊಂದರಲ್ಲಿ 'ಇಂದಿರಾ ಐವಿಎಫ್‌' ಸಂಸ್ಥೆ ಹೊರತುಪಡಿಸಿ ಉಳಿದ ಸಂಸ್ಥೆಗಳಲ್ಲಿ ಉತ್ತಮ ಚಿಕಿತ್ಸೆ ದೊರೆಯುವುದಿಲ್ಲ ಎಂಬ ಅರ್ಥ ಬರುವ ಮಾತುಕತೆ ಇದೆ. ಇದರಿಂದ ಬೇರೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದ ಪೋಷಕರ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅರ್ಜಿ ಸಲ್ಲಿಸಲಾಗಿತ್ತು. ಹೀಗಾಗಿ ಈ ಚಿತ್ರ ಪ್ರದರ್ಶನಕ್ಕೆ ತಡೆ ನೀಡಬೇಕೆಂದು ದೂರುದಾರರು ಕೋರಿದರು.

ವಿಡಿಯೋ: ಬಾಲಿವುಡ್‌ ನಟಿಯರಿಗೆ ಕರಣ್ ಜೋಹರ್ ಹೇಳಿದ 'ಗುಡ್ ನ್ಯೂಸ್' ಏನು ಗೊತ್ತಾ?

ಅರ್ಜಿಯನ್ನು ಪರಿಶೀಲಿಸಿದ ಪೀಠ, 'ಐವಿಎಫ್‌ ಚಿಕಿತ್ಸೆ ಬಗ್ಗೆ ಎಲ್ಲರಿಗೂ ಮಾಹಿತಿ ಇದೆ. ರಜಾಕಾಲದ ನಂತರ ಅರ್ಜಿ ಕುರಿತು ವಿಸ್ತೃತವಾಗಿ ವಿಚಾರಣೆ ನಡೆಸೋಣ ಎಂದು ಮುಂದೂಡಿತು.

'ಚಿತ್ರದಲ್ಲಿ ಇಂದಿರಾ ಐವಿಎಫ್‌ ಕೇಂದ್ರವನ್ನು ಮಾತ್ರ ಉತ್ತೇಜಿಸುವಂತಿದೆ, ಜೊತೆಗೆ ಅದು ಈಗಾಗಲೇ ಕೃತಕ ಗರ್ಭಧಾರಣೆ ಮಾಡಿಸಿಕೊಂಡಿರುವವರಲ್ಲಿ ಸಾಕಷ್ಟು ಗೊಂದಲ ಮೂಡಿಸಲಿದೆ' ಎಂದು ಅರ್ಜಿದಾರರು ವಾದಿಸಿದ್ದಾರೆ.

ತುಂಬು ಗರ್ಭಿಣಿಯಾಗಿ ಕಾಣಿಸಿಕೊಂಡ ನಟಿ ಕರೀನಾ ಕಪೂರ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ