ಆ್ಯಪ್ನಗರ

ಉತ್ತಮ ಆಡಳಿತದಲ್ಲಿ ಕರ್ನಾಟಕವೇ ಬೆಸ್ಟ್‌; ಉತ್ತರ ರಾಜ್ಯಗಳದ್ದೇ ಕಳಪೆ ಸಾಧನೆ!

ರಾಜ್ಯದಲ್ಲಿ 18 ತಿಂಗಳು ರಾಜಕೀಯ ಅಸ್ಥಿರತೆ ಕಂಡಿದ್ದರೂ, ಆರ್ಥಿಕ ಆಡಳಿತದಲ್ಲಿ ನಂ.1 ಸ್ಥಾನ ಪಡೆದಿದೆ. ಉತ್ತಮ ಆಡಳಿತ ಟಾಪ್‌ ರಾಜ್ಯಗಳ ಪೈಕಿ ತಮಿಳುನಾಡು ನಂ.1 ಸ್ಥಾನದಲ್ಲಿದೆ. ಯೋಗಿ ಆದಿತ್ಯನಾಥ್‌ ಆಡಳಿತದ ಉತ್ತರ ಪ್ರದೇಶ ಕೊನೆಯ ಐದು ಸ್ಥಾನಗಳ ಪೈಕಿ ಸ್ಥಾನ ಪಡೆದಿದೆ.

THE ECONOMIC TIMES 26 Dec 2019, 7:38 am
ಹೊಸದಿಲ್ಲಿ: ಕೇಂದ್ರ ಸರಕಾರ ಸಿದ್ಧಪಡಿಸಿರುವ ದೇಶದ ಮೊದಲ 'ಉತ್ತಮ ಆಡಳಿತ ಸೂಚ್ಯಂಕ'ದಲ್ಲಿ ದಕ್ಷಿಣ ಭಾರತದ ರಾಜ್ಯಗಳು ಮೇಲುಗೈ ಸಾಧಿಸಿದ್ದು, ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ರಾಜ್ಯಗಳ ಸಾಧನೆ ಅಳೆಯುವ ಉದ್ದೇಶದಿಂದ ನರೇಂದ್ರ ಮೋದಿ ಅವರ ಸರಕಾರದ ಮೊದಲ ಅವಧಿಯಲ್ಲಿಯೇ 'ಉತ್ತಮ ಆಡಳಿತ ಸೂಚ್ಯಂಕ' (ಜಿಜಿಐ) ಸಿದ್ಧಪಡಿಸುವ ನಿರ್ಧಾರ ಕೈಗೊಳ್ಳಲಾಗಿತ್ತು.
Vijaya Karnataka Web Karnataka Govt


ಒಟ್ಟು 10 ವಿಭಾಗಗಳು ಮತ್ತು 50 ಪ್ರಮುಖ ವಿಷಯಗಳನ್ನು ಆಧಾರವಾಗಿಟ್ಟುಕೊಂಡು ರಾಜ್ಯಗಳ ಮೌಲ್ಯಮಾಪನ ಮಾಡಲಾಗಿದೆ. ಜಿಜಿಐ ಅನ್ನು ಕೇಂದ್ರ ಸರಕಾರ ಶೀಘ್ರದಲ್ಲಿಯೇ ಅಧಿಕೃತವಾಗಿ ಪ್ರಕಟಿಸಲಿದೆ. 'ಉತ್ತಮ ಆಡಳಿತ ದಿನ'ವಾದ ಡಿ.25ರಂದೇ ವಿಜಯ ಕರ್ನಾಟಕ ಸೋದರ ಪತ್ರಿಕೆ ಎಕನಾಮಿಕ್‌ ಟೈಮ್ಸ್‌ಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಉತ್ತಮ ಆಡಳಿತದಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ ಹಾಗೂ ಕರ್ನಾಟಕ ನಂತರದ ಸ್ಥಾನಗಳಲ್ಲಿವೆ. ಒಡಿಶಾ, ಬಿಹಾರ, ಗೋವಾ, ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ ಕೊನೆಯ ಐದು ಸ್ಥಾನಗಳಲ್ಲಿವೆ.

ಈಶಾನ್ಯ ಭಾರತದಲ್ಲಿ ಹಿಮಾ­ಚಲ ಪ್ರದೇಶ, ಉತ್ತರಾ­ಖಂಡ, ತ್ರಿಪುರಾ ಉತ್ತಮ ರಾಜ್ಯಗಳೆನಿಸಿ­ಕೊಂಡರೆ, ನಾಗಾ­ಲೆಂಡ್‌ ಮತ್ತು ಅರುಣಾಚಲ ಪ್ರದೇಶ ಕೊನೆಯ ಸ್ಥಾನದ­ಲ್ಲಿವೆ. ಕೇಂದ್ರಾ­ಡಳಿತ ಪ್ರದೇಶಗಳಲ್ಲಿ ಪುದು­ಚೆರಿ ಹಾಗೂ ಚಂಡೀ­ಗಢ ಟಾಪ್‌ 2 ಸ್ಥಾನ­ದಲ್ಲಿದ್ದು, ಲಕ್ಷದ್ವೀಪ ಕೊನೆಯ ಸ್ಥಾನದಲ್ಲಿದೆ. ವಲಯವಾರು ಮೌಲ್ಯಮಾಪನದಲ್ಲಿ ಪರಿ­ಸರ ವಿಚಾರದಲ್ಲಿ ಪಶ್ಚಿಮ ಬಂಗಾಳ ಅಗ್ರಸ್ಥಾನ­ದಲ್ಲಿದೆ. ಕೇರಳ, ಗೋವಾ, ಆಂಧ್ರಪ್ರದೇಶಗಳು ನಂತರ ಮೂರು ಸ್ಥಾನ ಪಡೆದಿವೆ. ವಾಯು­ಮಾಲಿನ್ಯದಿಂದ ಕಂಗೆಟ್ಟಿ­ರುವ ದಿಲ್ಲಿ ಕೊನೆಯ­ಲ್ಲಿದೆ.

ಮೊದಲ ಕನ್ನಡ ಶಾಲೆಗೆ ಶತಮಾನೋತ್ಸವ ಸಂಭ್ರಮ

ನ್ಯಾಯಾಂಗ ಮತ್ತು ಸಾರ್ವಜನಿಕ ಭದ್ರತೆಗೆ ಸಂಬಂಧಿಸಿದ ರಾರ‍ಯಂಕಿಂಗ್‌ನಲ್ಲಿ ಪಶ್ಚಿಮ ಬಂಗಾಳ ಕೊನೆಯ ರ್ಯಾಂಕ್‌ಗೆ ಕುಸಿದಿದ್ದರೆ, ಈ ವಲಯದಲ್ಲಿ ತಮಿಳುನಾಡು ಮತ್ತು ಕೇರಳ ಮೊದಲ ಎರಡು ರ್ಯಾಂಕ್‌ ಪಡೆದಿವೆ. ಕರ್ನಾಟಕದಲ್ಲಿ ಸುಮಾರು 18 ತಿಂಗಳು ರಾಜಕೀಯ ಡೋಲಾಯಮಾನ ಪರಿಸ್ಥಿತಿ ಇದ್ದರೂ ಆರ್ಥಿಕ ಆಡಳಿತದಲ್ಲಿ ಟಾಪ್‌ನಲ್ಲಿದೆ. ವೈದ್ಯಕೀಯ ಸೌಲಭ್ಯ ಮತ್ತು ಸಾರ್ವಜನಿಕ ಆರೋಗ್ಯ ವಲಯದಲ್ಲಿ ಕೇರಳ ಮೊದಲ ಸ್ಥಾನದಲ್ಲಿದೆ. ಎನ್‌ಡಿಎ-1 ಅವಧಿಯಲ್ಲಿ ವಿವಿಧ ಸಚಿ­ವಾಲಯಗಳ ಕಾರ್ಯದರ್ಶಿಗಳು ರಾಜ್ಯಗಳ ಸಾಧನೆ ಅಳೆಯುವ ಶಿಫಾರಸು ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪ­ವಾದ 'ಗರಿಷ್ಠ ಆಡಳಿತ, ಕನಿಷ್ಠ ಸರಕಾರ'ಕ್ಕೆ ಪೂರಕವಾಗಿ ಇಂತಹ ಸಮೀಕ್ಷೆ ನಡೆಸುವುದು ಅಗತ್ಯ ಎಂದು ಕಾರ್ಯದರ್ಶಿಗಳು ಅಭಿಪ್ರಾಯಪಟ್ಟಿದ್ದರು.

2020ರ ಗಣರಾಜ್ಯೋತ್ಸವಕ್ಕೂ 'ಕಲ್ಯಾಣ ಕರ್ನಾಟಕ' ಸ್ತಬ್ಧಚಿತ್ರ: ಶ್ರೀ ಶಿವಾಚಾರ್ಯ ಸ್ವಾಮೀಜಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ