ಆ್ಯಪ್ನಗರ

ಸೇನಾ ಪೊಲೀಸರಿಂದ ಕಾರ್ಗಿಲ್‌ಗೆ ಬೈಕ್‌ ರೈಡ್‌: ವಿಜಯ ದಿವಸ್‌ ಆಚರಣೆ

ಕಾರ್ಗಿಲ್‌ ವಿಜಯ ದಿನದ ಸ್ಮರಣಾರ್ಥ, ಬೆಂಗಳೂರು ಮಿಲಿಟರಿ ಪೊಲೀಸ್‌ ವಿಭಾಗದ ಅಶ್ವ ಮೋಟರ್‌ ಸೈಕಲ್‌ ತಂಡ ಬೆಂಗಳೂರಿನಿಂದ ಕಾರ್ಗಿಲ್‌ ವರೆಗೆ ಬೈಕ್‌ ರೈಡ್‌ ಹಮ್ಮಿಕೊಂಡಿದೆ.

TIMESOFINDIA.COM 2 Jul 2018, 6:16 pm
ಬೆಂಗಳೂರು: ಕಾರ್ಗಿಲ್‌ ವಿಜಯ ದಿನದ ಸ್ಮರಣಾರ್ಥ, ಬೆಂಗಳೂರು ಮಿಲಿಟರಿ ಪೊಲೀಸ್‌ ವಿಭಾಗದ ಅಶ್ವ ಮೋಟರ್‌ ಸೈಕಲ್‌ ತಂಡ ಬೆಂಗಳೂರಿನಿಂದ ಕಾರ್ಗಿಲ್‌ ವರೆಗೆ ಬೈಕ್‌ ರೈಡ್‌ ಆರಂಭದೆ.
Vijaya Karnataka Web army


ಲೆಫ್ಟಿನೆಂಟ್‌ ಕರ್ನಲ್‌ ವಿಕ್ರಂ ರಾಜೆಭೋಸ್ಲೆ ನೇತೃತ್ವದ 5 ಜನರ ತಂಡ ಜು. 24ರಂದು ಕಾರ್ಗಿಲ್‌ ತಲುಪಲಿದೆ. ಈ ಸಾಹಸಕ್ಕಾಗಿ ನೂತನವಾಗಿ ಮಾರುಕಟ್ಟೆಗೆ ಬಿಡುಗಡೆಗೊಂಡಿರುವ ಟಿವಿಎಸ್‌ ಅಪಾಚೆ 200 ಬೈಕ್‌ ಅನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

8 ರಾಜ್ಯಗಳ ಮೂಲಕ ಕಾರ್ಗಿಲ್‌ ತಲುಪಲಿರುವ ತಂಡ, ಒಟ್ಟಾರೆ 3250 ಕಿ.ಮೀಗಳನ್ನು 20 ದಿನದಲ್ಲಿ ಕ್ರಮಿಸಲು ಮುಂದಾಗಿದೆ. ಬೆಳಗಾವಿ, ಪುಣೆ, ಮುಂಬಯಿ, ವಡೋದರ, ಉದಯ್‌ಪುರ, ನಸಿರಾಬಾದ್‌, ಹೊಸದಿಲ್ಲಿ, ಚಂಡೀಗಢ, ಮನಾಲಿ, ಸರ್ಚು ಹಾಗೂ ಲೇಹ್‌ ಮಾರ್ಗದಲ್ಲಿ ಸಂಚರಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಾರ್ಗಿಲ್‌ ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ನಮನ ಸಲ್ಲಿಸುವುದು ಹಾಗೂ ಯುವ ಸಮುದಾಯದಲ್ಲಿ ಸೈನ್ಯ ಸೇರಲು ಉತ್ತೇಜಿಸುವ ಉದ್ಧೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರಕ್ಷಣಾ ಇಲಾಖೆ ಸಾರ್ವಜನಿಕ ಸಂಪರ್ಕ ಇಲಾಖೆ ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ