ಆ್ಯಪ್ನಗರ

ದಿಲ್ಲಿಯಲ್ಲೇ 4 ದಿನ ಬಿಜೆಪಿ ಶಾಸಕರ ಠಿಕಾಣಿ: ಜ.13, 14 ರಂದು ವಿಶೇಷ ಸಭೆ

ಸಭೆಗೆ ಮೊದಲ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿದ್ದು 2ನೇ ದಿನ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಭಾಗವಹಿಸುತ್ತಿದ್ದಾರೆ. ಎಲ್ಲಾ ನಾಯಕರು ದಿಲ್ಲಿಯಲ್ಲಿಯೇ ಇರುವುದರಿಂದ ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆ ಸಮಾಲೋಚನೆ ನಡೆಯುವ ಸಾಧ್ಯತೆಗಳಿವೆ

Vijaya Karnataka 12 Jan 2019, 5:30 am
ಬೆಂಗಳೂರು : ದಿಲ್ಲಿಯಲ್ಲಿ ಶುಕ್ರವಾರದಿಂದ ಆರಂಭವಾಗಿರುವ ಬಿಜೆಪಿ ರಾಷ್ಟ್ರೀಯ ಪರಿಷತ್‌ ಸಭೆಯಲ್ಲಿ ಭಾಗವಹಿಸಲು ತೆರಳಿರುವ ರಾಜ್ಯ ಬಿಜೆಪಿ ಶಾಸಕರು, ಸಂಸದರು, ಮೇಲ್ಮನೆ ಸದಸ್ಯರು ಸೇರಿದಂತೆ 600 ಮಂದಿ ಜ.14 ರ ತನಕ ದಿಲ್ಲಿಯಲ್ಲಿಯೇ ಠಿಕಾಣಿ ಹೂಡಲಿದ್ದಾರೆ.
Vijaya Karnataka Web ಬಿಜೆಪಿ
ಬಿಜೆಪಿ


ಶುಕ್ರವಾರ ಹಾಗೂ ಶನಿವಾರ ರಾಷ್ಟ್ರೀಯ ಪರಿಷತ್‌ ಸಭೆ ನಡೆದರೆ ಭಾನುವಾರ ಹಾಗೂ ಸೋಮವಾರ ವಿಶೇಷ ಸಭೆ ನಡೆಯಲಿದೆ. ಈ ಸಭೆಗೆ ಮೊದಲ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿದ್ದು 2ನೇ ದಿನ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಭಾಗವಹಿಸುತ್ತಿದ್ದಾರೆ.

ಹೀಗಾಗಿ ರಾಜ್ಯದಿಂದ ತೆರಳಿರುವ ಬಿಜೆಪಿಯ ಎಲ್ಲಾ ಮುಖಂಡರು ಸೋಮವಾರದ ತನಕ ದಿಲ್ಲಿಯಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಈ ಮಧ್ಯೆ ರಾಜ್ಯದಿಂದ ತೆರಳಿರುವ ಮುಖಂಡರಿಗೆ ವಾಸ್ತವ್ಯ ಸಮಸ್ಯೆ ಉಂಟಾಗಿದ್ದು ವಿಶೇಷ ಸಭೆಯನ್ನು 2 ದಿನಗಳ ಬದಲಿಗೆ ಒಂದು ದಿನಕ್ಕೆ ಸೀಮಿತಗೊಳಿಸಬೇಕೆಂಬ ಚಿಂತನೆಯೂ ಇದೆ. ಒಂದು ವೇಳೆ ಆ ರೀತಿಯಾದರೆ ಭಾನುವಾರ ರಾತ್ರಿಯೇ ಎಲ್ಲರೂ ವಾಪಸಾಗಲಿದ್ದಾರೆ, ಇಲ್ಲದಿದ್ದರೆ ಸೋಮವಾರ ರಾತ್ರಿ ಹಿಂದಿರುಗುವರು ಎಂದು ಉನ್ನತ ಮೂಲಗಳು ತಿಳಿಸಿವೆ.

ಪಕ್ಷದ ಎಲ್ಲಾ ನಾಯಕರು ದಿಲ್ಲಿಯಲ್ಲಿಯೇ ಇರುವುದರಿಂದ ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆಯೂ ಸಮಾಲೋಚನೆ ನಡೆಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ