ಆ್ಯಪ್ನಗರ

ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಗೆ ಪ್ಲಾನ್: ಜಗ್ಗೇಶ್‌ ಹೇಳಿದ್ದೇನು ಗೊತ್ತಾ?

ನಟ, ನವರಸನಾಯಕ ಜಗ್ಗೇಶ್ ರಾಜ್ಯದಲ್ಲಿ ಬಿಜೆಪಿ ಸರಕಾರ ಮತ್ತೆ ಅಧಿಕಾರ ಹಿಡಿಯಲು ಸಜ್ಜಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಹಾಗೂ ರಾಷ್ಟ್ರದಲ್ಲಿ ಒಂದೇ ಸರಕಾರ ಇರಬೇಕು ಎಂದೂ ಟ್ವೀಟ್‌ ಮೂಲಕ ಜಗ್ಗೇಶ್‌ ಮಾಹಿತಿ ನೀಡಿದ್ದಾರೆ.

Vijaya Karnataka Web 24 Jul 2019, 11:18 am
ಬೆಂಗಳೂರು: ರಾಜ್ಯ ಸಮ್ಮಿಶ್ರ ಸರಕಾರ ಪತನವಾಗಿದ್ದು, ಬಿಜೆಪಿ ನೇತೃತ್ವದ ಸರಕಾರ ರಚನೆಯಾಗುವುದು ಖಚಿತವಾದಂತಿದೆ. ಈ ಹಿನ್ನೆಲೆ ಬಿಜೆಪಿ ನಾಯಕ ಹಾಗೂ ಚಿತ್ರನಟ ಜಗ್ಗೇಶ್‌ ಟ್ವೀಟ್‌ ಮಾಡಿದ್ದು, ಕನ್ನಡ ನಾಡಿಗೆ ಒಳ್ಳೆಯ ಕಾಲ ಬಂದಿದೆ ಎಂದಿದ್ದಾರೆ.
Vijaya Karnataka Web jaggesh


''ನಾನು ರಾಜ್ಯದ ಹಿತಕ್ಕಾಗಿ ಕೆಲವೊಮ್ಮೆ ಸ್ವಾರ್ಥ ಚಿಂತನೆ ಮಾಡುವೆ. ರಾಜ್ಯ - ರಾಷ್ಟ್ರದಲ್ಲಿ ಒಂದೇ ಸರಕಾರ ಇದ್ದಾಗ ಮಾತ್ರ ನಮ್ಮ ಪರಿಕಲ್ಪನೆಯ ಕನಸು ಸಫಲವಾಗಲಿದೆ. ಈಗ ಆ ಕಾಲ ಬಂದಿದೆ ಕನ್ನಡ ನಾಡಿಗೆ'' ಎಂದು ನವರಸ ನಾಯಕ ಹಾಗೂ ಬಿಜೆಪಿ ಮುಖಂಡ ಜಗ್ಗೇಶ್‌ ಟ್ವೀಟ್‌ ಮಾಡಿದ್ದಾರೆ.

ಇನ್ನು, ''ಕಳೆದುಕೊಂಡವರು ದುಃಖಿಸಬಹುದು. ಪಡೆದವರು ಹರ್ಷಿಸಬಹುದು. ದಯಮಾಡಿ ಸ್ವಾರ್ಥಕ್ಕಿಂತ ಸಮಾಜದ ಬಗ್ಗೆ ಚಿಂತಿಸುವ. ಇಲ್ಲದಿದ್ದರೆ ಕ್ಷಮೆಯಿರದು ರಾಜಕೀಯ ಬದುಕಿಗೆ'' ಎಂದೂ ನಟ, ರಾಜಕಾರಣಿ ಜಗ್ಗೇಶ್‌ ಟ್ವೀಟ್‌ ಮಾಡಿದ್ದಾರೆ.


ರಾಜಕೀಯ ಸೇರಿ ಹಲವು ವಿಚಾರಗಳ ಬಗ್ಗೆ ಜಗ್ಗೇಶ್‌ ಸಾಕಷ್ಟು ಟ್ವೀಟ್‌ಗಳನ್ನು ಮಾಡುತ್ತಿರುತ್ತಾರೆ. ಅವರ ಈ ಟ್ವೀಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಹಲವರು ನಟ ಜಗ್ಗೇಶ್‌ ಟ್ವೀಟ್‌ ಅನ್ನು ಹೊಗಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ