ಆ್ಯಪ್ನಗರ

ಕುಮಾರಸ್ವಾಮಿ ಗೂಂಡಾಗಿರಿ ಸರಿಯಲ್ಲ: ಈಶ್ವರಪ್ಪ

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಸ್ಥಾನ ಗರಿಮೆಯನ್ನು ಮರೆತು ‘ಗೂಂಡಾ’ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Vijaya Karnataka Web 21 Sep 2018, 4:46 pm
ಶಿವಮೊಗ್ಗ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಸ್ಥಾನ ಗರಿಮೆಯನ್ನು ಮರೆತು ‘ಗೂಂಡಾ’ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Vijaya Karnataka Web hdk cm2


ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರನ್ನು ಹಿಡಿದಿಟ್ಟುಕೊಳ್ಳುವುದನ್ನು ಬಿಟ್ಟು ‘ಗೂಂಡಾಗಿರಿ’ ತೋರುತ್ತಿರುವುದು ಸರಿಯಲ್ಲ. ರಾಜ್ಯದಲ್ಲಿ ಪ್ರಜಾಪ್ರಭುತ್ವಕ್ಕೆ ಅಪಾಯ ಇದ್ದು ಗೂಂಡಾಗಳನ್ನು ಬಳಸಿಕೊಂಡು ಹಲ್ಲೆ ಮತ್ತು ದಾಳಿ ಮಾಡುವ ಪ್ರವತ್ತಿ ಕಂಡುಬರುತ್ತಿದೆ ಎಂದು ಆರೋಪಿಸಿದರು.

ಸಿಎಂ ವಿರುದ್ಧ ಕ್ರಮ ಕೈಗೊಳ್ಳಿ: ಗೋವಿಂದ ಕಾರಜೋಳ
ಸಿಎಂ ಕುಮಾರಸ್ವಾಮಿ ಸಂವಿಧಾನದ ವಿರೋಧಿ ಕೆಲ್ಸಾ ಮಾಡ್ತಾ ಇದ್ದಾರೆ. ಸ್ವತಂತ್ರ ಭಾರತ ಇತಿಹಾಸದಲ್ಲಿ ಹಿಂದೆಂದೂ ಕಾಣದ ಅಧಿಕಾರ ನೋಡ್ತಾ ಇದ್ದೀನಿ ಎಂದು ಗೋವಿಂದ ಕಾರಜೋಳ ಸಿಎಂ ವಿರುದ್ಧ ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಅರಾಜಕತೆ ಎದ್ದು ಕಾಣ್ತಾ ಇದೆ. ನಿಮಗೆ ಆಡಳಿತ ಮಾಡಲು ಆಗದೆ, ನಿಮ್ಮ ಶಾಸಕರನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಆಗದೆ ಈ ರೀತಿ ಹೇಳ್ತಾ ಇದ್ದಾರೆ. ಇದು ಹತಾಶೆಯ ಹೇಳಿಕೆಯಾಗಿದೆ. ಕೂಡಲೇ ಪೊಲೀಸರು ಸಿಎಂ ವಿರುದ್ಧ ಸೂಕ್ತ ಕ್ರಮಕೈಗೊಬೇಕು ಎಂದು ಗೋವಿಂದ ಕಾರಜೋಳ ಹೇಳಿದ್ದಾರೆ.

ಸಿಎಂ ವಿರುದ್ಧ ಡಿಜಿಪಿಗೆ ದೂರು:
ದಂಗೆ ಎಬ್ಬಿಸ್ತೀನಿ ಅನ್ನೋ ಸಿಎಂ ಕುಮಾರಸ್ವಾಮಿ ಹೇಳಿಕೆ ಬಗ್ಗೆ ರಾಜ್ಯದೆಲ್ಲೆಡೆ ವಿರೋಧ ಕೇಳಿಬಂದಿರುವ ಬೆನ್ನಲ್ಲೇ, ಸಂಸದೆ ಶೋಭಾ ಕರಂದ್ಲಾಜೆ ಪೊಲೀಸ್ ಮಹಾನಿರ್ದೇಶಕಿ‌ ನೀಲಮಣಿ ರಾಜುಗೆ ದೂರು ನೀಡಿದ್ದಾರೆ.

ದೂರು ನೀಡಿದ ಬಳಿಕ ಹೇಳಿಕೆ ನೀಡಿದ ಶೋಭಾ ಅವರು, ಮುಖ್ಯಮಂತ್ರಿಗೆ ರಾಜಕೀಯ ಹತಾಶೆ ಆಗಿದೆ. ದಂಗೆ ಎಬ್ಬೀಸ್ತೀನಿ ಅಂದ್ರೆ ಅದು ಸಂವಿಧಾ‌ನ ವಿರೋದಿ ನಡೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಗೂಂಡಾಗಳು ಗುರುವಾರ ಬಿಎಸ್ ವೈ ಮನೆಗೆ ನುಗ್ಗಿದ್ರು. ಪೊಲೀಸ್ ಇಲಾಖೆ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲಾಗಿದೆ. ಇದಕ್ಕೆ ಸಿಎಂ ಕುಮಾರಸ್ವಾಮಿ ನೇರ ಹೊಣೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಗುರುವಾರ ರಾಜ್ಯದಲ್ಲಿ ಹಿಂಸಾತ್ಮಕ ಪ್ರತಿಭಟನೆ ಮಾಡಿದವರ ಮೇಲೆ ಕ್ರಮ ಕೈಗೊಳ್ಬೇಕು ಮತ್ತು ರಾಜ್ಯದ್ರೋಹದ ಅಡಿಯಲ್ಲಿ ದೂರು ದಾಖಲಿಸಬೇಕು ಎಂದು ಶೋಭಾ ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ