ಆ್ಯಪ್ನಗರ

ಅನರ್ಹರಿಗೆ ಟಿಕೆಟ್‌ ನೀಡಲು ವಿರೋಧ, ಬಿಜೆಪಿ ಮೂಲವಾಸಿಗಳ ಸಭೆ ನಾಳೆ: 'ಕೈ' ಜತೆಗೂಡಲು ಚಿಂತನೆ

ಉಪಚುನಾವಣೆಯಲ್ಲಿ ಬಂಡಾಯ ಸಾರುವವರನ್ನು ಪರಿಗಣನೆಗೆ ತೆಗೆದುಕೊಳ್ಳಬಾರದೆಂಬ ಲೆಕ್ಕಾಚಾರ ಬಿಜೆಪಿಯಲ್ಲಿತ್ತು. ಆದರೆ ಮಂಗಳವಾರದಿಂದ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳು ಬೇರೆ ರೀತಿಯ ಸಂದೇಶ ರವಾನೆ ಮಾಡುತ್ತಿವೆ.

Vijaya Karnataka Web 25 Sep 2019, 10:36 pm
ಬೆಂಗಳೂರು : ಅನರ್ಹ ಶಾಸಕರು ಅಥವಾ ಅವರ ಕುಟುಂಬ ವರ್ಗಕ್ಕೆ ಟಿಕೆಟ್‌ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಪರಾಜಿತ ಅಭ್ಯರ್ಥಿಗಳು ಗುರುವಾರ ಸ್ಥಳೀಯವಾಗಿ ತಮ್ಮ ಬೆಂಬಲಿಗರ ಸಭೆ ಕರೆದಿರುವುದು ಈಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಪೈಕಿ ಕೆಲವರು ಕಾಂಗ್ರೆಸ್‌ ಮುಖಂಡರ ರಹಸ್ಯ ಸಂಪರ್ಕದಲ್ಲಿರುವುದು ಕೇಸರಿ ಪಾಳಯದಲ್ಲಿಆತಂಕ ಮೂಡಿಸಿದೆ.
Vijaya Karnataka Web ಬಿಜೆಪಿ
ಬಿಜೆಪಿ


ಉಪಚುನಾವಣೆ ನಡೆಯುವ 15 ಕ್ಷೇತ್ರಗಳ ಪೈಕಿ 12ರಲ್ಲಿಗೆಲ್ಲುವ ವಿಶ್ವಾಸ ಹೊಂದಿದ್ದ ಬಿಜೆಪಿಗೆ ಪಕ್ಷನಿಷ್ಠರು ನೀಡುತ್ತಿರುವ ಹೊಡೆತ ಆರಂಭದಲ್ಲೇ ಆಘಾತ ನೀಡಿದೆ. ನಾವು ಸೋತರೂ ಚಿಂತೆಯಿಲ್ಲ. ಆದರೆ ಬಿಜೆಪಿಗೆ ಬರುವ ಅನರ್ಹ ಶಾಸಕರು ಮಾತ್ರ ಗೆಲ್ಲಲೇಬಾರದು ಎಂಬ ಆಕ್ರೋಶವನ್ನು ಪರಾಜಿತ ಅಭ್ಯರ್ಥಿಗಳು ಹೊರ ಹಾಕಿದ್ದಾರೆ. ಟಿಕೆಟ್‌ ವಿಚಾರದಲ್ಲಿಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿತೆಗೆದುಕೊಳ್ಳುವ ನಿರ್ಧಾರ ಹಾಗೂ ಸುಪ್ರೀಂ ಕೋರ್ಟ್‌ ತೀರ್ಪು ಆಧರಿಸಿ ಬಹುತೇಕರು ತಮ್ಮ ದಾರಿ ಹುಡುಕಿಕೊಳ್ಳುವ ಚಿಂತನೆ ನಡೆಸಿದ್ದಾರೆ. ಗುರುವಾರ ಆಯಾ ಕ್ಷೇತ್ರದಲ್ಲಿಮಹತ್ವದ ಸಭೆ ನಡೆಯಲಿದ್ದು, ಹೆಚ್ಚಿನವರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ.

ಬಿಜೆಪಿ ಪರಾಜಿತ ಅಭ್ಯರ್ಥಿಗಳಿಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕೆಂಪುಹಾಸಿನ ಸ್ವಾಗತ ನೀಡುವ ಲಕ್ಷಣ ಗೋಚರಿಸಿದೆ. ಆಗ ಎಲ್ಲಕ್ಷೇತ್ರಗಳಲ್ಲೂಜಿದ್ದಾಜಿದ್ದಿನ ಹೋರಾಟ ನಡೆಯುವುದು ಖಚಿತ. ಹೊಸಕೋಟೆಯಲ್ಲಿಶರತ್‌ಬಚ್ಚೇಗೌಡ ಗುರುವಾರ ಬೆಂಬಲಿಗರ ಸಭೆ ಕರೆದಿದ್ದಾರೆ. ಒಂದು ವೇಳೆ ಮಾಜಿ ಸಚಿವ ಎಂ.ಟಿ.ಬಿ.ನಾಗರಾಜ್‌ಗೆ ಬಿಜೆಪಿ ಮಣೆ ಹಾಕಿದರೆ ಅವರು ಪಕ್ಷಕ್ಕೆ ಗುಡ್‌ಬೈ ಹೇಳುವುದು ಖಚಿತ ಎನ್ನಲಾಗುತ್ತಿದೆ. ಕೆ.ಆರ್‌.ಪುರಂನಲ್ಲೂಮಾಜಿ ಶಾಸಕ ನಂದೀಶ್‌ರೆಡ್ಡಿ ಬೆಂಬಲಿಗರ ಸಭೆ ಕರೆದಿದ್ದಾರೆ. ಶಿವಾಜಿನಗರದಲ್ಲಿಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕೂಡ ಅನರ್ಹ ಶಾಸಕ ರೋಷನ್‌ಬೇಗ್‌ಗೆ ಟಿಕೆಟ್‌ ನೀಡಲು ವಿರೋಧ ವ್ಯಕ್ತಪಡಿಸಿದ್ದಾರೆ.

ಹಿರೇಕೆರೂರಿನಲ್ಲಿಮಾಜಿ ಶಾಸಕ ಯು.ಬಿ.ಬಣಕಾರ್‌ ಬಂಡಾಯದ ಬಾವುಟ ಹಾರಿಸಿದ್ದಾರೆ. ಅವರನ್ನು ಸಮಾಧಾನ ಪಡಿಸಲು ಸಿಎಂ ಯಡಿಯೂರಪ್ಪ ನಡೆಸಿದ ಪ್ರಯತ್ನ ಮತ್ತೆ ವಿಫಲವಾಗಿದೆ. ಬಣಕಾರ್‌ ಸೇರಿದಂತೆ ಬಹುತೇಕರು ಗುರುವಾರ ನಿರ್ಧಾರ ಪ್ರಕಟಿಸಲಿದ್ದಾರೆ. ಮಂಗಳವಾರ ತಡ ರಾತ್ರಿ ಯಡಿಯೂರಪ್ಪ ನಿವಾಸದಲ್ಲಿಬಣಕಾರ್‌ ಜತೆ ನಡೆಸಿದ ಮಾತುಕತೆ ಫಲಪ್ರದವಾಗಿಲ್ಲ. ಶಾಸಕ ಸ್ಥಾನ ತ್ಯಾಗ ಮಾಡುವ ಮೂಲಕ ಬಿ.ಸಿ.ಪಾಟೀಲ್‌ ಅವರು ಬಿಜೆಪಿ ಸರಕಾರ ರಚನೆಗೆ ಸಹಕಾರ ನೀಡಿದ್ದಾರೆ, ಅವರಿಗೆ ನಾವು ಟಿಕೆಟ್‌ ಕೊಟ್ಟು ಗೆಲ್ಲಿಸಿಕೊಳ್ಳಬೇಕಾಗಿದೆ. ಈ ಸಲ ನೀವು ಅವರೊಂದಿಗೆ ಸಹಕರಿಸಿ ಗೆಲ್ಲಿಸಿಕೊಂಡು ಬನ್ನಿ ಎಂದು ಹೇಳಿದರೂ ಬಣಕಾರ್‌ ಒಪ್ಪಿಲ್ಲ. ಇದು ಸ್ವತಃ ಯಡಿಯೂರಪ್ಪ ಅವರನ್ನು ಆತಂಕಕ್ಕೆ ದೂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ