ಆ್ಯಪ್ನಗರ

ಎಲ್ಲಾ ಸಮುದಾಯದ ಸದಸ್ಯತ್ವಕ್ಕೆ ಬಿಜೆಪಿ ಆದ್ಯತೆ

ರಾಜ್ಯದ ಯಾವುದೇ ಜಾತಿಯೂ ಬಿಜೆಪಿ ಸಂಪರ್ಕದಿಂದ ಹೊರತಾಗಿರಬಾರದು...

Vijaya Karnataka 23 Jun 2019, 5:00 am
ಬೆಂಗಳೂರು: ರಾಜ್ಯದ ಯಾವುದೇ ಜಾತಿಯೂ ಬಿಜೆಪಿ ಸಂಪರ್ಕದಿಂದ ಹೊರತಾಗಿರಬಾರದು. ಬಿಜೆಪಿ ಕೇವಲ ನಾಲ್ಕೈದು ದೊಡ್ಡ ಜಾತಿಗೆ ಸೇರಿದ್ದು ಎಂಬ ವಾದವನ್ನು ಸುಳ್ಳಾಗಿಸಬೇಕು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್‌ ರಾವ್‌ ಸೂಚನೆ ನೀಡಿದ್ದಾರೆ.
Vijaya Karnataka Web 2206-2-2-200 (4)


ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿ, ''ಕರ್ನಾಟಕದಲ್ಲಿ ಬಿಜೆಪಿಗೆ ಶಾಶ್ವತ ತಳಹದಿ ರೂಪಿಸಬೇಕಿದೆ. ಇದಕ್ಕೆ ಲೋಕಸಭಾ ಚುನಾವಣೆ ಪೂರಕವಾದ ವಾತಾವರಣ ಕಲ್ಪಿಸಿದೆ. ರಾಜ್ಯದಲ್ಲಿ ಈಗಾಗಲೇ 80 ಲಕ್ಷ ಸದಸ್ಯರನ್ನು ಬಿಜೆಪಿ ಹೊಂದಿದ್ದು, ಮುಂದಿನ ಒಂದು ತಿಂಗಳು ಅವಧಿಯಲ್ಲಿ 36 ಲಕ್ಷ ಹೊಸ ಸದಸ್ಯರನ್ನು ನೋಂದಣಿ ಮಾಡಬೇಕು,'' ಎಂದು ಹೇಳಿದರು.

''ಬಿಜೆಪಿಯ ವಿಸ್ತಾರಕರು ಸಾವಿರ ಜನಸಂಖ್ಯೆ ಇರುವ ಸಮುದಾಯವನ್ನೂ ಸಂಪರ್ಕಿಸಿ ಅಲ್ಲಿ ನಮ್ಮ ಸದಸ್ಯರ ಸೃಷ್ಟಿ ಮಾಡಬೇಕು. ಬಿಜೆಪಿ ಕೇವಲ ನಾಲ್ಕೈದು ಜಾತಿಗಳಿಗೆ ಸಂಬಂಧಪಟ್ಟ ಪಕ್ಷ ಎಂಬ ಆರೋಪವನ್ನು ಸುಳ್ಳಾಗಿಸಬೇಕಿದೆ. ರಾಜ್ಯದಲ್ಲಿ ಈ ಬಾರಿ ಶೇ.51.18ರಷ್ಟು ಸರಾಸರಿ ಮತಗಳು ಬಿಜೆಪಿಗೆ ಲಭ್ಯವಾಗಿದ್ದು, ಮುಂಬರುವ ದಿನಗಳಲ್ಲಿ ಅದು ಶೇ.60ಕ್ಕೆ ಹೆಚ್ಚಳವಾಗಬೇಕು,'' ಎಂದು ಕರೆ ನೀಡಿದರು.

''ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ನ್ನು ಧೂಳಿಪಟಗೊಳಿಸಿ ಸತತ ಎರಡನೇ ಬಾರಿಗೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಉತ್ತರ, ಈಶಾನ್ಯ, ವಾಯವ್ಯ, ಪೂರ್ವ ಹಾಗೂ ಪಶ್ಚಿಮ ಭಾರತದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಆದರೆ ದಕ್ಷಿಣದಲ್ಲಿ ಸಂಪೂರ್ಣವಾಗಿ ಗೆಲುವು ಸಾಧ್ಯವಾಗಿಲ್ಲ. ಇಡೀ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರ ಸ್ಥಾಪಿಸಲೇಬೇಕು. ಇಂಥದೊಂದು ರಾಜಕೀಯ ಪರಿವರ್ತನೆ ಅನಿವಾರ್ಯವಾಗಿದೆ,''ಎಂದು ಹೇಳಿದರು.

ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, '' ಬರಗಾಲದ ವೇಳೆ ಜನರ ಪರ ನಿಲ್ಲದೇ ಇದ್ದರೆ ನಮ್ಮನ್ನು ಕ್ಷಮಿಸುವುದಿಲ್ಲ. ತಕ್ಷಣ ಕಾರ್ಯಕರ್ತರು ಬರ ಪ್ರದೇಶಕ್ಕೆ ಭೇಟಿ ನೀಡಬೇಕು,''ಎಂದರು.

ರಾವ್‌ ನೀಡಿದ ಸೂಚನೆ

ಒಂದು ತಿಂಗಳಲ್ಲಿ 36 ಲಕ್ಷ ಹೊಸ ಸದಸ್ಯರ ನೋಂದಣಿ

ಸಾವಿರ ಜನಸಂಖ್ಯೆಯ ಸಮುದಾಯವನ್ನೂ ವಿಸ್ತಾರಕರು ಸಂಪರ್ಕಿಸಬೇಕು

ಬಿಜೆಪಿ ಕೇವಲ ನಾಲ್ಕೈದು ಜಾತಿಗಳಿಗೆ ಪಕ್ಷ ಎಂ ಆರೋಪ ತೊಲಗಿಸಿ

ಮುಂಬರುವ ದಿನಗಳಲ್ಲಿ ಬಿಜೆಪಿ ಮತಗಳಿಕೆ ಶೇ.60ಕ್ಕೇರಬೇಕು

ಇಡೀ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರ ಸ್ಥಾಪಿಸಲೇಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ