ಆ್ಯಪ್ನಗರ

ಬಿಜೆಪಿ ಸಂಸದರು ರಾಜ್ಯ ದ್ರೋಹಿಗಳು - ಡಿಕೆ ಶಿವಕುಮಾರ್‌ ವಾಗ್ದಾಳಿ

ಜಿಎಸ್‌ಟಿ, ನೆರೆ ಮುಂತಾದ ವಿಚಾರಗಳಲ್ಲಿ ಕೇಂದ್ರ ಸರಕಾರದ ನೆರವು ರಾಜ್ಯಕ್ಕೆ ಸಿಗುತ್ತಿಲ್ಲ. ರಾಜ್ಯದಿಂದ 25 ಬಿಜೆಪಿ ಸಂಸದರು ಮೋದಿ ಎದುರು ಮಾತನಾಡುತ್ತಿಲ್ಲ. ಮುಖ್ಯಮಂತ್ರಿಗಳಿಗೆ ಸಾಥ್‌ ಸಹ ನೀಡದೇ ರಾಜ್ಯಕ್ಕೆ ದ್ರೋಹ ಮಾಡುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್‌ ಕಿಡಿಕಾರಿದ್ದಾರೆ.

Vijaya Karnataka 18 Sep 2020, 9:18 pm
ಬೆಂಗಳೂರು: ಕೇಂದ್ರ ಸರಕಾರದಿಂದ ಸೂಕ್ತ ನೆರವು ಸಿಗದೇ ಸಿಎಂ ಯಡಿಯೂರಪ್ಪ ಅಸಹಾಯಕರಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ವ್ಯಂಗ್ಯವಾಡಿದ್ದಾರೆ.
Vijaya Karnataka Web DK Shivakumar


ಸುದ್ದಿಗಾರರ ಜೊತೆ ಮಾತನಾಡಿ, "ಜಿಎಸ್‌ಟಿ, ನೆರೆ ಮುಂತಾದ ವಿಚಾರಗಳಲ್ಲಿ ಕೇಂದ್ರ ಸರಕಾರದ ನೆರವು ಸಿಗುತ್ತಿಲ್ಲ. ರಾಜ್ಯದಿಂದ 25 ಬಿಜೆಪಿ ಸಂಸದರು ಮೋದಿ ಎದುರು ಮಾತನಾಡುತ್ತಿಲ್ಲ. ಸಿಎಂಗೆ ಸಾಥ್‌ ಸಹ ನೀಡದೇ ರಾಜ್ಯಕ್ಕೆ ದ್ರೋಹ ಮಾಡುತ್ತಿದ್ದಾರೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಈ ಹಿಂದೆಯೂ ಬಿಜೆಪಿ ಸಂಸದರು ರಾಜ್ಯದ ಪರವಾಗಿ ಮಾತನಾಡುತ್ತಿರಲಿಲ್ಲ. ಈಗ ಕುರ್ಚಿ ಭಯದಿಂದ ಮೌನಕ್ಕೆ ಶರಣಾಗಿದ್ದಾರೆ. ಈ ಬಗ್ಗೆ ಜನರೇ ಅವರನ್ನು ಪ್ರಶ್ನೆ ಮಾಡಬೇಕು," ಎಂದು ಹೇಳಿದರು.

‘ನಿಮ್ಮ ನಾಯಕರ ಎದೆಯಳತೆಯ ಮುಂದೆ ಮಣಿಯದೆ ಧೈರ್ಯದಿಂದ ರಾಜ್ಯದ ಪಾಲು ಕೇಳಿ’; ಸಿಎಂಗೆ ಸಿದ್ದರಾಮಯ್ಯ ಆಗ್ರಹ

ಅನ್ಯಾಯ ನಿಜ

ಎಐಸಿಸಿಯಲ್ಲಿ ಸೂಕ್ತ ಸ್ಥಾನಮಾನ ಸಿಗದ ಹಿನ್ನೆಲೆಯಲ್ಲಿ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಬೇಸರಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, "ರೆಡ್ಡಿ ನನ್ನಷ್ಟೇ ಹಿರಿಯ ನಾಯಕ. ಅವರಿಗೆ ಎಲ್ಲಾ ಅರ್ಹತೆಗಳಿವೆ. ಹೈಕಮಾಂಡ್‌ ಗಮನಕ್ಕೆ ಈ ವಿಚಾರ ತರುತ್ತೇನೆ. ಅವರಿಗೆ ಆದ ಅನ್ಯಾಯ ಸರಿಪಡಿಸುವ ಕೆಲಸ ಮಾಡುತ್ತೇನೆ," ಎಂದರು.

ಸದನದಲ್ಲಿ ಪ್ರಸ್ತಾಪ

ಸದನದಲ್ಲಿಪ್ರ ಸ್ತಾಪಿಸಲು ಸಾಕಷ್ಟು ವಿಚಾರಗಳಿವೆ. ಆದರೆ ಸರಕಾರ ಮಂಡಿಸಲು ಸಿದ್ಧಪಡಿಸಿಕೊಂಡಿರುವ ವಿಧೇಯಕಗಳ ಸಂಖ್ಯೆ ನೋಡಿದರೆ ಗಾಬರಿಯಾಗುತ್ತದೆ. ಸರಕಾರದಲ್ಲಿ ಸಮನ್ವಯ ಸರಿಯಾಗಿಲ್ಲ. ಯಾರದೋ ಇಲಾಖೆಯಲ್ಲಿ ಇನ್ಯಾರೋ ಕೈಯಾಡಿಸುತ್ತಾರೆ ಎಂದು ವ್ಯಂಗ್ಯವಾಡಿದರು.

ಮಂಗಳಮುಖಿಯರ ಭೇಟಿ

ಮಂಗಳಮುಖಿಯರ 'ಒಂದೆಡೆ' ಸಂಘಟನೆ ಸಂಸ್ಥಾಪಕಿ ಡಾ.ಅಕಾಯಿ ಪದ್ಮಶಾಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಶಾಸಕಿ ಸೌಮ್ಯಾ ರೆಡ್ಡಿ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಡಾ.ಬಿ.ಎಲ್‌. ಶಂಕರ್‌ ಜೊತೆಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ