ಆ್ಯಪ್ನಗರ

ಸರಕಾರ ಪ್ರಾಯೋಜಿತ ಬಂದ್‌ಗೆ ಬೆಂಬಲ ಬೇಡ: ಬಿಜೆಪಿ

ತೈಲೋದ್ಯಮದಲ್ಲಿ ದೇಶ ಸ್ವಾವಲಂಬಿಯಾಗದೇ ಇರುವುದಕ್ಕೆ ಕಾಂಗ್ರೆಸ್‌ ಕಾರಣವಾಗಿದ್ದು, ಭಾರತ್‌ ಬಂದ್‌ಗೆ ಕರೆ ನೀಡುವ ನೈತಿಕ ಹಕ್ಕು ಕಳೆದುಕೊಂಡಿದೆ ಎಂದು ಬಿಜೆಪಿ ಎದಿರೇಟು ನೀಡಿದೆ...

Vijaya Karnataka 10 Sep 2018, 5:00 am
ಬೆಂಗಳೂರು : ತೈಲೋದ್ಯಮದಲ್ಲಿ ದೇಶ ಸ್ವಾವಲಂಬಿಯಾಗದೇ ಇರುವುದಕ್ಕೆ ಕಾಂಗ್ರೆಸ್‌ ಕಾರಣವಾಗಿದ್ದು, ಭಾರತ್‌ ಬಂದ್‌ಗೆ ಕರೆ ನೀಡುವ ನೈತಿಕ ಹಕ್ಕು ಕಳೆದುಕೊಂಡಿದೆ ಎಂದು ಬಿಜೆಪಿ ಎದಿರೇಟು ನೀಡಿದೆ.
Vijaya Karnataka Web ravi


ಕಾಂಗ್ರೆಸ್‌ ಹಾಗೂ ಮಿತ್ರಪಕ್ಷಗಳು ಕರೆ ನೀಡಿರುವ ಭಾರತ್‌ ಬಂದ್‌ ವಾಪಸ್‌ ಪಡೆಯಬೇಕು.ಇಲ್ಲದಿದ್ದರೆ ದೇಶದ ಜನತೆ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಭಾರತ್‌ ಬಂದ್‌ಗೆ ಬಿಜೆಪಿ ಸಂಪೂರ್ಣ ವಿರೋಧ ವ್ಯಕ್ತಪಡಿಸುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹಾಗೂ ಆರ್ಥಿಕ ಸ್ಥಿತ್ಯಂತರಗಳ ಕಾರಣದಿಂದ ಈಗ ಪೆಟ್ರೋಲ್‌ ದರ ಲೀಟರ್‌ಗೆ 83 ರೂ.ಗಳಿದ್ದು, ಯುಪಿಎ ಸರ್ಕಾರದ ಅವಧಿಯಲ್ಲೂ ಲೀಟರ್‌ಗೆ 81 ರೂ.ಗಳವರೆಗೆ ಹೆಚ್ಚಳವಾಗಿತ್ತು ಎಂಬುದನ್ನು ಕಾಂಗ್ರೆಸ್‌ ಮರೆಯಬಾರದು. ಡಾಲರ್‌ ಬೆಲೆ ಹೆಚ್ಚಳದಿಂದ ರೂಪಾಯಿ ದರ ಕುಸಿದ ಪರಿಣಾಮ ಅಧಿಕ ವೆಚ್ಚ ಮಾಡಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತ ಖರೀದಿ ಮಾಡುತ್ತಿದೆ. ಈ ಕಟುಸತ್ಯವನ್ನು ಕಾಂಗ್ರೆಸ್‌ ಹಾಗೂ ಅವರಿಗೆ ಬೆಂಬಲ ನೀಡುತ್ತಿರುವ ಜೆಡಿಎಸ್‌ನಂತಹ ಪಕ್ಷಗಳು ಜನತೆಯಿಂದ ಮುಚ್ಚಿಟ್ಟು, ರಾಜಕೀಯ ದ್ವೇಷಕ್ಕಾಗಿ ಭಾರತ್‌ ಬಂದ್‌ ಕರೆದಿವೆ,'' ಎಂದು ದೂರಿದರು.

''ಕಾಂಗ್ರೆಸ್‌ ಅವಧಿಯಲ್ಲಿ ಜನವಿರೋಧಿ ನೀತಿಗಳಿಂದ ಜನರು ತೀವ್ರ ತೊಂದರೆಗೊಳಗಾಗಿದ್ದರು. ಹೀಗಾಗಿ ಮನಮೋಹನ್‌ ಸಿಂಗ್‌, ಸೋನಿಯಾ ಗಾಂಧಿ, ದಿನೇಶ್‌ಗುಂಡೂರಾವ್‌, ಕುಮಾರಸ್ವಾಮಿ ಅವರ ವಿರುದ್ಧ ಭಾರತ್‌ ಬಂದ್‌ಗೆ ಕರೆ ನೀಡಬೇಕಿದೆ. ಸರ್ಕಾರಿ ಪ್ರಾಯೋಜಿತ ಬಂದ್‌ಗೆ ಸಾಮಾನ್ಯ ಜನರು, ಶಾಲಾ ಆಡಳಿತ ಮಂಡಳಿ, ವ್ಯಾಪಾರಿಗಳು, ಉದ್ಯಮಿಗಳು, ಕಾರ್ಮಿಕರು ಅವಕಾಶ ನೀಡಬೇಡಿ,''ಎಂದು ಮನವಿ ಮಾಡಿದ್ದಾರೆ.

ಬಿಜೆಪಿ ಬಿಡುಗಡೆ ಮಾಡಿರುವ ಬೆಲೆ ಏರಿಕೆ ಹೋಲಿಕೆ :

ವಸ್ತು ಯುಪಿಎ ಎನ್‌ಡಿಎ
ಈರುಳ್ಳಿ 100ರೂ. 20ರೂ.
ಟೊಮೆಟೊ 100ರೂ. 20ರೂ.
ಸಕ್ಕರೆ 45 ರೂ. 35 ರೂ.
ಎಲ್‌ಪಿಜಿ 901ರೂ. 845ರೂ.
ಬೇಳೆ 85ರೂ. 65 ರೂ.
ಎಲ್‌ಇಡಿ 400 ರೂ. 60 ರೂ.
ಇನ್ಸುರೆನ್ಸ್‌ ಪ್ರೀಮಿಯಂ 5000 ರೂ. 330 ರೂ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ